Advertisement
ಕಡಿಮೆ ದುಪ್ಪಟ್ಟು ಸಂಬಳ ನೀಡುತ್ತಿದ್ದಾಳೆ! :
Related Articles
Advertisement
“ನಾನು ಆಗಷ್ಟೇ ಹೈನುಗಾರಿಕೆ ಆರಂಭಿಸಿದೆ. ಅದರಿಂದ ತಾಲೂಕು ಮಟ್ಟದಲ್ಲಿ ಆತ್ಮ ಯೋಜನೆ ಅಡಿ 10 ಸಾವಿರ ನಗದು ಪ್ರಶಸ್ತಿ ಬಂದಿತ್ತು. ಆ ಹಣದಿಂದ 5 ಹುಂಜ, 15 ಕೋಳಿ ಖರೀದಿಸಿದೆ. ಅದರಿಂದ ಒಂದು ವರ್ಷದಲ್ಲಿ 180 ಕೋಳಿಗಳಾದವು. ಆ ಕೋಳಿಗಳು ಮತ್ತು ಮೊಟ್ಟೆಗಳನ್ನು ಮಾರಾಟ ಮಾಡಲಿಲ್ಲ. ಬದಲಿಗೆ ಹೊಸ ರೀತಿ ಮೌಲ್ಯವರ್ಧನೆ ಮಾಡಿದೆ. ಹೇಗೆಂದರೆ ಸುತ್ತಲಿನ ಕಚೇರಿಗಳು, ಫ್ಯಾಕ್ಟರಿಗಳಿಗೆ, ಹೊಟೇಲ್‌ಗಳಿಗೆ ಕ್ಯಾಟರಿಂಗ್ ಶುರು ಮಾಡಿದೆ. ಪ್ರತೀ ರವಿವಾರ, ಮಂಗಳವಾರ ಮಾಂಸಾಹಾರಿ ಅಡುಗೆ ತಯಾರಿಸಿ ಪೂರೈಸುತ್ತೇನೆ. ಅಕ್ಕಿರೊಟ್ಟಿ, ರಾಗಿರೊಟ್ಟಿಗಳನ್ನೂ ಮಾಡುತ್ತೇನೆ’ ಎಂದು ಕವಿತಾ ತಮ್ಮ ಯಶೋಗಾಥೆಯನ್ನು ವಿವರಿಸುತ್ತಾರೆ.
ಒಂದು ಹಸುವಿನಿಂದ ಆರಂಭ:
ಕವಿತಾ ಓದಿದ್ದು ಎಸೆಸೆಲ್ಸಿ. ಕೆಲವು ದಶಕಗಳ ಹಿಂದೆ ಅವರ ಮಾವ 4 ಎಕರೆ ಜಮೀನನ್ನು ಹಸ್ತಾಂತರಿಸಿದಾಗ ಆ ಜಮೀನು ಅಕ್ಷರಶಃ ಬಂಡೆಯಾಗಿತ್ತು. ಅದನ್ನು ಹದ ಮಾಡಿ ಸತತ ನಾಲ್ಕು ವರ್ಷ ನಷ್ಟ ಅನುಭವಿಸಿದರು. ವೈನ್‌ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿಯೂ ಕೆಲಸ ಬಿಟ್ಟು ಕೃಷಿಗೆ ನಿಂತಿದ್ದರು. ಒಂದೆಡೆ ಕೈಹಿಡಿಯದ ಕೃಷಿ; ಮತ್ತೂಂದೆಡೆ ಗಳಿಕೆಯೂ ಇಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. “ಇದೆಲ್ಲದರ ಮಧ್ಯೆ 30 ಸಾವಿರ ಸಾಲ ಮಾಡಿ, ಒಂದು ಹಸು ಖರೀದಿಸಿದೆ. ಅಲ್ಲಿಂದ ಆರಂಭವಾಯಿತು ನಿಜವಾದ ಕೃಷಿ ಪಯಣ. ವರ್ಷದಲ್ಲೇ ಹಸುಗಳ ಸಂಖ್ಯೆ ಹೆಚ್ಚಿತು. ಕೋಳಿಗಳು ಬಂದವು. ಜಮೀನಿನಲ್ಲಿ ಬೆಳೆ ಕೂಡ ಬರಲು ಆರಂಭಿಸಿತು. ಇಂದು 9 ಎಕರೆ ಜಮೀನಿದೆ. ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯ, ಅಡಿಕೆ, ತೆಂಗು, ದಾಳಿಂಬೆ, ಬಾಳೆ, ಚಕ್ಕೋತ ಮತ್ತಿತರ ಬೆಳೆ ಬೆಳೆಯುತ್ತಿದ್ದು, ಹೂವಿನ ಬೆಳೆ, ಬದುವಿನಲ್ಲಿ ಸಿಲ್ವರ್ ಓಕ್, ಬೇವು, ರಕ್ತಚಂದನ, ಹೊಂಗೆ ಮರಗಳು ಬೆಳೆದುನಿಂತಿವೆ. ಕುರಿ ಸಾಕಾಣಿಕೆ ಕೂಡ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕವಿತಾ.
“ನಾನು ಹುಣಸೂರಿನಲ್ಲಿ ಸಂಬಂಧಿಕರ ವೈನ್‌ಶಾಪ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದೆ. ಈಗ ಅಮ್ಮನೊಂದಿಗೇ ವ್ಯವಸಾಯದಲ್ಲಿ ನೆರವಾಗುತ್ತಿದ್ದೇನೆ. ಅಲ್ಲಿಗಿಂತ ಇಲ್ಲಿ ಹೆಚ್ಚು ಆದಾಯ ಗಳಿಸುತ್ತಿದ್ದೇನೆ. ಕೆಲಸ ನನಗೆ ತೃಪ್ತಿಯೂ ತಂದಿದೆ’ ಎಂದು ಕವಿತಾ ಅವರ ಮಗ ಅಕ್ಷಯ್ ತಿಳಿಸಿದ್ದಾರೆ. ಕವಿತಾರ ಸಾಧನೆ ಗುರುತಿಸಿ, ಗುರುವಾರ ಕೃಷಿ ಮೇಳದಲ್ಲಿ ಕೆನರಾಬ್ಯಾಂಕ್ ರಾಜ್ಯಮಟ್ಟದ “ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಿತು.
ಜಮೀನಿನಲ್ಲಿ ಕೃಷಿ ಹೊಂಡ :
ಮಾಡಿ ಅಲ್ಲಿ ಮೀನು ಸಾಕಾಣಿಕೆ ಮಾಡುತ್ತೇನೆ. ಅದರಿಂದ ಮೀನು ಊಟ ತಯಾರಿಸಿ ಪೂರೈಸಬಹುದಾಗಿದೆ. ಮಗನಿಗೆ ಪಟ್ಟಣದಲ್ಲಿ ತಿಂಗಳಿಗೆ 20 ಸಾವಿರ ಸಂಬಳ ಬರುತ್ತಿತ್ತು. ಅದನ್ನು ಬಿಡಿಸಿ ನಾನೇ ಅವನಿಗೆ ಈಗ ತಿಂಗಳಿಗೆ 35 ಸಾವಿರ ಸಂಬಳ ಕೊಡುತ್ತೇನೆ. ಇವನ ಜತೆಗೆ ಇನ್ನೂ ಇಬ್ಬರು ನನ್ನೊಂದಿಗೆ ಕೆಲಸ ಮಾಡುತ್ತಿದ್ದು, ಅವರಿಗೂ ಸಂಬಳ ನೀಡುತ್ತಿದ್ದೇನೆ. –ಕವಿತಾ
- ವಿಜಯಕುಮಾರ ಚಂದರಗಿ