Advertisement
ಇಲ್ಲಿ ಹೆಚ್ಚಿನವರು ಅವಕಾಶ ಕೈತಪ್ಪಿದಾಗ ಕಣ್ಣು ತುಂಬಿಸಿಕೊಳ್ಳುತ್ತಾರೆ, ಇದು ಮುಂದಿರುವ ಮತ್ತೊಂದು ಅವಕಾಶವನ್ನು ಮರೆಮಾಡುತ್ತದೆ.
Related Articles
Advertisement
ಅದಕ್ಕೆಂದೇ ಪರಿಣತನಾದ ಬೇಟೆಗಾರನಿಂದ ತರಬೇತಿ ಪಡೆದು, ತಿಂಗಳುಗಳ ತರಬೇತಿಯ ನಂತರ ಬೇಟೆಗೆಂದು ಪರಿವಾರದೊಡನೆ ಕಾಡಿಗೆ ನಡೆದ. ಅವನಿಗೋಸ್ಕರ ಒಂದು ಪುಟ್ಟ ಬಯಲಿನಲ್ಲಿ ಮರದ ಅಟ್ಟಣಿಗೆ ಕಟ್ಟಿದ್ದರು. ಆತ ಅದರ ಮೇಲೆ ತನ್ನ ಬಿಲ್ಲು ಬಾಣಗಳೊಂದಿಗೆ ಸಜ್ಜಾಗಿ ನಿಂತ.
ಇವನ ಪರಿವಾರದವರು ಸುತ್ತಲಿನ ಕಾಡಿನಲ್ಲಿ ಹರಡಿ ಗದ್ದಲವನ್ನೆಬ್ಬಿಸಿದರು. ಆಗ ಗಾಬರಿಯಾಗಿ ಬಯಲಿಗೆ ನುಗ್ಗಿದ ಪ್ರಾಣಿಗಳನ್ನು ರಾಜ ಹೊಡೆಯಲಿ ಎಂಬುದು ಯೋಜನೆ. ಇದರಂತೆ ಕೆಲವು ಕ್ಷಣಗಳ ನಂತರ ತಮಟೆ, ಕಹಳೆಗಳ ಶಬ್ದ ಮತ್ತು ಜನರ ಕೂಗುವಿಕೆ ಕೇಳಿಸಿತು.
ಮರುಕ್ಷಣವೇ ಒಂದು ಪುಟ್ಟ ಮೊಲ ಕುಪ್ಪಳಿಸುತ್ತ ಈತನ ಮುಂದೆಯೇ ನಿಂತಿತು. ಈತನನ್ನು ಕಂಡು ಗಾಬರಿಯಾದ ಮೊಲ ಮರಗಟ್ಟಿ ನಿಂತೇ ಬಿಟ್ಟಿತು. ರಾಜ ಬಿಲ್ಲಿಗೆ ಬಾಣ ಹೂಡಿದ. ಹೀಗೆ ಎದುರಿಗೇ ನಿಂತ ಮೊಲವನ್ನು ಹೊಡೆಯುವುದು ಯಾರಿಗಾದರೂ ಸುಲಭ.
ಇನ್ನೇನು ಬಾಣ ಬಿಡಬೇಕೆನ್ನುವಷ್ಟರಲ್ಲಿ ಒಂದು ತೋಳ ಅಲ್ಲಿಗೆ ಓಡಿ ಬಂದಿತು. ರಾಜ ಎಂದುಕೊಂಡ, ಈ ಮೊಲವನ್ನು ಹೊಡೆಯುವುದು ಎಂಥ ಬೇಟೆ? ತೋಳವನ್ನು ಹೊಡೆದರೆ ಅದರ ಚರ್ಮಕ್ಕೆ ಬೇಕಾದಷ್ಟು ಬೆಲೆ ಇದೆ, ಅದನ್ನೇ ಹೊಡೆಯುತ್ತೇವೆ ಎಂದು ಗುರಿ ಬದಲಿಸಿದ.
ಅಷ್ಟರಲ್ಲಿ ಒಂದು ಕಪ್ಪು ಜಿಂಕೆ ಹಾರಿ ಬಂದಿತು. ಅದೇನು ಅದರ ರೂಪ, ಚೆಂದ! ದಟ್ಟ ಕಪ್ಪು ಮೈಮೇಲೆ ಬಂಗಾರದ ಚುಕ್ಕೆಗಳು! ಇಷ್ಟು ಅಂದದ ಜಿಂಕೆಯನ್ನು ಹೊಡೆಯಲೇ ಬೇಕು, ಅದರ ಚರ್ಮವನ್ನು ತನ್ನ ಸಿಂಹಾಸನದ ಮೇಲೆ ಹಾಕಿಕೊಳ್ಳಬೇಕೆಂದು ತೀರ್ಮಾನಿಸಿ ಬಿಲ್ಲನ್ನು ಆ ದಿಕ್ಕಿಗೆ ಹೊರಳಿಸಿದ.
ಆಗ ಶಿಳ್ಳೆ ಹೊಡೆದಂತೆ ಸದ್ದಾಯಿತು. ತಲೆ ಎತ್ತಿ ನೋಡಿದರೆ ಒಂದು ಭಾರಿ ಗಾತ್ರದ ಗರುಡ ಹಾರುತ್ತಿದೆ! ಹೊಡೆದರೆ ಗರುಡವನ್ನು ಹೊಡೆಯಬೇಕು ಎಂದುಕೊಂಡ ರಾಜ. ಮೊದಲ ಬೇಟೆಯಲ್ಲೇ ಆಕಾಶದಲ್ಲಿ ಹಾರಾಡುವ ಗರುಡವನ್ನು ಹೊಡೆದರೆ ತನ್ನ ಕೀರ್ತಿ ಹರಡುತ್ತದೆ, ತನ್ನ ಗುರಿಕಾರಿಕೆ ಮನೆಮನೆಯ ಮಾತಾಗುತ್ತದೆ. ಹೀಗೆಂದುಕೊಂಡು ಬಾಣ ಬಿಡುವಷ್ಟರಲ್ಲಿ ಗರುಡ ಸರ್ರೆಂದು ಮೇಲೆ ಹಾರಿ ಹೋಯಿತು.
ಅರೇ! ತಪ್ಪಿಸಿಕೊಂಡಿತಲ್ಲ ಎಂದು ಮರಳಿ ಜಿಂಕೆಯತ್ತ ನೋಡಿದರೆ ಅದೆಲ್ಲಿದೆ? ಹಾರಿ ಮಾಯವಾಗಿತ್ತು ಜಿಂಕೆ. ಆಯ್ತು, ತೋಳವನ್ನಾದರೂ ಹೊಡೆಯುತ್ತೇನೆ ಎಂದು ತಿರುಗಿದರೆ ತೋಳವೂ ಇಲ್ಲ! ಕೊನೆಗೆ ಉಳಿದಿದ್ದು ಮೊಲ ಮಾತ್ರ. ಅದೂ ಕೂಡ ಇವನಿಗೋಸ್ಕರ ಕಾಯ್ದುಕೊಂಡು ಕುಳಿತಿರುತ್ತದೆಯೇ? ಎಲ್ಲೋ ಮರೆಯಾಗಿತ್ತು.
ಓದಿ : ಜಗತ್ ಕಿಲಾಡಿ! ವೈದ್ಯನೆಂದು ಹೇಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಹಣ್ಣಿನ ವ್ಯಾಪಾರಿ!
ರಾಜನಿಗೆ ಅಸಾಧ್ಯ ಕೋಪ ಬಂತು. ಒಂದು ಪ್ರಾಣಿಯೂ ಅವನ ಗುರಿಗೆ ಸಿಕ್ಕಲಿಲ್ಲ. ರಾಜ ಪರಿವಾರದವರನ್ನೆಲ್ಲ ಕರೆದು ಚೆನ್ನಾಗಿ ಬೈದ. ಅವರ ನಿರ್ಲಕ್ಷ್ಯದಿಂದಲೇ ಬೇಟೆಯ ಅವಕಾಶ ತಪ್ಪಿ ಹೋಯಿತೆಂದು ದೂರಿದ. ತನ್ನ ಮೊದಲನೆಯ ಬೇಟೆಯ ಕಾರ್ಯಕ್ರಮ ವಿಫಲವಾದದ್ದು ಇಂತಹ ಬೇಜವಾಬ್ದಾರಿ ಜನರಿಂದ ಎಂದು ದೂಷಿಸಿದ. ಎಲ್ಲರೂ ಅರಮನೆಗೆ ಮರಳಿದರು.
ಈ ಕಥೆಯು ಒಂದೆಡೆ ‘ಅತಿ ಆಸೆ ಗತಿ ಕೇಡು’ ಎಂಬ ಗಾದೆಯನ್ನು ನೆನಪಿಸಿದರೆ ಇನ್ನೊಂದೆಡೆ ನಾವು ಬಂದ ಅವಕಾಶಗಳನ್ನು ಕಡೆಗಣಿಸಿ ಇನ್ಯಾವುದನ್ನೋ ಪಡೆಯಲು ಹೋಗಿ ಕೊನೆಗೆ ಯಾವುದು ದಕ್ಕದೆ ಪ್ರಾಪಂಚಿಕ ಸುಖದ ಹುಡುಕಾಟದಲ್ಲಿ ಜೀವನವನ್ನು ಕಳೆದುಬಿಡುತ್ತೆವೆ ಎಂಬುದನ್ನು ತಿಳಿಸುತ್ತದೆ.
ನಾವು ಪ್ರತೀದಿನ ಅವಕಾಶಗಳನ್ನು ಬೇಟೆಯಾಡುವ ಬರದಲ್ಲಿ ರಾಜನಿಗೆ ಸಿಕ್ಕ ಮೊಲದ ಹಾಗೇ ನಮಗೆ ಸಿಗುವ ಅದೆಷ್ಟೋ ಸಣ್ಣಪುಟ್ಟ ಅವಕಾಶಗಳನ್ನು ಬಿಟ್ಟು ಮೊದಲ ಹಂತದಲ್ಲೇ ಹಣವನ್ನು ಮಾಡುವ ಹಾಗೂ ಯಶೋಗಾಥೆಯನ್ನು ಅನುಭವಿಸುವ ದುರಾಸೆಯಲ್ಲಿ ರಾಜನಂತೆ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳುತ್ತೆವೆ. ಕೊನೆಗೆ ಯಶಸ್ಸು ಸಿಗದೆ, ಹಣವು ಇರದ, ತ್ರಿಶಂಕು ಸ್ಥಿತಿ ನಮ್ಮದಾಗುತ್ತದೆ.
ಆದ್ದರಿಂದ ಹಣ ಮತ್ತು ಯಶಸ್ಸು ಇದರ ಬೆನ್ನಹಿಂದೆ ಓಡದೆ, ಬಂದ ಅವಕಾಶಗಳ ಸದುಪಯೋಗ ಪಡೆದುಕೊಂಡರೆ ಎಲ್ಲವೂ ತಾನಾಗಿಯೇ ದಕ್ಕುತ್ತದೆ. ಒಂದು ಅವಕಾಶ ಕಣ್ಣೆದುರು ಇದ್ದಾಗ, ಅದನ್ನು ಬಿಟ್ಟು ಹೆಚ್ಚಿನ ಲಾಭಗಳಿಸುವ, ಸನ್ಮಾನ ಪಡೆಯುವ ಹುಚ್ಚು ಆಸೆಯಲ್ಲಿ ನಮ್ಮ ಗುರಿ ಬದಲಾಯಿಸಿದರೆ ಕೊನೆಗೆ ರಾಜನಿಗಾದ ಸ್ಥಿತಿ ನಮ್ಮದಾಗುತ್ತದೆ.
ಯಾವುದೇ ಲೋಭಕ್ಕೆ ಒಳಗಗಾದೆ ಬದುಕಿನಲ್ಲಿ ಬರುವ ಮೊದಲ ಅವಕಾಶಗಳ ಸದುಪಯೋಗ ಪಡೆದುಕೊಂಡರೆ ನಮ್ಮ ಮುಂದಿನ ಯಶಸ್ಸಿಗೆ ಅದೇ ದಾರಿದೀಪವಾಗುತ್ತದೆ.
ಪೂಜಶ್ರೀ ತೋಕೂರು
ಆಳ್ವಾಸ್ ಕಾಲೇಜು, ಮೂಡುಬಿದಿರೆ
ಓದಿ : ಬಿಗ್‍ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ.ನೀಡಿದ ನಟ ಸುದೀಪ್