Advertisement

ಆತ್ಮಸ್ಥೈರ್ಯದಿಂದ ಮುನ್ನಡೆದರೆ ಯಶಸ್ಸು

09:54 AM Aug 05, 2019 | Suhan S |

ರಾಣಿಬೆನ್ನೂರ: ಗ್ರಾಮೀಣ ಭಾಗದ ಮಕ್ಕಳಲ್ಲಿ ಅಗಾಧ ಪ್ರತಿಭೆಯಿದ್ದರೂ ವೈಯಕ್ತಿಕ ಕೀಳರಿಮೆಯಿಂದಾಗಿ ಅವರು ಹಿಂದುಳಿಯುವಂತಾಗಿದೆ. ಭಯ ನಿವಾರಿಸಿ ಆತ್ಮಸ್ಥೈರ್ಯ ವೃದ್ಧಿಸಿಕೊಂಡು ಮುನ್ನಡೆದಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ವಿಶ್ರಾಂತ ಪ್ರಾಚಾರ್ಯ ಎಚ್.ಎ. ಭಿಕ್ಷಾವರ್ತಿಮಠ ಹೇಳಿದರು.

Advertisement

ನಗರದ ಹೊರವಲಯದಲ್ಲಿರುವ ಆರ್‌ಟಿಇಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆ, ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಭ್ರಮೆಯಲ್ಲಿ ಸಿಲುಕಿ ನಮ್ಮ ಶಿಕ್ಷಣ ವ್ಯವಸ್ಥೆ ನಲುಗುವಂತಾಗಿದೆ ಎಂದರು.

ಜ್ಞಾನಪೀಠ ಪ್ರಶಸ್ತ್ರಿ ಪುರಸ್ಕೃತರು ಎಲ್ಲರೂ ಒಂದರಿಂದ ಹತ್ತನೆ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಕಲಿಸಬೇಕು. ಪ್ರತಿಭೆ ಎಂದರೆ ಕೇವಲ ಅಂಕ ಗಳಿಸುವುದು ಅಲ್ಲ. ಸಮಸ್ಯೆಗಳಿಗೆ ಉತ್ತರ ಕಂಡು ಹಿಡಿದು ಸಮಸ್ಯೆಯನ್ನು ಬಗ್ಗೆಹರಿಸುವುದು ಪ್ರತಿಭೆ. ಗಾಂಧೀಜಿ, ಅಂಬೇಡ್ಕರ್‌ ಹಾಗೂ ಕನಕದಾಸರು ಹೊಸ ಹೊಸ ವಿಚಾರಗಳನ್ನು ತಿಳಿಸಿದವರು ಎಂದರು.

ಹಿಂದಿನ ಕಾಲದಲ್ಲಿ ವಿದ್ಯೆ ಕಲಿಯಲಿಕ್ಕೆ ಬಹಳ ಕಷ್ಟವಿತ್ತು. ಹಳ್ಳಿಯಿಂದ ನಗರಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದೆವು, ಸರಿಯಾದ ಬಸ್‌ನ ವ್ಯವಸ್ಥೆ ಇರಲಿಲ್ಲ ನಡೆದುಕೊಂಡು ತೆರಳಿ ಓದುವ ಅನಿವಾರ್ಯತೆ ಇತ್ತು. ಆದರೆ, ಈಗ ಸಾಕಷ್ಟು ಬದಲಾವಣೆಯಾಗಿದ್ದು, ವಿದ್ಯೆಯನ್ನು ಕಷ್ಟಪಟ್ಟು ಓದುವುದಲ್ಲ, ಬದಲಾಗಿ ಇಷ್ಟಪಟ್ಟು ಓದಬೇಕು. ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದರು.

ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಸಿ.ಪೀರಜಾದೆ, ಆರ್‌ಟಿಇಎಸ್‌ ಅಧ್ಯಕ್ಷ ಸುಭಾಸ ಸಾವಕಾರ, ಪ್ರಾಚಾರ್ಯ ಪಿ.ಬಿ.ಕಟಾವಕರ, ಎನ್‌.ಎಚ್.ಹೊಸಮನಿ, ಡಾ| ಒ.ಎಫ್‌. ದ್ಯಾವನಗೌಡ್ರ, ಸಚಿನ ಹೊಳಲ, ಫರಹತ್‌ ದೊಡ್ಡಮನಿ ವೆಂಕಟೇಶ ಲಮಾಣಿ, ಮೇಘನಾ ಅತಡಕರ, ಜ್ಯೋತಿ ಅಂಕಸಾಪುರ, ಮನೋಜ ಎಂ.ಬಿ., ಕಾರ್ತಿಕ ಹುಲಿಹಳ್ಳಿ, ದೀಪಾ ತೆಗ್ಗಿನ, ಗೌರಿ ಮಣೇಗಾರ, ವಿಷ್ಣು ಮಣೇಗಾರ, ರಿಹಾನಾಬಾನು ಅಗಡಿ, ಅಭಿಷೇಕ ದುರ್ಗದ, ದಿವ್ಯ ಅಯ್ಯಜ್ಜನವರ, ಸಾಗರ ಮಣ್ಣಣ್ಣವರ, ಚೇತನ್‌ ಯಡಕೆ, ಪೂಜಾ ಯಲವಿಗಿ ಸೇರಿದಂತೆ ಮತ್ತಿತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next