Advertisement

ಪ್ರಾಮಾಣಿಕ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು

12:17 PM Jul 10, 2017 | Team Udayavani |

ಹುಬ್ಬಳ್ಳಿ: ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಪ್ರಾಮಾಣಿಕ ಪ್ರಯತ್ನ ಅತ್ಯವಶ್ಯ ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು. ವಿದ್ಯಾನಗರ ಕನಕದಾಸ ಶಿಕ್ಷಣ ಸಮಿತಿಯ ಕನಕದಾಸ ಮಹಾವಿದ್ಯಾಲಯದಲ್ಲಿ ಚಿಂತನ ವೇದಿಕೆಯಿಂದ ರವಿವಾರ ನಡೆದ ಜಯಶ್ರೀ ಸಮ್ಮಾನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಯುವಕರು ನೇರ ನಡೆ-ನುಡಿಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಕಳ್ಳ ದಾರಿಗಳಿಂದ ನಡೆಸುವ ಪ್ರಯತ್ನಗಳು ಜೀವನ ಹಾಳು ಮಾಡುತ್ತವೆ. ಪರರಿಗೆ ಸಹಾಯ ಹಸ್ತ ನೀಡುವ ಗುಣಗಳನ್ನು ಇಂದಿನ ಯುವಪೀಳಿಗೆ ಬೆಳೆಸಿಕೊಳ್ಳಬೇಕೆಂದರು. 

ಮಾಜಿ ಸಂಸದ ಪ್ರೊ| ಐ.ಜಿ. ಸನದಿ ಮಾತನಾಡಿ, ಗುರು ಎಂದರೆ ವ್ಯಕ್ತಿಯಲ್ಲ, ಅದೊಂದು ಭಾವನೆ. ಹಿರಿಯ ಪತ್ರಕರ್ತರಾದ ಡಾ| ಪಾಟೀಲ ಪುಟ್ಟಪ್ಪ ಅವರು ತಮ್ಮ ಕಾರ್ಯ ವೈಖರಿಯಿಂದಾಗಿ ಅನೇಕ ಯುವ ಪತ್ರಕರ್ತರಿಗೆ ಹಾಗೂ ಸಮಾಜ ಸೇವಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ರಂಗ ಕಲಾವಿದೆ ರತ್ನಾ ಸೋಗಿ ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಪತ್ರಕರ್ತರ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿದರು. ಶಿರಸಿಯ ಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸಪ್ಪ ಧಾರವಾಡಶೆಟ್ರಾ, ವೀರನಗೌಡ್ರ ಮರಿಗೌಡ್ರ ಇನ್ನಿತರಿದ್ದರು. ಕೊನೆಯಲ್ಲಿ ಕವಿಗೋಷ್ಠಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next