Advertisement

ಕಠಿನ ಶ್ರಮದಿಂದ ಯಶಸ್ಸು: ಮಹಾಬಲೇಶ್ವರ

11:19 AM Jan 17, 2018 | Team Udayavani |

ಮಂಗಳೂರು: ಕಠಿನ ಮತ್ತು ದಕ್ಷ ಕಾರ್ಯದಿಂದ ಅಪಾರ ಯಶಸ್ಸು ದೊರೆಯುವುದೆಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌.  ಹೇಳಿದರು.

Advertisement

ಅವರು ಜ. 16ರಂದು ಬ್ಯಾಂಕಿನ ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಂಡ ತ್ತೈಮಾಸಿಕದ ಸಾಧನೆಗೆ ಸಂಬಂಧಿಸಿ ಪ್ರಾಂತೀಯ ಮುಖ್ಯಸ್ಥರ ಪರಾಮರ್ಶನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ ಈಗ 1 ಲಕ್ಷ ಕೋ. ರೂ. ವ್ಯವಹಾರದ ಗುರಿ ಸಾಧಿಸಿದೆ. ಕಳೆದ ತ್ತೈಮಾಸಿಕದಲ್ಲಿ ಶೇ.87.3ರ ನಿರ್ವಹಣ ಲಾಭ ವೃದ್ಧಿ ಸಾಧ್ಯವಾಗಿದೆ. ರಿಟೇಲ್‌ ಮತ್ತು ಮಿಡ್‌ ಕಾರ್ಪೊರೇಟ್‌ ವಲಯಕ್ಕೆ ಮುಂಗಡದ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. 90 ಲಕ್ಷ ಗ್ರಾಹಕರ ಬೆಂಬಲದಿಂದ ಇನ್ನಷ್ಟು ಯಶಸ್ಸು ದೊರೆ ಯುವುದು ಎಂದು ವಿವರಿಸಿದರು. 

ಚೀಫ್‌ ಜಿಎಂ ರಾಘವೇಂದ್ರ ಭಟ್‌ ಎಂ. ಸ್ವಾಗತಿಸಿ, ಪ್ರಸ್ತಾವನೆಗೈದರು. ಜಿಎಂ ಚಂದ್ರಶೇಖರ ರಾವ್‌ ಬಿ. ವ್ಯವಹಾರ ಮಾಹಿತಿ ನೀಡಿದರು.  ಜನರಲ್‌ ಮ್ಯಾನೇಜರುಗಳಾದ ಸುಭಾಶ್ಚಂದ್ರ ಪುರಾಣಿಕ್‌, ಬಾಲ ಚಂದ್ರ ವೈ. ವಿ., ಮುರಲೀಧರ ಕೃಷ್ಣ ರಾವ್‌, ನಾಗರಾಜ ರಾವ್‌ ಬಿ., ಗೋಕುಲ್‌ದಾಸ್‌ ಪೈ, ಮಂಜುನಾಥ ಭಟ್‌ ಬಿ. ಕೆ., ಮಹಾಲಿಂಗೇಶ್ವರ ಕೆ. ಉಪಸ್ಥಿತರಿದ್ದರು. ಡಿಜಿಎಂ ರವೀಂದ್ರನಾಥ್‌ ಹಂದೆ ಎಚ್‌.ಪಿ. ವಂದಿಸಿದರು.

ಕರ್ಣಾಟಕ ಬ್ಯಾಂಕಿನ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಅವರು ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next