ಥಾಣೆ: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡು ಬರುತ್ತಿದ್ದು, ಕೊರೊನಾ ಆಸ್ಪತ್ರೆಗಳ ಒತ್ತಡವೂ ಕಡಿಮೆಯಾಗಲು ಪ್ರಾರಂಭಿಸಿದೆ. ಜಿಲ್ಲೆಯ ಕೊರೊನಾ ಆಸ್ಪತ್ರೆಗಳಲ್ಲಿನ ಒಟ್ಟು 17,133 ಹಾಸಿಗೆಗಳಲ್ಲಿ 11,012 ಹಾಸಿಗೆಗಳು ಖಾಲಿಯಾಗಿವೆ. ಈ ಪ್ರಮಾಣವುಶೇ. 64ಕ್ಕಿಂತ ಹೆಚ್ಚಾಗಿದೆ.
ಚೇತರಿಕೆ ಪ್ರಮಾಣ ಶೇ. 95.13 ಆಗಿದೆ.ಸುಮಾರು ಒಂದು ತಿಂಗಳ ಹಿಂದೆ ರೋಗಿಗಳು ಮತ್ತು ಅವರ ಸಂಬಂಧಿಕರು ಚಿಕಿತ್ಸೆಗಾಗಿ ಹಾಸಿಗೆ ಪಡೆಯಲು ಹರಸಾಹಸ ಪಡುವಂತಾಗಿದ್ದು, ಇದೀಗ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತಿದೆ. ಮಾರ್ಚ್‌ನಿಂದ ಥಾಣೆ ಜಿÇÉೆಯಲ್ಲಿ ಕೊರೊನಾ ಏಕಾಏಕಿ ಹೆಚ್ಚಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರತೀದಿನ 5,000ರಿಂದ 6,000 ರೋಗಿಗಳು ಕಂಡುಬರುತ್ತಿದ್ದರು. ಈ ಚಿತ್ರಣವು ಎಪ್ರಿಲ್ ಅಂತ್ಯದವರೆಗೂ ಇತ್ತು.
ಈ ಅವಧಿಯಲ್ಲಿ ಸುಮಾರು 50,000 ಸಕ್ರಿಯ ರೋಗಿಗಳಿದ್ದು, ಕೊರೊನಾ ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆಗಳು ಇರಲಿಲ್ಲ.ರೋಗಿಗಳ ಸಂಖ್ಯೆ ಸುಮಾರು 15,000ಕಳೆದ ಕೆಲವು ದಿನಗಳಲ್ಲಿ ಚಿತ್ರಣ ಬದಲಾಗಿದೆ. ಮೇ ಆರಂಭದಿಂದಲೂ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಪ್ರತೀದಿನ ಸುಮಾರು 1,500 ರೋಗಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಒಳಗಾಗುವ ರೋಗಿಗಳ ಸಂಖ್ಯೆ ಸುಮಾರು 15,000ರಷ್ಟಿದೆ. ರೋಗಿಗಳ ಸಂಖ್ಯೆಯಲ್ಲಿನ ಇಳಿಕೆ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ.
ಕೊರೊನಾ ಹರಡುವುದನ್ನು ತಡೆಯಲು ರಾಜ್ಯ ಸರಕಾರ ವಿಧಿಸಿರುವ ಲಾಕ್‌ಡೌನ್ ಸಕಾರಾತ್ಮಕ ಫಲಿತಾಂಶವನ್ನು ತೋರಿಸುತ್ತಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ರೋಗಿಗಳ ಸಂಖ್ಯೆಯಲ್ಲೂ ದೊಡ್ಡ ಕುಸಿತ ಕಂಡುಬಂದಿದೆ. ಅಲ್ಲದೆ ರೋಗಿಗಳಿಗೆ ಸಮಯಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಇದರಿಂದ ರೋಗಿಗಳ ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಕೊರೊನಾ ಮುಕ್ತ ರೋಗಿಗಳಲ್ಲಿ ಹೆಚ್ಚಳಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶದಲ್ಲಿ ಪ್ರತೀದಿನ 200ಕ್ಕಿಂತ ಕಡಿಮೆ ರೋಗಿಗಳು ಕಂಡುಬರುತ್ತಾರೆ.
ಚೇತರಿಕೆ ಪ್ರಮಾಣವು ಶೇ. 96ರಷ್ಟಿದೆ. ಪುರಸಭೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 71ರಷ್ಟು ಹಾಸಿಗೆಗಳು ಖಾಲಿಯಾಗಿವೆ. ಎನ್‌ಎಂಸಿಯ ಜಿಲ್ಲಾಧಿಕಾರಿ ಸಂದೀಪ್ ಮಾಲ್ವಿ ಅವರ ಪ್ರಕಾರ ಲಾಕ್‌ಡೌನ್, ಕೊರೊನಾ ತಡೆಗಟ್ಟುವ ಕ್ರಮಗಳು, ಮನೆಯಿಲ್ಲದ ರೋಗಿಗಳ ಆರೋಗ್ಯ ಪರೀಕ್ಷಿಸಲು ಶರತಿ ಯೋಜನೆ ಜಾರಿಗೊಳಿಸುವುದರಿಂದ ರೋಗಿಗಳ ಸಂಖ್ಯೆ ಶೇ. 96ರಷ್ಟು ಕಡಿಮೆಯಾಗಿದೆ.