Advertisement

ಸಬ್ಸಿಡಿ ರಹಿತ ಪ್ರತಿ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳ

12:34 PM Nov 03, 2019 | Hari Prasad |

ಹೊಸದಿಲ್ಲಿ: ಸಬ್ಸಿಡಿ ರಹಿತ ಪ್ರತಿ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ 76 ರೂ. ಏರಿಕೆ ಮಾಡಲಾಗಿದೆ. ಸತತ ಮೂರನೇ ಬಾರಿಗೆ ದರ ಏರಿಕೆ ಮಾಡಲಾಗುತ್ತಿದೆ.

Advertisement

ಇದರಿಂದಾಗಿ ಹೊಸದಿಲ್ಲಿಯಲ್ಲಿ 681.50 ರೂ., ಕೋಲ್ಕತಾದಲ್ಲಿ 706 ರೂ., ಮುಂಬಯಿನಲ್ಲಿ 651 ರೂ., ಚೆನ್ನೈನಲ್ಲಿ 696 ರೂ., ಬೆಂಗಳೂರಿನಲ್ಲಿ 603.50 ರೂ. ಆಗಿರಲಿದೆ. ಕಳೆದ ತಿಂಗಳು ಸಿಲಿಂಡರ್‌ ದರವನ್ನು 15 ರೂ., ಸೆಪ್ಟಂಬರ್‌ನಲ್ಲಿ 15.50 ರೂ. ಹೆಚ್ಚಳ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next