Advertisement
ಆಲೂಗಡ್ಡೆ ಬೆಳೆಗಾರರಿಗೆ ಸಹಾಯ ಧನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಾನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದೆ . ನಾನು ಸಲ್ಲಿಸಿದ ಮನವಿ ಪತ್ರದ ಮೇಲೆ ಕ್ರಮ ಕೈಗೊಳ್ಳಿ ಎಂದು ಲಿಖಿತ ವಾಗಿ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದರು. ಆದರೆ ಇದುವರೆಗೂ ಸಹಾಯಧನ ಬಗ್ಗೆ ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಮುಖ್ಯಮಂತ್ರಿ ನೀಡಿದ ಸೂಚನೆಗೆ ಬೆಲೆಯೇ ಇಲ್ಲವೇ ಎಂದು ಅವರು ಪ್ರಶ್ನಿಸಿದರು.
ಮಾಡಬಾರದು. ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಮೇಲೆ ರಾಜಕೀಯ ದ್ವೇಷ ಸಾಧಿಸಿ ಅನುದಾನ ನಿಲ್ಲಿಸಿದ್ದಾರೆ. ಎಷ್ಟುದಿನ ದ್ವೇಷದ ರಾಜಕಾರಣ ಮಾಡುತ್ತಾರೋ ಮಾಡಲಿ. ನಮಗೆ ಅವಕಾಶ ಸಿಕ್ಕಿದಾಗ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ. ಈಗ ಆಲೂಗಡ್ಡೆ ಬೆಳೆಗಾರರಿಗೂ ಸಹಾಯ ಧನ ನೀಡದೆ ಸ್ವೇಷ ಸಾಧಿಸುವುದು ಬೇಡ. ಹಾಸನ ಜಿಲ್ಲೆಯ ರೈತರ ಮೇಲೂರಾಜಕೀಯ ಹಗೆ ಸಾಧಿಸಲು ಮುಂದಾದರೆ ಬಿಜೆಪಿಗೆ ತಿರುಗು ಬಾಣವಾಗುತ್ತದೆ ಎಂದು ರೇವಣ್ಣ ಎಚ್ಚರಿಸಿದರು.