Advertisement

ಸಬ್ಸಿಡಿ ಗ್ಯಾಸ್‌: 5.57 ರೂ. ಏರಿಕೆ

09:47 AM Apr 03, 2017 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿರುವಂತೆಯೇ ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಿಸಲಾಗಿದೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ಗೆ 5.57 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 14.50 ರೂ. ಇಳಿಸಲಾಗಿದೆ. ಮಾ. 1ರಂದು ಪ್ರತಿ ಸಿಲಿಂಡರ್‌ಗೆ 86 ರೂ.ಗಳಷ್ಟು ಹೆಚ್ಚಳ ಮಾಡಿ ಒಂದು ತಿಂಗಳ ಬಳಿಕ ಸಬ್ಸಿಡಿ ರಹಿತ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ದರ ಹೆಚ್ಚಳದಿಂದಾಗಿ ಗೃಹ ಬಳಕೆ ಸಿಲಿಂಡರ್‌ ದರ ದಿಲ್ಲಿಯಲ್ಲಿ 440.50 ರೂ. ಆಗಿದೆ. ಇದಕ್ಕಿಂತ ಮೊದಲು ಫೆ. 1 ಮತ್ತು  ಮಾ. 1ರಂದು 2 ರೂ. ಹೆಚ್ಚಿಸಲಾಗಿತ್ತು. ಅಕ್ಟೋಬರ್‌ 2016ರ ಬಳಿಕ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಏರಿಳಿತಗಳಾಗುತ್ತಿವೆ. ರಿಯಾಯಿತಿ ಇಲ್ಲದ ಎಲ್‌ಪಿಜಿ ಸಿಲಿಂಡರ್‌ ಬೆಲೆ ಕಳೆದ ಸೆಪ್ಟಂಬರ್‌ನಲ್ಲಿ 466.50 ರೂ. ಇತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next