Advertisement

Subramanya ಅಡಿಕೆ ಎಲೆಚುಕ್ಕಿ ರೋಗಕ್ಕೆ ಔಷಧ

12:30 AM Mar 07, 2024 | Team Udayavani |

ಸುಬ್ರಹ್ಮಣ್ಯ: ಅಡಿಕೆಗೆ ಬಾಧಿಸಿರುವ ಎಲೆಚುಕ್ಕಿ ರೋಗದ ಬಗ್ಗೆ ವಿಸ್ತಾರವಾದ ಸಂಶೋಧನೆ ನಡೆಸಲಾಗಿದ್ದು ಇದು ಹವಾಮಾನ ಆಧಾರಿತ ರೋಗ ಎಂದು ತಿಳಿದುಬಂದಿದೆ. ರೋಗ ನಿಯಂತ್ರಣಕ್ಕೆ ಕಂಡುಹಿಡಿಯಲಾದ ಔಷಧವನ್ನು (ರಾಸಾಯನಿಕ ಸಿಂಪಡಣೆ) ಕೇಂದ್ರಕ್ಕೆ ಕಳುಹಿಸಿ ಒಪ್ಪಿಗೆ ಪಡೆದಿದ್ದೇವೆ.

Advertisement

ಅದನ್ನು ಎಲ್ಲರಿಗೂ ತಲುಪಿಸು ತಿಳಿಸಿದ್ದಾರೆ ಅದರಂತೆ ನಡೆಯುತ್ತಿದೆ ಎಂದು ಕಾಸರಗೋಡು ಸಿಪಿಸಿಆರ್‌ಐ ನಿರ್ದೇಶಕ ಡಾ| ಕೆ.ಬಿ. ಹೆಬ್ಬಾರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಡಿಕೆ ಹಳದಿ ರೋಗ ಕ್ಯಾನ್ಸರ್‌ನಂತೆ. ಮೊದಲ ಅಥವಾ ಎರಡನೇ ಹಂತದಲ್ಲಿ ನಿಯಂತ್ರಣ ಸಾಧ್ಯವಾದರೆ ಮಾತ್ರ ರೋಗ ನಿಯಂತ್ರಿಸಬಹುದಾಗಿದೆ. ಬಳಿಕ ಅದರ ನಿಯಂತ್ರಣ ಸಾಧ್ಯ ಕಷ್ಟ. ಅಡಿಕೆ ಹಳದಿ ರೋಗಕ್ಕೆ ಕಾರಣದ ಬಗ್ಗೆ ಇನ್ನೂ ನಿಖರತೆ ಕಂಡುಬಂದಿಲ್ಲ ಎಂದರು.

ಸಿಪಿಸಿಆರ್‌ಐ ಕಾಸರಗೋಡಿನ ಡಾ| ನಿರಲ್‌, ಸಿಪಿಸಿಆರ್‌ಐ ವಿಟ್ಲದ ಡಾ| ವಿನಾಯಕ ಹೆಗ್ಡೆ, ಕಾಸರಗೋಡು ಸಿಪಿಸಿಆರ್‌ಐ ಪ್ರಧಾನ ವಿಜ್ಞಾನಿಗಳಾದ ಡಾ| ರವಿ ಭಟ್‌, ಡಾ| ಸಂಶುದ್ದೀನ್‌, ಪ್ರಮುಖರಾದ ಶ್ಯಾಮ್‌ ಪ್ರಸಾದ್‌, ಗೋಪಾಲಕೃಷ್ಣ, ಡಾ| ದಿವಾಕರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next