Advertisement

ಹರಿಹರ ಪಳ್ಳತ್ತಡ್ಕದಲ್ಲಿ; ಭಾರಿ ಸದ್ದಿಗೆ ಬೆಚ್ಚಿ ಬಿದ್ದ ಜನತೆ, ಶಬ್ದದ ಮೂಲ ನಿಗೂಢ!

12:30 AM Dec 14, 2020 | sudhir |

ಸುಬ್ರಹ್ಮಣ್ಯ ;ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಡಿ.13ರಂದು ರಾತ್ರಿ ಇದ್ದಕ್ಕಿದ್ದಂತೆ ಭಾರಿ ಶಬ್ದವೊಂದು ಕೇಳಿ ಬಂದಿರುವ ಘಟನೆ ನಡೆದಿದೆ.

Advertisement

ರಾತ್ರಿ ಸುಮಾರು 10ರ ಸಮಯಕ್ಕೆ ಈ ಶಬ್ದ ಕೇಳಿ ಬಂದಿದ್ದು ಜನ ಭಯಭೀತರಾಗಿದ್ದಾರೆ‌. ಭೂಕಂಪನದ ಮಾದರಿಯಲ್ಲೆ ಶಬ್ದ ಕೇಳಿಸಿದ್ದು. ಪರಿಸರದ ಮನೆಗಳು ಕಂಪನವಾಗುವಷ್ಟು ತೀವ್ರತೆ ಇತ್ತು ಎಂದು ಸ್ಥಳಿಯರು ತಿಳಿಸಿದ್ದಾರೆ.

ಶಬ್ದದ ತೀವ್ರತೆಗೆ ಮಲಗಿದ್ದವರು ಕೂಡ ಎದ್ದು ಕುಳಿತಿದ್ದಾರೆ ಎಂದು ತಿಳಿದು ಬಂದಿದೆ.ಘಟನೆ ಗ್ರಾಮದಲ್ಲಿ ಭೀತಿಯ ಜೊತೆಗೆ ಭಾರಿ ಕುತೂಹಲ ಮೂಡಿಸಿದ್ದು. ಮುಖ್ಯ ಪೇಟೆಯಲ್ಲಿ ಗ್ರಾಮದ ಜನರೆಲ್ಲರು ಸೇರಿಕೊಂಡು ಶಬ್ದದ ಮೂಲ ಹುಡುಕುವ ಪ್ರಯತ್ನ ನಡೆಸಿದ್ದಾರೆ. ಘಟನೆಯಿಂದ ಕೆಲ ಮನೆಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next