Advertisement
ಘಟನೆ ನಡೆದ ಬುಧವಾರ ರಾತ್ರಿ ನಗರದ ವರ್ತಕರೆಲ್ಲ ದಿಢೀರ್ ಸಭೆ ನಡೆಸಿ, ಚೈತ್ರಾ ಹಾಗೂ ಅವರ ಸಂಗಡಿಗರ ಕೃತ್ಯವನ್ನು ಖಂಡಿಸಿದರು. ಬಳಿಕ ಮೆರವಣಿಗೆ ಮೂಲಕ ನಗರದ ಅಂಗಡಿ ಮುಂಗಟ್ಟುಗಳಿಗೆ ತೆರಳಿ, ಗುರುವಾರ ಒಂದು ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ನಗರದ ವರ್ತಕರು, ಸಂಘ – ಸಂಸ್ಥೆಗಳು ಅಲ್ಲದೆ ಕಡಬ, ಗುತ್ತಿಗಾರು, ಹರಿಹರ, ಕೊಲ್ಲಮೊಗ್ರು, ಐನಕಿದು, ಪಂಜ, ಬಳ್ಪ ಮೊದಲಾದ ಕಡೆಗಳಿಂದ ಸಾರ್ವಜನಿಕರು ಆಗಮಿಸಿದ್ದರು. ಬಂದ್ ಶಾಂತಿಯುತವಾಗಿ ನಡೆದಿದ್ದು, ಕ್ಷೇತ್ರಕ್ಕೆ ಬಂದಿದ್ದ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಭಟನಕಾರರು ಸಹಕರಿಸಿದರು. ಹೊಟೇಲ್‌ಗಳನ್ನು ತುಸು ತಡವಾಗಿ ಮುಚ್ಚುವ ಜತೆಗೆ, ದೇವಸ್ಥಾನದಿಂದಲೂ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಭೋಜನ ವ್ಯವಸ್ಥೆಯಲ್ಲೂ ವ್ಯತ್ಯಾಸವಾಗಲಿಲ್ಲ. ಶಿಕ್ಷಣ ಸಂಸ್ಥೆಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯಾಚರಿಸಿದವು.