Advertisement

ಬಿಷಪ್‌ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

01:18 AM Apr 10, 2019 | Team Udayavani |

ತಿರುವನಂತಪುರ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಜಲಂಧರ್‌ ಬಿಷಪ್‌ ಫ್ರಾಂಕೋ ಮುಲಕ್ಕಲ್‌ ವಿರುದ್ಧ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ. ಪ್ರಕರಣ ಸಂಬಂಧ ಬಂಧನ ಕ್ಕೊಳಗಾದ 7 ತಿಂಗಳ ಬಳಿಕ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. ಮುಲಕ್ಕಲ್‌ಗೆ ಶಿಕ್ಷೆ ವಿಧಿಸುವಂತೆ ಧರಣಿ ನಡೆಸುತ್ತಿದ್ದ ನನ್‌ಗಳು ಈ ಬೆಳವಣಿಗೆ ಕುರಿತು ಹರ್ಷ ವ್ಯಕ್ತ ಪಡಿಸಿದ್ದಾರೆ. “ನಮ್ಮ ಹಲವಾರು ತಿಂಗಳ ಹೋರಾಟದ ಕಾರಣ ಈ ಪ್ರಕರಣ ಈಗ ತಾರ್ಕಿಕ ಹಂತ ತಲುಪಿದೆ. ಮುಲಕ್ಕಲ್‌ಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ನಾವು ಮನವಿ ಮಾಡುತ್ತೇವೆ’ ನನ್‌ ಅನುಪಮಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next