ಹೊಸದಿಲ್ಲಿ : ವಾಯು ಮಾಲಿನ್ಯಕ್ಕೆ ತಮ್ಮ ಕೊಡುಗೆ ನೀಡುತ್ತಿರುವ ಎಲ್ಲ ರಾಜ್ಯಗಳಿಗೆ ರಾಷ್ಟ್ರೀಯ ಹಸಿರು ಮಂಡಳಿ ಎರಡು ವಾರಗಳ ಒಳಗೆ ಮಾಲಿನ್ಯ ನಿಯಂತ್ರಣ ಯೋಜನಯನ್ನು ತನಗೆ ಸಲ್ಲಿಸಬೇಕು; ಇಲ್ಲದಿದ್ದರೆ ಅಧಿಕಾರಗಳ ಸಂಬಳದಿಂದ ತಲಾ 5 ಲಕ್ಷ ರೂ.ಗಳನ್ನು ಕಡಿತಗೊಳಿಸಲಾಗುವುದು ಎಂಬ ಖಡಕ್ ಎಚ್ಚರಿಕೆ ನೀಡಿದೆ.
ವಾಯು ಮಾಲಿನ್ಯ ನಿಯಂತ್ರಣ ಯೋಜನೆಯನ್ನು ಸಲ್ಲಿಸುವ ರಾಜ್ಯಗಳಿಗೆ ಅದನ್ನು ಅನುಷ್ಠಾನಿಸುವ ಜವಾಬ್ದಾರಿ ಹೊರಿಸಲಾಗುವುದು. ಮಾಲಿನ್ಯ ಮಿತಿಮೀರಿ ಏರಿದ ರಾಜ್ಯವನ್ನು ಸೂಕ್ತವಾಗಿ ಶಿಕ್ಷಿಸಲಾಗುವುದು ಎಂದು ಎನ್ ಜಿ ಟಿ ಸ್ಪಷ್ಟವಾಗಿ ಹೇಳಿದೆ.
ರಾಜ್ಯ ಸರಕಾರಗಳು ಸಲ್ಲಿಸುವ ತಮ್ಮ ಮಾಲಿನ್ಯ ನಿಯಂತ್ರಣ ಯೋಜನೆಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿಯ ವಿಚಕ್ಷಣೆಗೆ ಒಳಪಡಿಸಲಾಗುವುದು. ಆಯಾ ರಾಜ್ಯಗಳಲ್ಲಿ ಮಾಲಿನ್ಯವು ಅಪಾಯಕಾರಿ ಮಟ್ಟವನ್ನು ಮೀರಿತೆಂದು ಈ ಮಂಡಳಿಗಳು ಪ್ರಕಟಿಸಿದಾಗ ಆಯಾ ರಾಜ್ಯಗಳನ್ನು ದಂಡಿಸಲಾಗುವುದು ಎಂದು ಎನ್ ಜಿ ಟಿ ಹೇಳಿದೆ.
ಮಾಲಿನ್ಯ ಮಟ್ಟ ತೀವ್ರತೆಗೆ ಅಥವಾ ಅಪಾಯಕಾರಿ ಮಟ್ಟಕ್ಕೆ ತಲುಪಿತೆಂದು ಘೋಷಿಸಲ್ಪಟ್ಟಾಗ ಶಾಲೆ ಕಾಲೇಜುಗಳು ತನ್ನಿಂತಾನೇ ಮುಚ್ಚಲ್ಪಡುವುವು ಎಂದು ಹಸಿರು ನ್ಯಾಯಾಲಯ ಇಂದು ಶುಕ್ರವಾರ ಪ್ರಕಟಿಸಿತು.