Advertisement

ಮೈ ಸಿಟಿ ಮೈ ಬಜೆಟ್‌ ವರದಿ ಪಾಲಿಕೆಗೆ ಸಲ್ಲಿಕೆ

12:56 PM Feb 23, 2018 | Team Udayavani |

ಬೆಂಗಳೂರು: ಬಿಬಿಎಂಪಿ ಬಜೆಟ್‌ ಕುರಿತು ನಗರದ ಜನತೆಯಿಂದ ಸಂಗ್ರಹಿಸಿದ ಮಾಹಿತಿಯ ವರದಿಯನ್ನು ಜನಾಗ್ರಹ ಸೆಂಟರ್‌ ಫಾರ್‌ ಸಿಟಿಜನ್‌ಶಿಪ್‌ ಅಂಡ್‌ ಡೆಮಾಕ್ರಸಿ ಸಂಸ್ಥೆಯ ಪ್ರತಿನಿಧಿಗಳು ಬುಧವಾರ ಮೇಯರ್‌ ಆರ್‌.ಸಂಪತ್‌ರಾಜ್‌ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸಲ್ಲಿಸಿದರು.

Advertisement

ಕಳೆದ ಒಂದು ತಿಂಗಳಿಂದ ಬಿಬಿಎಂಪಿ ಸಹಯೋಗದಲ್ಲಿ ನಗರದ ವಿವಿಧ ಭಾಗಗಳಲ್ಲಿ ಹಾಗೂ ಆನ್‌ಲೈನ್‌ ಮೂಲಕ “ಮೈ ಸಿಟಿ ಮೈ ಬಜೆಟ್‌’ ಅಭಿಯಾನ ನಡೆಸಿದ ಜನಾಗ್ರಹ ಸಂಸ್ಥೆ, ಸಾರ್ವಜನಿಕರಿಗೆ ಬಜೆಟ್‌ ಕುರಿತು ಅಭಿಪ್ರಾಯಗಳನ್ನ ಸಂಗ್ರಹಿಸಿದೆ.

ಅದರಂತೆ ಪ್ರಸಕ್ತ ಸಾಲಿನಲ್ಲಿ 26,297 ಜನರು ಬಜೆಟ್‌ನಲ್ಲಿ ಆದ್ಯತೆ ನೀಡಬೇಕಾದ ವಿಷಯಗಳ ಕುರಿತು ಸಲಹೆಗಳನ್ನು ನೀಡಿದ್ದಾರೆ. ಮೈ ಸಿಟಿ ಮೈ ಬಜೆಟ್‌ ವರದಿ ಸ್ವೀಕರಿಸಿ ಮಾತನಾಡಿದ ಮೇಯರ್‌ ಆರ್‌.ಸಂಪತ್‌ರಾಜ್‌, ಸಾರ್ವಜನಿಕರಿಂದ ಬಂದಂತಹ ಸಲಹೆಗಳನ್ನು ಪಡೆದು ಬಜೆಟ್‌ ರೂಪಿಸಿದಾಗ ಬಜೆಟ್‌ ವಾಸ್ತವ ಹಾಗೂ ಜನಪರವಾಗಿರುತ್ತದೆ.

ಆ ಹಿನ್ನೆಲೆಯಲ್ಲಿ ಜನಾಗ್ರಹ ಸಂಸ್ಥೆ ಪಾಲಿಕೆಯ ಸಹಯೋಗದಲ್ಲಿ ಅಭಿಯಾನ ನಡೆಸಿ ಸಾರ್ವಜನಿಕರಿಂದ ಮಾಹಿತಿ ಕಲೆಹಾಕಿದ್ದು, ವರದಿಯಲ್ಲಿನ ಪ್ರಮುಖ ಅಂಶಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುವುದು ಎಂದರು. ಉಪಮೇಯರ್‌ ಪದ್ಮಾವತಿ ನರಸಿಂಹಮೂರ್ತಿ, ಜನಾಗ್ರಹ ಸಂಸ್ಥೆಯ ನಾಗರಿಕ ಪಾಲ್ಗೊಳ್ಳುವಿಕೆ ವಿಭಾಗದ ಮುಖ್ಯಸ್ಥೆ ಸಪ್ನ ಕರೀಂ ಇದ್ದರು. 

ಅಂಕಿ – ಅಂಶಗಳು
26,297 – ಸಲಹೆ ನೀಡಿದ ನಾಗರಿಕರ ಸಂಖ್ಯೆ 
11,150 ಬಜೆಟ್‌ ಬಸ್‌ ಬಳಿ ತೆರಳಿ ಅಭಿಪ್ರಾಯ ತಿಳಿಸಿದವರು 
2,450 ನಾಗರಿಕ ಉತ್ಸವದಲ್ಲಿ ಮಾಹಿತಿ ನೀಡಿದವರು
12,697 ಆನ್‌ಲೈನ್‌ ಅಭಿಯಾನದಲ್ಲಿ ಸಲಹೆ ನೀಡಿದವರು

Advertisement

2018-19ನೇ ಸಾಲಿನ ಬಜೆಟ್‌ ನಾಗರಿಕರು ನೀಡಿರುವ ಆದ್ಯತಾ ವಲಯಗಳ ವಿವರ 
ವಲಯ    ಸಲಹೆ ನೀಡಿದವರ ಸಂಖ್ಯೆ    ಶೇಕಡವಾರು
ರಸ್ತೆ ಮತ್ತು ಸಂಚಾರ ಯೋಗ್ಯ    5,407    21
ಆರೋಗ್ಯ ಮತ್ತು ಒಳಚರಂಡಿ    5,028    19
ಪಾದಚಾರಿ ಮತ್ತು ಪಾದಚಾರಿ ಸ್ನೇಹಿ    4,746    18
ಮರ, ಉದ್ಯಾನ ಹಾಗೂ ಮೈದಾನ    3,944    15
ಅಪರಾಧ ಹಾಗೂ ಸುರಕ್ಷತೆ    2,107    8
ನೀರು ಸರಬರಾಜು ಹಾಗೂ ಒಳಚರಂಡಿ    1,812    7
ಕೆರೆಗಳು    1,585    7
ಬಸ್‌ ಸಂಚಾರ    1,037    4
ಮಳೆನೀರು ಕಾಲುವೆ    631    2

Advertisement

Udayavani is now on Telegram. Click here to join our channel and stay updated with the latest news.

Next