Advertisement

ಹುದ್ದೆ ಖಾಯಂಗೆ ಆಗ್ರಹಿಸಿ ಮನವಿ ಸಲ್ಲಿಕೆ

03:55 PM Feb 06, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ MRW, VRW ಹಾಗೂ URW ಅವರನ್ನು ಖಾಯಂಗೊಳಿಸಬೇಕೆಂಬ ಬೇಡಿಕೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ  ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಘಟಕ ಜಿಲ್ಲಾಧಿಕಾರಿ ಆರ್‌.ಲತಾ ಅವರಿಗೆ ಮನವಿ ಸಲ್ಲಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದಡಿ  ಪದವೀಧರ ಅರ್ಹ ವಿಕಲಚೇನರನ್ನು 176 ತಾಲೂಕುಗಳಿಗೆ ಎಂಆರ್‌ಡಬ್ಲೂé ಆಗಿ ಅಂದಿನ 5,628 ಗ್ರಾಪಂಗಳಿಗೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅರ್ಹ ವಿಕಲಚೇತನರನ್ನು ವಿಆರ್‌ಡಬ್ಯೂ ಆಗಿ ಹಾಗೂ 613 ಪುರಸಭೆ ನಗರ ಮಹಾನಗರ ಪಾಲಿಕೆಗಳಿಗೆ ಯುಆರ್‌ಡಬ್ಯೂ ಆಗಿ 05 ಜನ ಸದಸ್ಯರನ್ನೊಳಗೊಂಡ ನೇಮಕಾತಿ ಸಮಿತಿ ಆಯ್ಕೆ ಮಾಡಿದೆ.

6022 ಗ್ರಾಪಂಗಳ ಪೈಕಿ 4,906 ವಿಆರ್‌ ಡಬ್ಯೂ, 225 ತಾಲೂಕುಗಳ ಪೈಕಿ 169 ಎಂಆರ್‌ಡಬ್ಯೂ ಹಾಗೂ 613 ಪುರಸಭೆ ನಗರಸಭೆ ಮಹಾನಗರ ಪಾಲಿಕೆಗಳ ಪೈಕಿ 75 ಯುಆರ್‌ಡಬ್ಯೂ ನೇಮಕಾತಿಗೊಂಡು ಕಳೆದ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗೆ 5150 ಕಾರ್ಯಕರ್ತ ರಾಜ್ಯ ಸರ್ಕಾರ ಕಳೆದ ಫೆಬ್ರವರಿ 2020ರಲ್ಲಿ ಗೌರವಧನ ದುಪ್ಪಟ್ಟುಗೊಳಿಸಿದೆ. ಎಂಆರ್‌ಡಬ್ಯೂ ವಿಆರ್‌ ಡಬ್ಯೂ ಯುಆರ್‌ಡಬ್ಯೂé ಅವರನ್ನು ಖಾಯಂಗೊಳಿಸಬೇಕೆಂಬ ಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ :ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿ ಪಲ್ಟಿಯಾದ ಕಾರು: ಚಾಲಕನಿಗೆ ಗಂಭೀರ ಗಾಯ

ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ದೇಶ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್‌.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಡಿ.ಟಿ. ರಾಮಚಂದ್ರ, ಎ.ವಿ.ರಾಮಪ್ಪ, ಸುರೇಶ್‌ ಚಿಕ್ಕಬಳ್ಳಾಪುರ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next