Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಗ್ಯಾರಂಟಿಯಲ್ಲಿ ಸರ್ಕಾರಿ ನೌಕರರಿಗೆ ವೇತನದ ಸಮಸ್ಯೆ ಬರಲ್ಲ. ಸರ್ಕಾರ ಈಗಾಗಲೇ ನಮಗೆ ಶೇ.17ರಷ್ಟು ವೇತನ ಹೆಚ್ಚಿಸಿದೆ. ರಾಜ್ಯದ ಬಜೆಟ್ 3.25 ಲಕ್ಷ ಕೋಟಿ ರೂ. ಇದೆ. ಸರ್ಕಾರಕ್ಕೆ ನೌಕರರ ವೇತನ ದೊಡ್ಡ ಮೊತ್ತವಲ್ಲ. ಆಯೋಗ ಶಿಫಾರಸು ಮಾಡುವಷ್ಟು ನಮಗೆ ಕೊಟ್ಟರೆ ಮುಗಿಯುತ್ತದೆ. ಹಿಂದಿನ ಸರ್ಕಾರ ವರದಿ ಬಂದ ಬಳಿಕ ನಿರ್ಧಾರ ಕೈಗೊಳ್ಳುತ್ತೇವೆ ಎಂದಿತ್ತು. ನಾವು 40 ಪರ್ಸೆಂಟ್ ವೇತನ ಕೇಳಿದ್ದೇವೆ. ಆಯೋಗ ಶಿಫಾರಸು ಮಾಡಿದ ಮೇಲೆ ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಹಿಂದೆ ಸಿದ್ದರಾಮಯ್ಯ ಅವರು 6ನೇ ವೇತನ ಆಯೋಗಕ್ಕೆ ಶೇ.30ರಷ್ಟು ವೇತನ ಹೆಚ್ಚಳಕ್ಕೆ ಆದೇಶಿಸಿದ್ದರು. ಹಿಂದೆ ಕೊಟ್ಟಿದ್ದಾರೆ, ಈಗ ಕೊಟ್ಟೇ ಕೊಡುತ್ತಾರೆ ಎನ್ನುವ ಭರವಸೆಯಿದೆ ಎಂದರು.
ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯದ ವಿಚಾರ ನನಗೆ ಗೊತ್ತಿಲ್ಲ. ಅವರು ಅಖೀಲ ಭಾರತ ಲಿಂಗಾಯತ ಸಮುದಾಯ ರಾಷ್ಟ್ರೀಯ ಅಧ್ಯಕ್ಷರು, ನಾನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ. ನಮ್ಮಲ್ಲಿ ಎಲ್ಲರೂ ಇರುತ್ತಾರೆ. ಅಂತಹ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಆ ತರಹದ ವಿಷಯ ಗಮನಕ್ಕೆ ಬಂದರೆ ನಾವು ಸರ್ಕಾರದ ಗಮನಕ್ಕೆ ತರುತ್ತೇವೆ. ಅದಕ್ಕೆ ಅವರೇ ಉತ್ತರಿಸಬೇಕು ಎಂದು ಷಡಕ್ಷರಿ ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ 2012ರಲ್ಲಿ ಸಂಘದ ಬೈಲಾ ತಿದ್ದುಪಡಿಯಾಗಿತ್ತು. 2022ರಲ್ಲಿ ಸಮಗ್ರ ತಿದ್ದುಪಡಿ ಮಾಡಲಾಗಿತ್ತು. 150 ಪುಟದ ಬೈಲಾ ಮಾಡಿದ್ದೇವು. ಆದರೆ ಅದರಲ್ಲಿ ಕಠಿಣ ಅಂಶಗಳು ಇದ್ದವು. ಆರೇಳು ವಿಷಯ ತಿದ್ದುಪಡಿ ಮಾಡಬೇಕೆಂದು ಹಲವು ಸದಸ್ಯರು ಪ್ರತಿ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದರು. ತಕ್ಷಣ, ಶೀಘ್ರ ಎನ್ನುವ ಪದಗಳನ್ನು ತೆಗೆಯಬೇಕೆನ್ನುವ ಒತ್ತಾಯ ಮಾಡಿದ್ದರು. ಬೈಲಾದಲ್ಲಿ ಮೂಲ ಸ್ವರೂಪದಲ್ಲಿ ಧಕ್ಕೆ ಇಲ್ಲದೆ ಪದಗಳಲ್ಲಿ ವ್ಯತ್ಯಾಸವನ್ನು ತಿದ್ದುಪಡಿ ಮಾಡಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾಗಿಲ್ಲ.
Related Articles
Advertisement
ಅ.27ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ತುಮಕೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಸನ್ಮಾನ ಹಮ್ಮಿಕೊಳ್ಳಲು ಉದ್ದೇಶಿಸಿದೆ. 12-15 ಸಾವಿರ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಸಿಎಂ ಅವರೇ ಉದ್ಘಾಟನೆ ಮಾಡಲಿದ್ದಾರೆ. ಸರ್ಕಾರಿ ನೌಕರರು ಮೃತಪಟ್ಟರೆ ಅವರಿಗೆ ವಿಮೆ ಹೊರತುಪಡಿಸಿ ವೇತನ ಖಾತೆ ಇರುವ ಬ್ಯಾಂಕ್‌ನಲ್ಲಿ ಇನ್ಸೂರೆನ್ಸ್ ಕವರೇಜ್ ಮಾಡುವ ಕುರಿತು ಬ್ಯಾಂಕ್‌ಗಳಿಗೆ ಮಾತನಾಡಿದ್ದೇವೆ. ಸರ್ಕಾರಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡುವ ಕುರಿತು ಸಭೆ ನಡೆದಿದೆ. ಬ್ಯಾಂಕ್‌ನವರು ತಾತ್ವಿಕವಾಗಿ ಒಪ್ಪಿದ್ದಾರೆ, ಅನುಕಂಪದ ನೌಕರಿ ಸ್ಥಗಿತ ಮಾಡಿಲ್ಲ, ಸರ್ಕಾರ ಅದನ್ನು ಮಾಡಿಯೇ ಮಾಡುತ್ತದೆ ಎಂದರು.