Advertisement

ಅವಳಿ ಶಾರದಾ ಮಾತೆಯರ ಶೋಭಾಯಾತ್ರೆ

02:47 PM Oct 20, 2018 | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜಿಸಲಾದ ಶಾರದಾ ಮಾತೆಯ ಶೋಭಾಯಾತ್ರೆ ಭಕ್ತಿ ಸಡಗರದಿಂದ ನಡೆಯಿತು. ಸುಬ್ರಹ್ಮಣ್ಯದ ದೇವರಗದ್ದೆಯ ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಮತ್ತು ಅಂಗನವಾಡಿ ಕೇಂದ್ರ ದೇವರಗದ್ದೆ ಇದರ ಆಶ್ರಯದಲ್ಲಿ 17ನೇ ವರ್ಷದ ಶಾರದೋತ್ಸವದಲ್ಲಿ ಪೂಜಿಸಲ್ಪಟ್ಟ ಶಾರದಾ ಮಾತೆ ಹಾಗೂ ಸುಬ್ರಹ್ಮಣ್ಯದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ಉತ್ತರಾದಿ ಮಠದಲ್ಲಿ ಪೂಜಿತ 11ನೇ ವರ್ಷದ ಶಾರದೋತ್ಸವದ ಶಾರದಾ ಮಾತೆಯ ಶೋಭಾಯಾತ್ರೆ ಏಕಕಾಲದಲ್ಲಿ ನಡೆಯಿತು.

Advertisement

ದೇವರಗದ್ದೆಯಿಂದ ಹೊರಟ ಮೆರವಣಿಗೆ ಶ್ರೀ ದೇವಸ್ಥಾನದ ರಥಬೀದಿಯ ತನಕ ಸಾಗಿತು. ಸುಬ್ರಹ್ಮಣ್ಯದಲ್ಲಿ ಪೂಜಿತ ಶಾರದಾ ಮಾತೆ ಜತೆಗೂಡಿ ಶೋಭಾಯಾತ್ರೆ ಮುಂದುವರಿಯಿತು. ಶ್ರೀ ಗೋಪಾಲಕೃಷ್ಣ ಭಜನ ಮಂಡಳಿ ಬಿಳಿನೆಲೆಯ ತಂಡದಿಂದ ಆಕರ್ಷಕ ಕುಣಿತ ಭಜನೆ ಮೆರವಣಿಗೆಯಲ್ಲಿತ್ತು. ಶೋಭಾಯಾತ್ರೆ ಸಾಗುವ ವೇಳೆ ಶ್ರೀ ಶಾರದಾ ಮಾತೆಗೆ ಭಕ್ತರು ಅಲ್ಲಲ್ಲಿ ಹಣ್ಣುಕಾಯಿ ಮತ್ತು ಆರತಿ ನೀಡಿ, ಪ್ರಸಾದ ಸ್ವೀಕರಿಸಿದರು. ಪುಣ್ಯ ನದಿ ಕುಮಾರಧಾರಾದಲ್ಲಿ ಎರಡೂ ಶಾರದಾ ವಿಗ್ರಹಗಳನ್ನು ಜಲಸ್ತಂಭನಗೊಳಿಸಲಾಯಿತು. ಆಕರ್ಷಕ ಕುಣಿತ ಭಜನೆ, ಹುಲಿ ವೇಷ, ಶಾರ್ದೂಲ ವೇಷಗಳು ಶೋಭಾಯಾತ್ರೆಯ ಆಕರ್ಷಣೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next