Advertisement

ಕುಕ್ಕೆ: ಸರಣಿ ರಜೆ ಹಿನ್ನೆಲೆ ಭಕ್ತಸಂದಣಿ

06:07 AM Jan 28, 2019 | |

ಸುಬ್ರಹ್ಮಣ್ಯ: ಎರಡು ದಿನಗಳ ಸತತ ಸರಕಾರಿ ರಜೆ ಮತ್ತು ಶನಿವಾರ ಷಷ್ಠಿ ತಿಥಿಯೂ ಇದ್ದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವಿವಾರವೂ ಭಾರೀ ಜನಸಂದಣಿ ಕಂಡುಬಂದಿದೆ.

Advertisement

ಕ್ಷೇತ್ರಕ್ಕೆ ನಾಡಿನ ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರಲ್ಲದೆ, ವಿವಿಧ ಸೇವೆಗಳನ್ನು ಪೂರೈ ಸಿದರು. ಶುಕ್ರವಾರದಿಂದಲೇ ಯಾತ್ರಿಗಳ ಸಂಖ್ಯೆ ಜಾಸ್ತಿಯಾಗಿತ್ತು. ದೇಗುಲದ ಹಾಗೂ ಖಾಸಗಿ ವಸತಿ ಗೃಹಗಳು ಭರ್ತಿಯಾಗಿದ್ದವು. ತಂಗಲು ಕೊಠಡಿ ಸಮಸ್ಯೆ ಉಂಟಾಯಿತು.

ಮಹಾಪೂಜೆ, ಶೇಷಸೇವೆ, ಪಂಚಾಮೃತ ಅಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಸೇವೆಗಳನ್ನು ಭಕ್ತರು ನೆರವೇರಿಸಿದರು. ಬೆಳಗ್ಗೆಯಿಂದ ದೇವರ ದರ್ಶನ, ಸೇವೆಗಳಿಗೆ ಉದ್ದನೆಯ ಸರದಿಯಿತ್ತು. ದೇಗುಲದ ಒಳಾಂಗಣ, ಹೊರಾಂಗಣ ಮತ್ತು ಪರಿಸರದಲ್ಲೆಲ್ಲ ಭಕ್ತ ಸಾಗರವೇ ತುಂಬಿತ್ತು. ಜನಜಂಗುಳಿಯನ್ನು ನಿಯಂತ್ರಿಸಲು ಕಡಿಮೆ ಸಂಖ್ಯೆಯಲ್ಲಿದ್ದ ಭದ್ರತಾ ಸಿಬಂದಿ, ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬಂದಿ ಹರಸಾಹಸಪಟ್ಟರು.

ಮುಖ್ಯ ರಸ್ತೆಯಲ್ಲಿ ಅಂಗಡಿ- ಮುಂಗಟ್ಟುಗಳ ಮುಂದೆ ತಾಸುಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿತ್ತು. ಕುಮಾರಧಾರಾದಿಂದ ರಥಬೀದಿ ತನಕ ಸಾಲಾಗಿ ವಾಹನಗಳು ನಿಂತಿದ್ದವು.

ಆದಿ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಜನಸಂದಣಿ ಇತ್ತು. ಮುಖ್ಯ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ಗೋಪುರ ತನಕವೂ ಸರದಿ ಸಾಲು ಇತ್ತು. ಭೋಜನ ಪ್ರಸಾದ ಸ್ವೀಕರಿಸಲೂ ಸಾಕಷ್ಟು ಕಾಯಬೇಕಾಯಿತು. ಕುಮಾರಧಾರಾ ಸ್ನಾನ ಘಟ್ಟದಲ್ಲೂ ಅತ್ಯಧಿಕ ಭಕ್ತ ಸಂದಣಿ ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next