Advertisement
ಅಭಿಷೇಕ್ ನಾಯ್ಡುಅಭಿ; ಸಾವಿನ ಜೊತೆಗೆ ಸೆಣಸಿದ ,ಸಾವಿನಲ್ಲೂ ಗೂಢವಾಗಿಯೆ ಉಳಿದ ದೇಶದ ಮಹಾನ್ ಸ್ವತಂತ್ರ ಹೋರಾಟಗಾರ ಸುಭಾಷ್ ಚಂದ್ರಬೋಸ್ ಎಂದರೆ ಪ್ರತಿಯೊಬ್ಬ ಭಾರತೀಯನ ಹೆಮ್ಮೆ. ಯೋಧ, ಕೆಚ್ಚೆದೆಯ ಶೂರ, ತಾಯಿ ಭಾರತಾಂಬೆಯ ನಲ್ಮೆಯ ಪುತ್ರ ಸುಭಾಶರು ಆಂಗ್ಲರ ಸರ್ಕಾರಿ ಉದ್ಯೋಗ ತ್ಯಜಿಸಿ ಗಾಂಧಿಯ ಜೊತೆ ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಆದರೆ ಎಲ್ಲಿಯ ಶಾಂತಿ,ಎಲ್ಲಿಯ ಕ್ರಾಂತಿ . ಕಾಂಗ್ರೆಸ್ ತ್ಯಜಿಸಿ ಕ್ರಾಂತಿಯ ಮಾರ್ಗದಲ್ಲಿ ಸಾಗಿದ ಬೋಸರನ್ನು ಜೈಲಿಗೆ ಗೃಹ ಬಂಧನಕ್ಕೆ ತಳ್ಳಿದ ಆಂಗ್ಲರು. ಗೃಹ ಬಂಧನದಿಂದ ಮಾಯವಾದ ಬೋಸರು ಜರ್ಮನಿಯಿಂದ ಜಪಣಿನವರೆಗು, ಹಿಟ್ಲರ್ ನಿಂದ ಮುಸೊಲಿನಿವರೆಗೂ ಸುತ್ತಾಡಿ ಕ್ರಾಂತಿಕಾರಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ ಬ್ರಿಟಿಷ್ ಆಡಳಿತದ ವಿರುದ್ಧ ಸಮರ ಸಾರಿದರು. ಪ್ರಾದೇಶಿಕ ಸರ್ಕಾರ ಸ್ಥಾಪಿಸಿ ಅದರ ಪ್ರಧಾನಿ ಆಗು ಸೈನ್ಯದ ಮಹಾದಂಡನಾಯಕರಾದರು. ಇಲ್ಲಿ ಶಾಂತಿ ಮಂತ್ರ ಜಪಿಸುತ್ತಾ ಕಾಲಹರಣ ಮಾಡುತ್ತಿದ್ದರೆ ಅಲ್ಲಿ ಅಖಂಡ ಭಾರತದ ಕನಸು ಹೊತ್ತು ಅಂಗ್ಲಾರೆದುರು ಸೈನ್ಯ ನುಗ್ಗಿಸಿದರು .ಬರ್ಮಾ ಅಂಡಮನುಗಳಲ್ಲಿ ತ್ರಿವರ್ಣ ಧ್ವಜವನ್ನು ಏರಿಸಿ ಸ್ವಾತಂತ್ರ್ಯದ ಮೊದಲ ಸ್ವಾದ ಸವಿದರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೆಗುತಿದ್ದ ಆಂಗ್ಲರಿಗೆ ಸೋಲಿನ ರುಚಿ ತೋರಿಸಿದರು. ಜಪಾನಿನ ಶರಣಾಗತಿಯ ಕಾರಣ ಇಂದೆಜ್ಜೆ ಉಂಟಾಯಿತು. ಆಗಸ್ಟ್ 18 1945 ರಂದು ವಿಮಾನ ಅಪಘಾತದಲ್ಲಿ ವೀರ ಮರಣ ಹೊಂದಿದರೆಂದು ಶಕಿಸಲಾಯಿತು.ಆದರೂ ಅದಕ್ಕೆ ಪುರಾವೆ ಇಲ್ಲ. ಬಹುಶ ಆ ವೀರನ ಸಾಹಸ ಗಾದೆಯನೋಡಲು ದೇವರು ಬೇಚಿಬಿದ್ದನೇನೋ . ನಮ್ಮವರ ಸಂಚಿಗೆ ಬಲಿಯದರೇನೋ, ಸ್ವಾತಂತ್ರ ನಂತರವೂ ಬದುಕಿದ್ದರೆನೋ, ಬಲ್ಲವರಾರು ಕಟು ಸತ್ಯವ.ದೇಶವೆ ಉಸಿರೆಂಡ ವ್ಯಕ್ತಿಗೆ ಇಂತಹ ಸ್ಥಿತಿ ಬಂತು ಯಾಕಾದರೂ . ಸೂರ್ಯ ಮುಳುಗದ ಸಾಮ್ರಾಜ್ಯವ, ತಾನೊಬ್ಬನೇ ಮುಳುಗಿಸಲು ಹೊರಟ ಶಕ್ತಿಯ ಕೊನೆಯ ಬಗ್ಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಸತ್ಯ ತಿಳಿಯದು. ಜೈ ಹಿಂದ್ ಜೈ ನೇತಾಜಿ
Advertisement
ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
04:49 PM Jan 23, 2020 | keerthan |