Advertisement

ಕಡತಕ್ಕೆ 100 ವರ್ಷ ದಿಗ್ಬಂಧನ!

11:00 AM Dec 01, 2017 | Team Udayavani |

ಚೆನ್ನೈ: ಸುಭಾಶ್ಚಂದ್ರ ಬೋಸ್‌ ಸಾವಿನ ರಹಸ್ಯವನ್ನು ಬಿಚ್ಚಿಡಬಹುದಾಗಿದ್ದ ಮಹತ್ವದ ದಾಖಲೆಯೊಂದು ಫ್ರಾನ್ಸ್‌ನ ಪುರಾತತ್ವ ಇಲಾಖೆಯಲ್ಲಿದ್ದು, ಇದನ್ನು 100 ವರ್ಷ ಗಳವರೆಗೆ ಬಹಿರಂಗಗೊಳಿಸದಂತೆ ನಿರ್ಬಂ ಧಿಸ ಲಾಗಿದೆ. ಈ ದಾಖಲೆಯನ್ನು ಪಡೆಯಲು ಪ್ಯಾರಿಸ್‌ನ ಇತಿಹಾಸಕಾರ ಜೆಬಿಪಿ ಮೋರ್‌ ಪ್ರಯತ್ನ ನಡೆಸಿ, ಫ್ರಾನ್ಸ್‌ ಸೇನಾಧಿಕಾರಿಗಳಿಗೆ ಪತ್ರ ಬರೆದಿದ್ದರಾದರೂ ಇದನ್ನು 100 ವರ್ಷಗಳವರೆಗೆ ಬಹಿರಂಗ ಗೊಳಿಸದಂತೆ ನಿರ್ಬಂಧಿಸಲಾಗಿದೆ ಎಂದು ಫ್ರಾನ್ಸ್‌ ಸೇನೆ ಉತ್ತರಿಸಿದೆ.

Advertisement

ಮೋರ್‌ ಹೇಳುವಂತೆ ಬೋಸ್‌ ಸಾವನ್ನ ಪ್ಪಿದ್ದು ತೈಪೆಯಲ್ಲಿ ವಿಮಾನ ದುರಂತದಲ್ಲಲ್ಲ. ಬದಲಿಗೆ ಸೈಗಾನ್‌ನಲ್ಲಿ ಅವರನ್ನು ಬಂಧಿ ಸಲಾಗಿತ್ತು.1945ರ ವೇಳೆ ವಿಯೆಟ್ನಾಂ ಬೋಟ್‌ ಕ್ಯಾಟಿನಟ್‌ ಜೈಲಿನಲ್ಲಿ ಅವರು ಸಾವನ್ನ ಪ್ಪಿರಬಹುದು ಎಂದು ಮೋರ್‌ ಹೇಳಿದ್ದು, ಈ ವಿವರಗಳು ಫ್ರಾನ್ಸ್‌ ಸೇನೆಯ ಬಳಿ ಇರುವ ದಾಖಲೆಯಲ್ಲಿವೆೆ. ಇದೇ ಕಾರ ಣಕ್ಕೆ ಫ್ರಾನ್ಸ್‌ ಇದನ್ನು ಬಹಿರಂಗಗೊಳಿಸುತ್ತಿಲ್ಲ ಎಂದಿದ್ದಾರೆ. 

ಕಳೆದ ಜುಲೈಯಲ್ಲಿ ಫ್ರೆಂಚ್‌ ಗುಪ್ತಚರ ವರದಿ ಆಧರಿಸಿ ಮೋರ್‌ ಈ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ವೇಳೆ ಬೋಸ್‌ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದರೆ, ಅವರ ಬೂದಿ ಯನ್ನು ಡಿಎನ್‌ಎ ಪರೀಕ್ಷೆ ಮಾಡಬೇಕಿತ್ತು. ಹಾಗೆ ಮಾಡಿಲ್ಲದ್ದರಿಂದ ಬೋಸ್‌ ಅಲ್ಲಿ ಸಾವನ್ನಪ್ಪಿಲ್ಲ ಎಂದು ಖಚಿತವಾಗಿ ಹೇಳ ಬಹುದು. ಬೋಸ್‌ ಕುರಿತು ಸೈಗನ್‌ ಪೊಲೀಸ್‌ ಮುಖ್ಯಸ್ಥರಾಗಿದ್ದ ಕ್ಯಾಪ್ಟನ್‌ ಪಾವೆಲ್ಸ್‌  ವರದಿ ಮಾಡಿರುವ ಕಡತ ಇದಾಗಿದ್ದು, ಈ ಪ್ರಕರಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಬೋಸ್‌ ಹಾಗೂ ಅವರ ಸಹಚರರನ್ನು ಪಾವೆಲ್ಸ್‌  ಬಂಧಿಸಿದ್ದರು ಎಂದು ಮೋರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next