Advertisement

ಸುಬ್ಬು-ಶಾಲಿನಿ ಪ್ರಕರಣಂ-5

06:00 AM Apr 29, 2018 | |

ಬೆಳಿಗ್ಗೆ ಒಂಬತ್ತು, ಕಾರ್ಖಾನೆಯಲ್ಲಿ ಕಾಫಿಯ ಸಮಯ. ಆಗಲೇ ಒಂದು ಗಂಟೆ ಕೆಲಸ ಮುಗಿದಿತ್ತು. ಸುಬ್ಬುವನ್ನು ಮಾತಾಡಿಸಿಕೊಂಡು ಬರಲು ಅವನ ಡಿಪಾರ್ಟ್‌ಮೆಂಟಿಗೆ ನಡೆದೆ. ಕಳೆದ ಸಾರಿಯೇ ಹೇಳಿದ್ದೇನಲ್ಲ , ಸುಬ್ಬು ಆಲಿಯಾಸ್‌ ಸುಭಾಷ್‌ ಮತ್ತು ನಾನು ಚಡ್ಡಿ ದೋಸ್ತುಗಳು. ಅಂದರೆ ಚಡ್ಡಿ ಹಾಕುತ್ತಿದ್ದ ಕಾಲದಿಂದ ಸ್ನೇಹಿತರು. ಒಂದೇ ಕಾಲೇಜಿನಲ್ಲಿ ಓದಿ ಒಂದೇ ಫ್ಯಾಕ್ಟರಿಯಲ್ಲಿ, ಪುಣ್ಯಕ್ಕೆ ಬೇರೆ ಬೇರೆ ಡಿಪಾರ್ಟುಮೆಂಟುಗಳಲ್ಲಿ ಕೆಲಸ. ಸುಬ್ಬು ಒಂಥರಾ ಮನುಷ್ಯ. ಒಳ್ಳೆಯವನೇ ಆದರೂ ಕೆಲ ಸಮಯ ತಲೆನೋವು ಕೊಡುತ್ತಾನೆ.

Advertisement

ಕೆಲಸದ ನಿಮಿತ್ತ ಆವನ ಡಿಪಾರ್ಟ್‌ಮೆಂಟಿಗೆ ಹೋಗಿದ್ದೆ. ಅಲ್ಲಿ ಸುಬ್ಬು ಮಾಡ್ತಿದ್ದ ಕೆಲಸ ನೋಡಿ ಬೆಚ್ಚಿದೆ. “”ಏನ್ಮಾಡ್ತಿದ್ದೀಯೋ? ಕೆಲಸ ಬಿಟ್ಟು ಆಹಾರ ಭಕ್ಷಣೆಯಲ್ಲಿ ತೊಡಗಿದ್ದ ಸುಬ್ಬುವನ್ನು ಅಚ್ಚರಿಯಿಂದ ಕೇಳಿದೆ. “”ಕಾಣಿಸ್ತಿಲ್ವಾ?” ಸುಬ್ಬು  ಗುರ್ರೆಂದ. “”ಕಾಣಿಸ್ತಿದೆ, ಆದ್ರೆ ಯಾಕೆ?” ಛಲಬಿಡದ ತ್ರಿವಿಕ್ರಮ ಬೇತಾಳನನ್ನು ಕೇಳಿದಂತೆ ಕೇಳಿದೆ. ಸುಬ್ಬು ನನ್ನ ಮಾತಿಗೆ ಕ್ಯಾರೇ ಎನ್ನದೆ ಏಕಾಗ್ರತೆಯಿಂದ ಬಿಸಿಬೇಳೆ ಬಾತು ತಿನ್ನುವುದು ಮುಂದುವರಿಸಿದ.  “”ಕ್ಯಾಂಟೀನ್‌ ಬಿಸಿಬೇಳೆ ಬಾತು ಇಲೆಗೆ ಬಂತು?” ಮತ್ತೆ ಕೇಳಿದೆ.””ನಾನೇ ತರಿಸ್ಕೊಂಡೆ” ಎಂದ.

“”ಯಾಕೆ? ಮನೇಲಿ ಶಾಲಿನಿಯತ್ತಿಗೆ ತಿಂಡಿ ಮಾಡಿರಲಿಲ್ವಾ?” “”ಮಾಡಿದು… ಆದ್ರೆ ?” ಯಾವುದೋ ರಹಸ್ಯ ಹೇಳುವವನಂತೆ ಮಾತು ಎಳೆದು ನಿಲ್ಲಿಸಿದ.””ಆದ್ರೆ…?” ಏನೋ ಅದು ಕೆಟ್ಟ ಸಸ್ಪೆನ್ಸು.””ತಿನ್ನೋಕಾಗ್ಲಿಲ್ಲ?” ಸುಬ್ಬು ಅಳುವುದೊಂದು ಬಾಕಿ ಇತ್ತು.
“”ಯಾಕೆ?” “”ಹೀಗೇ ಯಾಕೆ? ಏನೂಂತ ಕೇಳ್ತಿದ್ರೆ ನಿನ್ನ ದಂತಪಂಕ್ತೀಲಿ ಒಂದೆರಡು ಕಳ್ಕೊàತೀಯ” ಗುಡುಗಿದ ಸುಬ್ಬು. 
“”ಶಾಲಿನಿಯತ್ತಿಗೆ ಚೆನ್ನಾಗೇ ಅಡಿಗೆ ಮಾಡ್ತಾರೆ ! ನೀನು ನೋಡಿದ್ರೆ ತಿನ್ನೋಕಾಗ್ಲಿಲ್ಲ ಅಂತಿದ್ದೀಯ” ಅವನ ಗುಡುಗಿಗೆ ನಡುಗದೆ ಮಾತು ಮುಂದುವರಿಸಿದೆ. 

“”ಮಾಡ್ತಾರೆ ಅಲ್ಲ, ಮಾಡ್ತಿದ್ದಳು ಅನ್ನು” ಎನ್ನುತ್ತ ಕೆಕ್ಕರಿಸಿ ನೋಡಿದ.””ಅಂದ್ರೆ?” ಅರ್ಥವಾಗದೆ ಕನಲಿದೆ. “”ಅದು ಭೂತಕಾಲದ್ದು. ಚೆನ್ನಾಗಿ ಅಡಿಗೆ ಮಾಡುತ್ತಿದ್ದಳು ಆಗ! ಈಗಲ್ಲ! ಇದು ವರ್ತಮಾನ. ಈಗ ನನ್ನ ಕೆಲಸಕ್ಕೆ ಅಡ್ಡಿ ಮಾಡ್ಬೇಡ”
ಮಾತು ಒಗಟಾಗಿತ್ತು, ಜಿಗುಟಾಗಿತ್ತು. ಅರ್ಥವಾಗಲಿಲ್ಲ. “”ಭೂತಕಾಲದ್ದು ಅಂದರೆ?” ಕನಲಿದೆ.

“”ಲೋ, ಟ್ಯೂಬ್‌ಲೈಟುಗಳ ಜಾಗದಲ್ಲೀಗ ಎಲ್‌ಇಡಿ ಬಲುºಗಳು ಬಂದಿದಾವೆ. ಈಗಲೂ ಟ್ಯೂಬ್‌ಲೈಟಿನ ಥರ ಆಡ್ಬೇಡ. ನೋಡು ಒಂದು ಕಾಲದಲ್ಲಿ ನಿನ್ನ ಮಾತು ನಿಜವಾಗಿತ್ತು. ಶಾಲಿನಿ ಚೆನ್ನಾಗಿ ಅಡಿಗೆ ಮಾಡ್ತಿದ್ದಳು. ಎಲ್ಲ ಅವಳ ಅಡಿಗೇನ ಹೊಗಳ್ತಿದ್ದರು. ನಾನೂ ಚಪ್ಪರಿಸಿಕೊಂಡು ತಿನಿ¤¨ªೆ. ಅದು ಆಗ. ಆ ಕಾಲದಲ್ಲಿ” ಸುಬ್ಬು ಟಿವಿ ವಿಶ್ಲೇಷಕರಂತೆ ವಿವರಿಸಿದ.  

Advertisement

“”ಆ ಕಾಲದಲ್ಲಿ ಅಂದ್ರೆ?”””ಮೊಬೈಲು, ಇಂಟರ್‌ನೆಟ್ಟು, ವಾಟ್ಸಾಪ್ಪು ಇಲ್ಲದ ಕಾಲದಲ್ಲಿ”ವಿಶ್ವ ಹೇಳಿದ್ದು ನಂಬಲಾಗಲಿಲ್ಲ !
“”ಏನು? ಇನ್ನೊಂದ್ಸಲ ಹೇಳು”””ಯಾಕೆ ಕಿವಿ ಮುಚೊಡಿದೆಯಾ? ಇಲ್ಲಾ ಫ್ಯಾಕ್ಟ್ರಿ ಮೆಷಿನ್ನುಗಳ ಶಬ್ದಕ್ಕೆ ಕಿವಿ ಕಿವುಡಾಗಿದೆಯಾ? ಇನ್ನೊಂದ್ಸಲ, ಕೊನೇ ಸಲ ಹೇಳ್ತೀನಿ. ಚೆನ್ನಾಗಿ ಕೇಳಿಸ್ಕೋ. ಮೊಬೈಲು, ಇಂಟರ್‌ನೆಟ್ಟು, ಫೇಸುºಕ್ಕು, ವಾಟ್ಸಾಪು ಇಲ್ಲದ ಕಾಲದಲ್ಲಿ ವಿಶಾಲೂ ಯಾನೆ ನಿನ್ನ ಅತ್ತಿಗೆ ಚೆನ್ನಾಗಿ ಅಡಿಗೆ ಮಾಡ್ತಿದ್ದಳು”””ಎಷ್ಟು ರುಚಿಯಾಗಿ ಬಿಸಿಬೇಳೆ ಬಾತ್‌ ಮಾಡ್ತಿದ್ದರು?” ನಾನು ನೆನೆಸಿಕೊಂಡೆ.””ಈಗ ಬಿಸಿಯೂ ಇರಲ್ಲ. ರುಚಿಯೂ ಇರಲ್ಲ” ವಿಶ್ವ ತಿರಸ್ಕಾರದಿಂದ ಹೇಳಿದ.

“”ಉಪ್ಪಿಟ್ಟು ಸೊಗಸಾಗಿರ್ತಿತ್ತು? ಅದೇನು ಉಪ್ಪು, ಖಾರ ಹುಳಿಯ ಹದ! ವಾಹ್‌”””ಈಗದರಲ್ಲಿ ಉಪ್ಪೂ ಇರೋಲ್ಲ ಹದವೂ ಇರೋಲ್ಲ”
“”ರವಾ ಇಡ್ಲಿ ಬಾಯಲ್ಲಿ ಕರಗಿ ಹೋಗ್ತಿತ್ತು”””ಈಗ ಹಲ್ಲು ಮುರಿದು ಹೋಗುತ್ತೆ” “”ಆಹಾ! ಮಸಾಲೆ ಅಕ್ಕಿರೊಟ್ಟಿ ಮಾಡಿದರೆ ನಿಮ್ಮ ನಾಯಿ ಸೀಜರ್‌ ಹೊರಗೆ ಜೊಲ್ಲು ಸುರಿಸ್ತಾ, ಬಾಗಿಲ ಮುಂದೆ ಬಾಲ ಅಲ್ಲಾಡಿಸ್ತಾ ನಿಲ್ತಿತ್ತು” “”ಈಗದು ಕಾಂಪೌಂಡು ಹಾರಿ ಹೋಗುತ್ತೆ”
“”ಸುಬ್ಬು , ನಿಂದು ಅತಿಯಾಯ್ತು. ಅಷ್ಟು ಚೆನ್ನಾಗಿ ಅಡಿಗೆ ಮಾಡ್ತಿದ್ದ ಅತ್ತಿಗೆ ಒಮ್ಮೆಲೇ ಅದು ಹೇಗೆ ತಮ್ಮ ಕೈಚಳಕ ಕಳ್ಕೊಳ್ಳೋಕೆ ಸಾಧ್ಯ?” ಅವನ ಮಾತು ನಂಬದೆ ಕೇಳಿದೆ.

“”ಒಂದ್ನಿಮಿಷ ತಡ್ಕೊà, ಈ ಬಾತ್‌ ಮುಗಿಸಿಬಿಡ್ತೀನಿ. ಬಿಸಿ ಆರಿದ್ರೆ ಚೆನ್ನಾಗಿರೋಲ್ಲ” ವಿಶ್ವ ಬಿಸಿಬೇಳೆ ಬಾತ್‌ ಚಪ್ಪರಿಸುತ್ತ ತಿನ್ನುವುದನ್ನು ನೋಡದೆ ಬೇರೆ ದಾರಿ ಇರಲಿಲ್ಲ ! “”ತಿನ್ನೋದನ್ನ ನೋಡ್ಬೇಡ, ಹೊಟ್ಟೆ ನೋವು ಬರುತ್ತೆ. ಬೇರೆ ಕಡೆ ನೋಡು” ಎಂದು ಚಮಚಾ ತಿರುಗಿಸುತ್ತ ಅದಕ್ಕೆ ಅಂಟಿಕೊಂಡಿದ್ದ ಬಿಸಿಬೇಳೆ ಬಾತಿನ ಅಗುಳುಗಳನ್ನೂ ಬಿಡದೆ ತಿಂದ ! 
“”ಸರಿ, ಈಗ ಹೇಳು ಅದೇನು ಭೂತ, ಭವಿಷ್ಯ ಮತ್ತು ವರ್ತಮಾನದ ವಿಷಯ” “”ಓ… ಅದಾ? ನಿನ್ನ ಹೆಂಡತಿ ಸಂಜೆ ಏನ್ಮಾಡ್ತಾರೆ?” ನನಗೇ ಪ್ರಶ್ನೆ ಹಾಕಿದ. “”ಟಿವಿ ನೋಡ್ತಾಳೆ. ರಾತ್ರಿ ಅಡಿಗೆ ಮಾಡ್ತಾಳೆ, ಎಲ್ಲ ಊಟ ಮಾಡ್ತೀವಿ. ಆಮೇಲೆ ಕಿಚನ್ನಿನಲ್ಲಿ ಉಳಿದ ಕೆಲಸ ಮುಗಿಸಿ ಬರ್ತಾಳೆ” “”ಸಾಕು. ಮುಂದಿಂದು ಸೆನ್ಸಾರು! ನಿಮ್ಮತ್ತಿಗೆ ವಿಶಾಲೂ ಏನ್ಮಾಡ್ತಾಳೆ ಗೊತ್ತಾ?” ಸುಬ್ಬು ರಹಸ್ಯ ಹೇಳುವನಂತೆ ಮುಂದುವರಿಸಿದ. “”ಇನ್ನೇನ್ಮಾಡ್ತಾರೆ? ನನ್ನ ಮನೆಯವಳು ಮಾಡೋದೇ ಡಿಟ್ಟೋ” ಎಂದೆ.

“”ಅಲ್ಲೇ ಇರೋದು. ವಿಶಾಲೂ ಸಂಜೆ ಕಾಫಿ ಮುಗಿದ್ಮೇಲೆ ಕೈಯಲ್ಲಿ ಮೊಬೈಲು ಹಿಡಿದು ಟಿವಿ ಮುಂದೆ ಕೂರ್ತಾಳೆ. ಟಿವಿಯ ಮೆಗಾ ಧಾರಾವಾಹಿಗಳಲ್ಲಿ ಪಾತ್ರಗಳು ಕುಹಕ ಮಾತು, ಮನೆಹಾಳು ಐಡಿಯಾಗಳಿಂದ ವಿಜೃಂಭಿಸುತ್ತಾರೆ. ವಿಶಾಲೂ ಆಗಾಗ್ಗೆ ಟಿವಿಯತ್ತ ಕಣ್ಣು ಹಾಯಿಸುತ್ತ ಮೊಬೈಲಿನಲ್ಲಿ ವಾಟ್ಸಾಪ್‌, ಫೇಸುºಕ್‌ ಬಿತ್ತರಿಸುವ ಸಂದೇಶಗಳನ್ನು ನೋಡ್ತಿರ್ತಾಳೆ. ಆಗಾಗ್ಗೆ ವಾಟ್ಸಾಪ್ಪಿಗೆ ವಿಡಿಯೋ, ಫೋಟೋ ಇಂತಾವೆಲ್ಲಾ ಅಪ್‌ಲೋಡ್‌ ಮಾಡ್ತಿರ್ತಾಳೆ. ಮಧ್ಯದಲ್ಲಿ ತವರಿನಿಂದ ತಂಗಿ, ತಮ್ಮ, ಅಪ್ಪ-ಅಮ್ಮ, ಕಜಿನ್ನುಗಳಿಂದ ಕಿರಿಕಿರಿ ಕರೆಗಳು ಬರುತ್ತವೆ. ಬಾರದಿದ್ದರೆ ಇವಳೇ ಕರೆ ಮಾಡಿ ಕೊರೆಯುತ್ತಾ¤ಳೆ. ನಡುವೆ ಒಂದಿಷ್ಟು ಸಮಯ ವಿಡಿಯೋ ಗೇಮ್‌ ಆಡ್ತಾಳೆ. ಸಮಯ ಹಾಗೇ ಜಾರುತ್ತಿರುತ್ತೆ” ಸುಬ್ಬುವಿನ ಮಾತಿಗೆ ಬ್ರೇಕ್‌ ಹಾಕದಿದ್ದರೆ ಲಂಚ್‌ ಟೈಮೇ ಬಂದುಬಿಡುತ್ತೆ ಅನ್ನಿಸಿತು.

“”ಅದಕ್ಕೂ ಅತ್ತಿಗೆಯ ಅಡಿಗೆ ಕೆಟ್ಟಿರೋದಕ್ಕೂ ಏನೋ ಸಂಬಂಧ?” “”ಇದೆ, ಇದೆ. ಎರಡಕ್ಕೂ ಸಂಬಂಧ ಇದೆ. ರಾತ್ರಿ ಒಂಬತ್ತರ ಸಮಯಕ್ಕೆ ನಾನು ಕ್ಲಬ್‌ನಿಂದ ಬಂದಾಗ, ಪಿಂಕಿ-ಪವನ ರೂಮುಗಳಿಂದ ಬಂದು- “ಅಮ್ಮಾ ಊಟ’ ಅನ್ನುತ್ತಾರೆ. “ತಾಳೊ ನಿಮಗೆ ಸದಾ ಹೊಟ್ಟೇದೇ ಚಿಂತೆ. ಒಂದ್ನಿಮಿಷ ಈ ವಿಡಿಯೋ ಕಳಿಸಿ ಮಾಡ್ತೀನಿ’ ಅಂತ ಇನ್ನೂ ಹತ್ನಿಮಿಷ ಕಾಯಿಸಿ ಕಿಚನ್‌ಗೆ ಹೋಗ್ತಾಳೆ. ಹದಿನೈದು ನಿಮಿಷದಲ್ಲಿ ಅರ್ಜೆಂಟಾಗಿ ಏನೋ ಬೇಯಿಸಿ ತಂದು ಡೈನಿಂಗ್‌ ಟೇಬಲ್‌ ಮೇಲೆ ಬಡೀತಾಳೆ”

“”ಅದ್ರಲ್ಲೇನು ತಪ್ಪು? ಮೊಬೈಲು, ಟಿವಿ ಬರೀ ಗಂಡಸರಿಗೆ ಮಾತ್ರಾನಾ?” “”ತಪ್ಪು ಅದ್ರಲ್ಲಿ ಇಲ್ಲ. ಹದಿನೈದು ನಿಮಿಷದಲ್ಲಿ ದಡಾಬಡಾ ಮಾಡಿ ತಂದು ಟೇಬಲ್ಲಿನಲ್ಲಿ ಬಡೀತಾಳಲ್ಲ, ಅದ್ರಲ್ಲಿ. ಪವನ-ಪಿಂಕಿ ತಾವೆ ಬಡಿಸ್ಕೋತಾರೆ. ನಂಗೂ ಒಂದಿಷ್ಟು ಹಾಕ್ರೋ” ಎಂದು  ಮೊಬೈಲಿನಿಂದ ಕಣ್ಣು ತೆಗೆಯದೆ ಶಾಲಿನಿ ಹೇಳುತ್ತಾಳೆ.

“”ಏನೋ ಒಂದೊಂದು ದಿನ ಮೂಡು ಚೆನ್ನಾಗಿರೋಲ್ಲ. ಸ್ವಲ್ಪ ಅಡೆjಸ್ಟ್‌ ಮಾಡ್ಕೊàಬೇಕು” ನಾನು ಅತ್ತಿಗೆ ಪರ ವಹಿಸಿದೆ.
“”ನಮ್ಮ ನಾಲಿಗೆಗೆ ಶಾಲಿನಿ ಮೂಡು ತಿಳೀಯೊಲ್ಲವಲ್ಲೋ. ಅವಳ ಅರ್ಜೆಂಟ್‌ ನಳಪಾಕಾನಾ ಬಾಯಿಗಿಟ್ಕೊಂಡು ಅಮ್ಮಾ ಇದ್ರಲ್ಲಿ ಉಪ್ಪೇ ಇಲ್ಲ ಪಿಂಕಿ ಕನಲುತ್ತಾಳೆ. ನಿಂಗೆಷ್ಟು ಬೇಕೋ ಅಷ್ಟು ಹಾಕ್ಕೊ. ಉಪ್ಪು ಟೇಬಲ್‌ ಮೇಲೇ ಇದೆ ಎಂದು ಗದರಿಸುತ್ತಾಳೆ. ಅಕಸ್ಮಾತ್‌ ಉಪ್ಪು ಜಾಸ್ತಿ ಇದೆ ಅಂದ್ರೆ, ನೀವೆಲ್ಲಾ ಉಪ್ಪು ಉಪ್ಪೂಂತ ಬಡ್ಕೊàತೀರ ಅದಕ್ಕೇ ನಾನೇ ಬೇಕಂತ ಹೆಚ್ಚಿಗೆ ಉಪ್ಪು ಹಾಕಿದ್ದೀನಿ ಅನ್ತಾಳೆ”

ಸುಬ್ಬುವಿನ ಮಾತು ಕೇಳುತ್ತ ನನಗೆ ಆಶ್ಚರ್ಯವಾಯಿತು. ಮೊಬೈಲು, ಟಿವಿ ಓರ್ವ ಗೃಹಿಣಿಯನ್ನು ಈಪಾಟಿ ಬದಲಾಯಿಸಿರಬಹುದೆ? ನನಗೆ ನಂಬಲಾಗಲಿಲ್ಲ! “”ಒಂದು ದಿನ ಹೇಗೋ ಅಡೆjಸ್ಟ್‌ ಮಾಡ್ಕೊಂಡ್ರಾಯ್ತಪ್ಪ. ನಮ್ಮ ಮನೆಯವಳೂ ಕೋಪ ಬಂದಾಗ ಹೀಗೆ ಅಸಹಕಾರ ಚಳುವಳಿ ಮಾಡ್ತಾಳೆ. ಆದ್ರೆ ಮಾರನೆ ದಿನಾನೇ ಏನಾದ್ರೂ ಸ್ಪೆಷಲ್‌ ಮಾಡಿ ಹಿಂದಿನ ದಿನದ ಕೊರತೇನ ಸರಿದೂಗಿಸ್ತಾಳೆ” “”ಆದ್ರೆ ನಮ್ಮನೇಲಿ ಹಾಗೆ ಆಗ್ತಿಲ್ಲ. ಬೆಳಿಗ್ಗೆ, ಮಧ್ಯಾಹ್ನ ರಾತ್ರಿ ಎಲ್ಲಾ ಇದೇ ರಾಮಾಯಣ. ಅದಿನ್ನೂ ಮಹಾಭಾರತವಾಗಿಲ್ಲ. ಹಾಗೆ ಆಗೋದೂ ಬೇಡ. ಅತ್ತಿಗೆ ಹತ್ರ ಒಂದ್ಸಲ ಮಾತಾಡಿ ನೋಡು” “”ಒಂದ್ಸಲ ಅಲ್ಲ, ಹತ್ಸಲ ಮಾತಾಡಿ ಆಯ್ತು. ಅವಳದ್ದು ಒಂದೇ ಮಾತು. ನೀವು ಟಿವಿ ನೋಡೋದನ್ನ, ಮೊಬೈಲಿನಲ್ಲಿ ಮಾಡೋದನ್ನ ನಾನು ಪ್ರಶ್ನೆ ಮಾಡೋಲ್ಲ. ನಾನು ಮಾಡೋದನ್ನೂ ನೀವ್ಯಾರೂ ಪ್ರಶ್ನೆ ಮಾಡಬಾರದು. ಮಹಿಳೆಯರಿಗೆ ಸಮಾನತೆ ಇದೆ ಈಗ. ಹೆಚ್ಚಿಗೆ ಮಾತಾಡೋ ಹಾಗಿಲ್ಲ ಅಂತ ಧ‌ಮ್ಕಿ ಹಾಕ್ತಾಳೆ”

ಸುಬ್ಬು ಬಿಟ್ಟ ಬಾಣಕ್ಕೆ ಪ್ರತಿಅಸ್ತ್ರಕ್ಕೆ ಬತ್ತಳಿಕೆಗೆ ಕೈಹಾಕಿದೆ. ಅದು ಬರಿದೋ ಬರಿದು. ಬಾಯಿ ಹೊಲೆದುಕೊಂಡೆ.
“”ಈಗ್ಗೊತ್ತಾಯ್ತ. ನಾನು ಕ್ಯಾಂಟೀನಿಂದ ತಿಂಡಿ ತರಿಸ್ಕೊಂಡು ತಿನಿ¤ರೋದು? ಇದೂ ಒಂದ¤ರಾ ಒಳ್ಳೇದೇ ಆಗಿದೆ. ಊರ್ನಲ್ಲಿರೋ ಎಲ್ಲಾ ಹೊಟೇಲುಗಳನ್ನೂ ಸರ್ವೆ ಮಾಡಿºಟ್ಟೆ. ಯಾವ್ಯಾವ ಹೊಟೇಲಲ್ಲಿ ಏನೇನು ಚೆನ್ನಾಗಿ ಮಾಡ್ತಾರೆ ಅನ್ನೋದು ತಿಳಿದುಕೊಂಡೆ. ಬೆಳಿಗ್ಗೆ ಇಡ್ಲಿ, ವಡೆ ಸಾಂಬಾರ್‌ ಯಾವ ಹೊಟೇಲಿನಲ್ಲಿ ಚೆನ್ನಾಗಿರುತ್ತೆ ಗೊತ್ತಾ?”

“”ಇಲ್ಲ”
“”ಪೊಂಗಲ್ಗೆ ಬೆಸ್ಟ್‌ ಹೊಟೇಲು?”
“”ಇಲ್ಲ ನಂಗೊತ್ತಿಲ್ಲ”
“”ಬೆಸ್ಟ್‌ ದೋಸೆ  ಹೊಟೇಲ್ಲು?”
“”ಸಾರಿ ಸುಬ್ಬು. ನನಗೆ ಇದರ ಆವಶ್ಯಕತೇನೇ ಬಿದ್ದಿಲ್ಲ. ಈಗ ವಿಷಯಕ್ಕೆ ಬರೋಣ. ನೀನು ಇಷ್ಟೆಲ್ಲಾ ಹೊಟೇಲು ಸುತ್ತಿದರೆ ಶಾಲಿನಿಯತ್ತಿಗೆ ಸುಮ್ಮನಿರ್ತಾರಾ?”
“”ಇಲ್ಲ. ನೀವೊಬ್ರೇ ತಿಂದು ಬರ್ತಿàರಿ, ನಮಗೂ ಕಟ್ಟಿಸಿಕೊಂಡು ಬರೋದಕ್ಕೆ ಏನು ಧಾಡಿ ಅಂತ ಬೈತಿರ್ತಾಳೆ”
ನಾನು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಇಂಥ ಬದಲಾವಣೆ ಮೊಬೈಲಿನಿಂದ, ಟಿವಿಯಿಂದ, ವಾಟ್ಸಾಪ್ಪಿನಿಂದ ಸಾಧ್ಯವೆ?
“”ಸುಬ್ಬು ನಿಂದು ಉತ್ಪ್ರೇಕ್ಷೆ! ಅತ್ತಿಗೆ ಇಷ್ಟು ಬದಲಾಗಿ¨ªಾರೆ ಅಂದ್ರೆ ನಾನು ನಂಬೋಲ್ಲ”
“”ಹಾಗಿದ್ರೆ ನಾಳೆ ಭಾನುವಾರ. ಇಡೀ ದಿನ ನೀನು ನನ್ನ ಮನೇಲೇ ಇದ್ದು, ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲಾ ಮಾಡು. ನಿಮ್ಮತ್ತಿಗೆಯ ಮೊಬೈಲಾವತಾರವನ್ನೂ ನೋಡು. ನನ್ನ ಮಾತು ಉತ್ಪ್ರೇಕ್ಷೆ ಅನ್ನಿಸಿದರೆ ನಾಳೇನೇ ನನ್ನ ತಲೆ ಬೋಳಿಸ್ಕೋತೀನಿ. ನನ್ನ ಮಾತು ನಿಜ ಅನ್ನಿಸಿದರೆ ನಿನ್ನ ಫ್ರೆಂಚ್‌ ದಾಡಿ ಬೋಳಿಸಬೇಕು. ರೆಡೀನಾ?”
ಸುಬ್ಬುವಿನ ಪಂಥಾಹ್ವಾನಕ್ಕೆ ಬೆಚ್ಚಿದೆ. ಬೆವರಿದೆ. ಒಳಗೊಳಗೇ ನಡುಗಿದೆ.

“”ಸಾರ್‌, ಷಾಪ್‌ ಫ್ಲೋರಲ್ಲಿ ಜಿಎಮ್ಮು ಸಾಹೇಬ್ರು ಬಂದವ್ರೆ” ಅಟೆಂಡರ್‌ ಓಡುತ್ತ ಬಂದು ಹೇಳಿದ.
 “”ಸುಬ್ಬು , ಜಿಎಮ್ಮು” ಎಂದು ತೊದಲಿ ಅಲ್ಲಿಂದ ಜಾರಿಕೊಂಡೆ. ನನ್ನ ಫ್ರೆಂಚ್‌ ಗಡ್ಡ ಉಳಿಯಿತು! 

ಎಸ್‌. ಜಿ. ಶಿವಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next