Advertisement

ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ್ದ ಸುಬ್ಬರಾಯನ ಕೆರೆ

06:00 PM Aug 15, 2021 | Team Udayavani |

ಮೈಸೂರು: ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ರೂಪಿಸಲು, ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲು,
ಜನರನ್ನು ಒಗ್ಗೂಡಿಸಲು ಮೈಸೂರಿನ ಸುಬ್ಬರಾಯನ ಕೆರೆ ಸ್ಫೂರ್ತಿಯ ಸೆಲೆಯಾಗಿತ್ತು. ಈ ಕೆರೆ ಮೈದಾನವು ಹೋರಾಟಗಾರರಿಗೆ ಅಚ್ಚು
ಮೆಚ್ಚಿನ ತಾಣವಾಗಿತ್ತು.

Advertisement

1942ರಿಂದ ಆರಂಭವಾದ ಕ್ವಿಟ್‌ ಇಂಡಿಯಾ ಚಳವಳಿಯಿಂದ ಸ್ವಾತಂತ್ರ್ಯ ಬಂದ 1947 ಆಗಸ್ಟ್‌ 14ರವರೆಗೆ ನಿರಂತರವಾಗಿ ನಡೆದ
ಸ್ವಾತಂತ್ರ್ಯ ಹೋರಾಟಕ್ಕೆ ಮೈಸೂರು ಭಾಗದಿಂದ ಹುಟ್ಟಿಕೊಂಡ ಸಾವಿರಕ್ಕೂ ಹೆಚ್ಚು ಹೋರಾಟಗಾರರಿಗೆ ನಗರದ ಹೃದಯ ಭಾಗದಲ್ಲಿರುವ
ಸುಬ್ಬರಾಯನಕೆರೆ ಆವರಣ ಕರ್ಮಭೂಮಿಯಾಗಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿದ್ದಾಗಿನಿಂದಲೂ ಇದ್ದ ಮಹಾರಾಜ, ಮರಿ ಮಲ್ಲಪ್ಪ, ಶಾರದಾ ವಿಲಾಸ ಹಾಗೂ ಬನುಮಯ್ಯ ಶಾಲಾ-ಕಾಲೇಜು
ಗಳ ವಿದ್ಯಾರ್ಥಿಗಳನ್ನು ಸಂಘಟಿಸಿ ಅವರಲ್ಲಿ ದೇಶಭಕ್ತಿಯ ಕಿಚ್ಚುಹೆಚ್ಚಿಸಿ ಹೋರಾಟಕ್ಕೆ ಧುಮುಕುವಂತೆ ಹಾಗೂ ಹೋರಾಟದ ರೂಪುರೇಷಗಳ
ಬಗ್ಗೆ ಚರ್ಚೆ ಸೇರಿದಂತೆ ಹೋರಾಟಕ್ಕೆ ಸಂಬಂಧಿಸಿದ ಎಲ್ಲಾ ಘಟನೆಗಳಿಗೂ ಸುಬ್ಬರಾಯನಕೆರೆ ಆವರಣ ಸಾಕ್ಷಿಯಾಗಿದೆ.

ಇದನ್ನೂ ಓದಿ:ಶಸ್ತ್ರಧಾರಿ ಸೈನಿಕರ ಜೊತೆ ‘ಅಪ್ಪು’ |’ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’ ಎಂದ ‘ಜೇಮ್ಸ್’

ಎಚ್‌.ವೈ. ಶಾರದಾ ಪ್ರಸಾದ್‌, ಎಂ.ವೆಂಕಟಪ್ಪ, ಮೈಸೂರು ಗಫ‌ರ್‌ ಖಾನ್‌, ಎಲ್‌.ವೈ.ರಾಜಗೋಪಾಲ್‌, ಚಿತ್ರ ಕಲಾವಿದ ಎಂ.ಇ.ಗುರು
ತಿಪ್ಪೇಸ್ವಾಮಿ ಸೇರಿದಂತೆ ಅನೇಕ ನಾಯಕರುಗಳ ಪರಿಶ್ರಮದಿಂದ ಮೈಸೂರು ನಗರದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಾತಂತ್ರ್ಯ
ಕ್ಕಾಗಿ ನಡೆದ ವಿವಿಧ ಹೋರಾಟ ಮತ್ತು ಸತ್ಯಾಗ್ರಹಗಳಲ್ಲಿ ಭಾಗವಹಿಸಿದ್ದರು. ಎಲ್ಲ ಹೋರಾಟ ಮತ್ತು ಸತ್ಯಾಗ್ರಹಗಳು ಸುಬ್ಬರಾಯನ ಕರೆ
ಆವರಣದಲ್ಲಿಯೇ ನಡೆದಿರುವುದು ವಿಶೇಷ.

Advertisement

ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನ: ಭಾರತ ಸ್ವಾತಂತ್ರ್ಯಕ್ಕಾಗಿ ಮೈಸೂರಿನಲ್ಲಿ ನಡೆದ ಹೋರಾಟಗಳಿಗೆ ನಿದರ್ಶನವಾಗಿದ್ದ ಹಾಗೂ
ಹೋರಾಟಗಾರರಿಗೆ ಕರ್ಮಭೂಮಿಯಾಗಿದ್ದ ಸುಬ್ಬರಾಯನ ಕೆರೆಗೆ ಸ್ವಾತಂತ್ರ್ಯ ನಂತರ ಮೈಸೂರು ಮುನ್ಸಿಪಾಲ್‌ ಸ್ವಾತಂತ್ರ್ಯ ಹೋರಟ
ಗಾರರ ಉದ್ಯಾನ ಎಂದು ಹೆಸರಿಡಲಾಯಿತು. ಜೊತೆಗೆ ಮಹಾತ್ಮ ಗಾಂಧೀಜಿ ಅವರ ತಂಡ ದಂಡಿ ಯಾತ್ರೆ ಕೈಗೊಂಡ ನೆನಪಿಗಾಗಿ ದಂಡಿ
ಯಾತ್ರೆ ಸ್ಮಾರಕವನ್ನೂ ನಿರ್ಮಿಸಲಾಗಿದೆ. ಜೊತೆಗೆ ಗ್ರಂಥಾಲಯ ನಿರ್ಮಾಣ ಮಾಡಿ, ಓದುಗರಿಗೆ ಅನುಕೂಲ ಕಲ್ಪಿಸಲಾಗಿದೆ.
ಸುಬ್ಬರಾಯನ ಕೆರೆ ಅಲ್ಲದೆ ನಗರದ ಟೌನ್‌ಹಾಲ್‌ ಮೈದಾನ, ಕಾಡಾ ಕಚೇರಿಯ ದಕ್ಷಿಣ ಭಾಗದಲ್ಲಿದ್ದ ಖಾಲಿ ಪ್ರದೇಶ, ರೇಷ್ಮೆ ಕಾರ್ಖಾನೆ ವೃತ್ತ ಹಾಗೂ ಮಹಾರಾಜ ಕಾಲೇಜು ವಿದ್ಯಾರ್ಥಿ ನಿಲಯಗಳು ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಪ್ರಮುಖಸ್ಥಳಗಳಾಗಿವೆ.

ಕಟ್ಟ ಕಡೆಯ ಭಾಷಣ,
ಹೋರಾಟದ ಸಭೆ
1947ರ ಆಗಸ್ಟ್‌ 14ರಂದು ಸಾಯಂ ಕಾಲ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿ ಅವರು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸುಬ್ಬರಾಯನ ಕೆರೆಯಲ್ಲಿ ಅದ್ಭುತ ಭಾಷಣ ಮಾಡಿದ್ದರು. ಇದೇ ಕಟ್ಟ ಕಡೆಯ ಹೋರಾಟದ ಸಭೆ ಮತ್ತುಭಾಷಣವಾಗಿತ್ತು ಎಂದು ಇತಿಹಾಸ ತಜ್ಞರು ಸ್ಮರಿಸುತ್ತಾರೆ.

-ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next