Advertisement
ನೂರಾರು ವರ್ಷಗಳಿಂದ ಉಪ್ಪು ನೀರಿನ ದಾಂಗುಡಿಯಿಂದ ಹೈ ರಾಣಾಗಿರುವ ಉಪ್ಪುಂದ, ಬಿಜೂರು, ಯಡ್ತರೆ, ತಗ್ಗರ್ಸೆ, ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಸುಮನಾವತಿ ನದಿಗೆ ಅಡ್ಡಲಾಗಿ ಪಡುವರಿ ಗ್ರಾಮದ ಸುಬ್ಬರಡಿ ಬಳಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷೆಯ ವೆಂಟೆಡ್ ಡ್ಯಾಂ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನಮಳೆಗಾಲದೊಳಗೆ ಪೂರ್ಣಗೊಳ್ಳುವ ಭರವಸೆ ಇದೆ.ಈ ಭಾಗದ ಸಾವಿರಾರು ನಾಗರಿಕರ ಹಲವು ದಶಕಗಳ ಕನಸಾಗಿದ್ದ ಯೋಜನೆಗೆ ಸಣ್ಣ ನೀರಾವರಿ ಇಲಾಖೆಯ ಸಚಿವ ಜೆ.ಸಿ. ಮಾಧುಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿ ಆರಂಭಗೊಂಡಿದ್ದು ಈಗಾಗಲೇ ಸುಮಾರು 2 ಕಿ.ಮೀ. ದೂರದ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದ್ದು, ಸುಮನಾವತಿ ನದಿಯ ನೀರಿನ ಹರಿವಿಗೆ ಅಡ್ಡಲಾಗಿ ಮಣ್ಣು ಹಾಕುವ ಕಾರ್ಯ ಭರದಿಂದ ಸಾಗುತ್ತಿದೆ. ಮಳೆಗಾಲದಲ್ಲಿ ಈ ನದಿಯಲ್ಲಿ ನೀರಿನ ಹರಿವು ಅ ಧಿಕವಾಗಿರುವುದರಿಂದ ಮಳೆಗಾಲದೊಳಗೆ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ.
Related Articles
Advertisement
ಈ ಯೋಜನೆಯ ಸಾಕಾರದಿಂದಾಗಿ ಉಪ್ಪು ನೀರು ತಡೆಗೆ ಸಹಾಯಕವಾಗಿದ್ದು, ನದಿ ಪಾತ್ರ ನಿವಾಸಿಗಳ ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕಂತಾಗುತ್ತದೆ.
ರೈತರಲ್ಲಿ ಮೂಡಿದ ಹರ್ಷ :
ಈ ಯೋಜನೆಯ ಕಾಮಗಾರಿಯಿಂದಾಗಿ ನದಿ ತೀರದ ಜನರಲ್ಲಿ ಸಂತಸ ಮನಮಾಡಿದೆ. ಸುಮಾರು 300 ಎಕರೆಗೂ ಅಧಿ ಕ ಕೃಷಿ ಭೂಮಿಯು ಉಪ್ಪು ನೀರಿನ ಹಾವಳಿಯಿಂದಾಗಿ ಹಡಿಲು ಬೀಳಿಸಲಾಗಿದೆ. ನೂರಾರು ವರ್ಷಗಳಿಂದ ಸುಮನಾವತಿ ನದಿಯ ಉಪ್ಪು ನೀರಿನಿಂದಾಗಿ ನದಿ ಭಾಗದ ಪಡುವರಿ, ತಗ್ಗರ್ಸೆ, ಬಿಜೂರು, ಯಡ್ತರೆ, ಉಪ್ಪುಂದ, ಬೈಂದೂರು ಗ್ರಾಮದ ನಿವಾಸಿಗಳು ಕಂಗೆಟ್ಟಿದ್ದರು. ಪ್ರತಿ ವರ್ಷ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗಿ ಕಷ್ಟಪಟ್ಟು ಬೆಳೆದ ಬೆಳೆ ಸಂಪೂರ್ಣ ಹಾನಿಗೀಡಾಗಿ ನಷ್ಟ ಉಂಟಾಗುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಸಿಹಿ ನೀರಿನ ಸಂಗ್ರಹದಿಂದ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಲಿದೆ.
ಎರಡು ಕಿಂಡಿ ಅಣೆಕಟ್ಟು :
ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು 200ಮೀ. ಉದ್ದ ಹೊಂದಿದ್ದು ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತದೆ. ಇದೇ ಅನುದಾನದಲ್ಲಿ ಉಪ್ಪು ನೀರು ತಡೆಯುವ ಮತ್ತೂಂದು ಕಿಂಡಿ ಅಣೆಕಟ್ಟು ಪಡುವರಿ ಗ್ರಾಮದ ಬೆಸ್ಕೂರಿನಲ್ಲಿ ಮಾಡಲಾಗುತ್ತದೆ. ಇದರ ನಿರ್ಮಾಣದ ಬಳಿಕ ನದಿಯಲ್ಲಿ ಹಿನ್ನೀರಿನ ಶೇಖರಣೆ ಅ ಧಿಕವಾಗಿ ನದಿ ದಂಡೆ ಕುಸಿಯವ ಸಾಧ್ಯತೆಯಿರುವುದರಿಂದ ನದಿಯ ಇಕ್ಕೆಲಗಳಲ್ಲಿ ಸುಮಾರು 2-3 ಕಿ.ಮೀ ದೂರದವರೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ.
ಸುಬ್ಬರಡಿ ಬಳಿ ವೆಂಟೆಡ್ ಡ್ಯಾಂ ನಿರ್ಮಿಸಬೇಕು ಎಂಬುದು ಸಾವಿರಾರು ನಾಗರಿಕರ ಕನಸಾಗಿತ್ತು. ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಇವರ ವಿಶೇಷ ಪ್ರಯತ್ನ ದಿಂದಾಗಿ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗಿ ಕೆಲಸ ನಡೆಯುತ್ತಿರುವುದು ಸಂತಸ ತಂದಿದೆ.- ಉದಯ ದೇವಾಡಿಗ ಯಡ್ತರೆ, ಸ್ಥಳೀಯರು
ಈ ಭಾಗದ ಜನತೆಯ ಪರವಾಗಿ ನನ್ನ ವಿಶೇಷ ಪ್ರಯತ್ನದಿಂದಾಗಿ ಮುಖ್ಯಮಂತ್ರಿ ಹಾಗೂ ಸಂಸದರು ಅನುದಾನ ಬಿಡುಗಡೆ ಮಾಡಿದ್ದಾರೆ. ಡ್ಯಾಂನಿಂದಾಗಿ ಈ ಭಾಗದಲ್ಲಿ ಸಿಹಿ ನೀರಿನ ಅಂತರ್ಜಲ ಹೆಚ್ಚಾಗಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ. -ಬಿ.ಎಂ.ಸುಕುಮಾರ್ ಶೆಟ್ಟಿ ಬೈಂದೂರು ಶಾಸಕರು