Advertisement

“ಕರ್ನಾಟಕ ಸಬಲ್ಟರ್ನ್ ಓದು’ಸಂಪುಟ ಲೋಕಾರ್ಪಣೆಗೆ ಸಿದ್ಧತೆ

03:45 AM Feb 13, 2017 | Team Udayavani |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಸಂಭ್ರಮದ ಸಮಾರೋಪವನ್ನು ಅರ್ಥಪೂರ್ಣವಾಗಿಸಲು ಸಮಾಜದ ತಳಸ್ಥರದ ದಲಿತರು, ರೈತರು, ಮಹಿಳೆ, ಕಾರ್ಮಿಕರು, ಗಿರಿಜನರ ಸಂಸ್ಕೃತಿ, ಅಸ್ತಿತ್ವ, ಇತ್ಯಾದಿ ವಿಷಯಗಳ
ಅಧ್ಯಯನವನ್ನೊಳಗೊಂಡ “ಕರ್ನಾಟಕ ಸಬಲ್ಟರ್ನ್ ಓದು’ ಎಂಬ ಆರು ಸಂಪುಟಗಳ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಂಡಿದೆ.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಂಡು 2011ಕ್ಕೆ 50 ವರ್ಷಗಳು ಪೂರ್ಣಗೊಂಡಿತ್ತು. ಆದರೆ ವಿವಿಧ
ಕಾರಣಗಳಿಂದ 2014ರ ಆ.3ರಂದು ಶಿವಮೊಗ್ಗದ ಕುವೆಂಪು ಕಲಾಕ್ಷೇತ್ರದಲ್ಲಿ ಸುವರ್ಣ ಸಂಭ್ರಮದ ಉದ್ಘಾಟನೆ ನಡೆಸಲಾಗಿತ್ತು. ಇದೀಗ ಫೆ.22ರಂದು ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಅಂದು ದಲಿತ ನೋಟ, ಸ್ತ್ರೀ ನೋಟ, ತಾತ್ವಿಕತೆ, ರೈತರು-ಕಾರ್ಮಿಕ ನೆಲೆ, ಬುಡಕಟ್ಟು ಚರಿತ್ರೆ ಮತ್ತು ಸಾಹಿತ್ಯ ವಿಚಾರಗಳ “ಕರ್ನಾಟಕ ಸಬಲ್ಟರ್ನ್ ಓದು’ ಎಂಬ ಸಂಪುಟಗಳು ಬಿಡುಗಡೆಗೊಳ್ಳಲಿವೆ.

ತಾತ್ವಿಕತೆ- ಸಂಪುಟದಲ್ಲಿ 40 ಲೇಖನಗಳಿರಲಿದ್ದು, ಬೇರೆ ಬೇರೆ ಆಯಾಮ, ಪರಿಕರ, ಅಧ್ಯಯನ ವಿಧಾನದ ವಿಷಯಗಳನ್ನು ಒಳಗೊಂಡಿವೆ. ಮಹಿಳಾ ನೋಟ- ಸಂಪುಟದಲ್ಲಿ ವಿಷಯ ತಜ್ಞರು ಸಮಾಜದಲ್ಲಿನ ಅಸಮಾನತೆಗೆ
ಕಾರಣ, ಅದನ್ನು ಹೋಗಲಾಡಿಸುವ ಕ್ರಮ, ಅಸ್ತಿತ್ವ, ಲಿಂಗತಾರತಮ್ಯ, ಕುಂದು ಕೊರತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಸಾಹಿತ್ಯ- ಸಂಪುಟದಲ್ಲಿ ಕನ್ನಡ ಸಾಹಿತ್ಯದಲ್ಲಿ ಬೆಳೆದು ಬಂದಿರುವ ತಿಳಿವಳಿಕೆ, ಜಾತಿ, ಧರ್ಮ, ವರ್ಗ ಪ್ರಜ್ಞೆಯಿಂದ ಮಾತನಾಡಿದ್ದಾರೋ ಅಥವಾ ಒಟ್ಟಾರೆ ಸಮುದಾಯ ಒಳಗೊಂಡ ಚಿಂತನೆಗಳಿವೆಯೋ ಎಂಬುದರ ಬಗ್ಗೆ ಅಧ್ಯಯನ ವರದಿಗಳು ಒಳಗೊಂಡಿವೆ.

ಬುಡಕಟ್ಟು ಚರಿತ್ರೆ- ಸಂಪುಟದಲ್ಲಿ ಜಾನಪದದ ಹಿನ್ನೆಲೆ, ಬದುಕಿನ ಕ್ರಮ, ಆಗಬೇಕಾದ ಜಾಗೃತಿ, ಅಭಿವೃದ್ಧಿ, ಇರುವ ತೊಂದರೆ ಮುಂತಾದ ವಿಚಾರಗಳ ಕುರಿತು ಅಧ್ಯಯನ ನಡೆಸಿ ವಿದ್ವಾಂಸರು ಬರೆದಿರುವ ಲೇಖನಗಳನ್ನು ಳಗೊಂಡಿವೆ. ಪ್ರತಿ ಸಂಪುಟದಲ್ಲೂ ಬೇರೆ ಬೇರೆ ವಿದ್ವಾಂಸರು ಬರೆದ 40 ಲೇಖನಗಳು ಇರಲಿವೆಯೆಂದು ಸಂಪುಟಗಳ ಯೋಜನಾ
ಸಂಪಾದಕ ಮೇಟಿ ಮಲ್ಲಿಕಾರ್ಜುನ್‌ ಮಾಹಿತಿ ನೀಡಿದ್ದಾರೆ.

ಎರಡು ವರ್ಷದ ಅಧ್ಯಯನ : ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರು “ಕರ್ನಾಟಕ ಸಬಲóನ್‌ ಓದು’ ಸಂಪುಟದ ಪ್ರಧಾನ ಸಂಪಾದಕರಾಗಿದ್ದಾರೆ. ಮೇಟಿ ಮಲ್ಲಿಕಾರ್ಜುನ್‌ ಮುಖ್ಯ ಸಂಪಾದಕರಾಗಿದ್ದು, ಪ್ರತಿಯೊಂದು ಸಂಪುಟಕ್ಕೂ ತಲಾ ಇಬ್ಬರು ಸಂಪುಟ ಸಂಪಾದಕರು ಶ್ರಮಿಸಿದ್ದಾರೆ. ಈ ಆರು ಸಂಪುಟಗಳಿಗೆ ಒಟ್ಟು 112 ಮಂದಿ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ. ಈ ಸಂಪುಟಗಳಿಗಾಗಿ ಸುಮಾರು 2 ವರ್ಷ ಕಾರ್ಯನಿರ್ವಹಿಸಲಾಗಿದೆ.
ಈಗಾಗಲೇ ತಾತ್ವಿಕತೆ, ಮಹಿಳಾ ನೋಟ, ರೈತರು ಮತ್ತು ಕಾರ್ಮಿಕರು, ಸಾಹಿತ್ಯ, ದಲಿತ ನೋಟ ಸಂಪುಟಗಳು ಪೂರ್ಣಗೊಂಡಿದ್ದು, ಬುಡಕಟ್ಟು ಚರಿತ್ರೆ ಸಂಪುಟ ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next