Advertisement

ಉಪ ನೋಂದಣಿ ಕಚೇರಿ ಅವಸ್ಥೆ: ಸರಿಪಡಿಸುವ ಭರವಸೆ

11:08 PM Feb 16, 2021 | Team Udayavani |

ಕುಂದಾಪುರ: ಇಲ್ಲಿನ ಉಪನೋಂದಣಿ ಕಚೇರಿಯಲ್ಲಿ ಉಪ ನೋಂದಣಿ ಅಧಿಕಾರಿ ಇಲ್ಲದಿರು ವುದು, ಸರ್ವರ್‌ ದೋಷ, ಇತರ ತಾಂತ್ರಿಕ ದೋಷಗಳ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಶೀಘ್ರ ಸ್ಪಂದಿಸುವ ಭರವಸೆ ಜನಪ್ರತಿನಿಧಿಗಳಿಂದ ದೊರೆತಿದೆ.

Advertisement

ಉಪನೋಂದಣಾಧಿಕಾರಿಗಳ ಕಚೇರಿಯ ಅವ್ಯವಸ್ಥೆ ಕುರಿತು “ಉದಯವಾಣಿ’ “ಸುದಿನ’ ಫೆ.16ರಂದು ಪ್ರಕಟಿಸಿದ ವಾಸ್ತವ ವರದಿ “ನೋಂದಣಾಧಿಕಾರಿಯೂ ಪ್ರಭಾರ, ಜನರಿಗೆ ತಲೆಭಾರ’ ವರದಿಗೆ ಸಾರ್ವಜನಿಕರಿಂದಲೂ ವ್ಯಾಪಕ ಸ್ಪಂದನ ವ್ಯಕ್ತವಾಗಿದೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಬೈಂದೂರು ಶಾಸಕ ಬಿ.ಎಂ.

ಸುಕುಮಾರಶೆಟ್ಟಿ ಅವರು, ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಜಿ. ಜಗದೀಶ್‌ ಸಹ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಸ್ಯೆಯನ್ನು ಪ್ರಸ್ತಾವಿಸುವುದಾಗಿ ತಿಳಿಸಿದ್ದಾರೆ.

ಅಗತ್ಯ ಕ್ರಮ ಕೈಗೊಳ್ಳುವೆ
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, “ಸುದಿನ’ ವರದಿ ಗಮನಿಸಿದೆ. ಕುಂದಾಪುರದ ಉಪ ನೋಂದಣಾಧಿಕಾರಿ ವರ್ಗವಾದುದು ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿ ಅವರು, ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಬೈಂದೂರು, ಕುಂದಾಪುರ ಹಾಗೂ ಶಂಕರನಾರಾಯಣ ಉಪನೋಂದಣಿ ಕಚೇರಿ ವ್ಯಾಪ್ತಿಗಳಿವೆ. ಶಂಕರನಾರಾಯಣ ಉಪನೋಂದಣಿ ಕಚೇರಿಗೆ ನೂರು ವರ್ಷಗಳಾಗಿದ್ದು ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಮನವಿ ಮಾಡಿದ್ದೆ. ಅವರ ಸೂಚನೆಯಂತೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿ ಕಟ್ಟಡ ಮಂಜೂರಿಗೆ ಪ್ರಯತ್ನಿಸಿದ್ದೇನೆ. ಕುಂದಾಪುರದ ಸಮಸ್ಯೆಯೂ ಗಮನಕ್ಕೆ ಬಂದಿದ್ದು ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

Advertisement

ಜಿಲ್ಲಾಧಿಕಾರಿ ಜಿ. ಜಗದೀಶ್‌: “ಉದಯವಾಣಿ” “ಸುದಿನ’ ವರದಿಯನ್ನು ಓದಿದ್ದೇನೆ. ರಾಜ್ಯಾದ್ಯಂತ ಉಪನೋಂದಣಾಧಿಕಾರಿಗಳ ಹುದ್ದೆ ಖಾಲಿ ಇವೆ. ಈ ವರದಿ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸ್ಟಾಂಪ್ಸ್‌ ಆಂಡ್‌ ರಿಜಿಸ್ಟ್ರೇಶನ್‌ ಇಲಾಖೆ ಮುಖ್ಯಸ್ಥರ ಬಳಿ ಮಾತನಾಡುವೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next