Advertisement

ಕೌಟುಂಬಿಕ ಸಮರದಿಂದ ಸಮರ ನೌಕೆಯವರೆಗೆ

04:56 PM Dec 14, 2020 | Karthik A |

ಪುರಾಣ ಕಾಲದಿಂದಲೂ ಸಮಾಜದ ಅವಿಭಾಜ್ಯ ಅಂಗವಾಗಿರುವ ಸ್ತ್ರೀ ಹಂತಹಂತವಾಗಿ ಎರಡನೇ ಪ್ರಜೆ ಎಂಬ ಸ್ಥಾನಕ್ಕೆ ಬಂದು ನಿಲ್ಲುತ್ತಾಳೆ.

Advertisement

ಆದರೆ ಸ್ತ್ರೀಯೋರ್ವಳ ಆತ್ಮ ಸ್ಥೈರ್ಯ ಅಲ್ಲಿಗೆ ಕುಸಿಯುವುದಿಲ್ಲ. ಅವಳದ್ದೇನಿದ್ದರೂ ಹೋರಾಟದ ಹಾದಿ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಳೇ ಇದ್ದಾಳೆ. ಆಕೆಯ ಜೀವನ ಸುಂದರ ಹೂವಿನ ಹಾದಿ ಅಲ್ಲವೇ ಅಲ್ಲ. ಕಲ್ಲುಮುಳ್ಳಿನ ಹಾದಿ ದಾಟಿ ಸುಂದರ ಹಾದಿಯನ್ನು ನಿರ್ಮಿಸಲು ಪ್ರಯತ್ನಿಸುತ್ತಾಳೆ.

ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬ ಮಾತನ್ನು ಪ್ರತಿಭಾಸಿಂಗ್‌ ಪಾಟೀಲ್‌, ಸುಷ್ಮಾ ಸ್ವರಾಜ್‌, ಜಯಲಲಿತಾ, ಸ್ಮತಿ ಇರಾನಿ ಮೊದಲಾದವರು ನಿಜ ಮಾಡುತ್ತಿರುವುದನ್ನು ಕಾಣಬಹುದು. ಇಡೀ ದೇಶದ ಅಭಿವೃದ್ಧಿಗೆ ಪೂರಕವಾಗುವಂತಹ ಎಲ್ಲ ಕ್ಷೇತ್ರಗಳಲ್ಲಿಯೂ ಸ್ತ್ರೀ ತಾನೇ ಅವಕಾಶಗಳನ್ನು ಹೋರಾಟಗಳಿಂದ ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿರುವ ಇವರ ಸಾಧನೆ ಶ್ಲಾಘನೀಯ. ಇದಕ್ಕೆ ಸೂಕ್ತ ಉದಾಹರಣೆ ಪ್ರಸ್ತುತ ಸಮ ರನೌಕೆಗೆ ಕಾಲಿಟ್ಟ ಇಬ್ಬರು ಮಹಿಳೆಯರ ಪರಿಶ್ರಮ, ಪ್ರಯತ್ನ, ಯಶಸ್ಸು ಇಡೀ ಸ್ತ್ರೀ ಕುಲಕ್ಕೆ ಬಲ ನೀಡಿ ಹುರಿದುಂಬಿಸುವ ಸ್ಫೂರ್ತಿಯ ಪತಾಕೆಯಾಗಿದೆ.

ಐತಿಹಾಸಿಕ ದಾಖಲೆ ಎಂಬಂತೆ ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಯಲ್ಲಿನ ಯುದ್ಧ ನೌಕೆಯಲ್ಲಿ ಹೆಲಿಕಾಪ್ಟರ್‌ ನಿರ್ವಹಣ ತಂತ್ರಜ್ಞರಾಗಿ ಸಬ್‌ ಲೆಫ್ಟಿನೆಂಟ್‌ ಕುಮುದಿನಿ ತ್ಯಾಗಿ ಮತ್ತು ಸಬ್‌ ಲೆಪ್ಟಿನೆಂಟ್‌ ರಿತಿ ಸಿಂಗ್‌ ಅವರು ನೇಮಕಗೊಂಡಿದ್ಧಾರೆ. ಅಲ್ಲದೆ ಫ್ರಾನ್ಸ್‌ ದೇಶದಿಂದ ನೂತನವಾಗಿ ಭಾರತಕ್ಕೆ ಸೇರ್ಪಡೆಗೊಂಡಿರುವ ರಫೇಲ್‌ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ಗೋಲ್ಡನ್‌ ಯಾರೋಸ್‌ ಸ್ಕ್ವಾಡ್ರನ್‌ಗೆ ಮೊದಲ ಮಹಿಳಾ ಪೈಲೆಟ್‌ ಆಗಿ ವಾರಣಾಸಿಯ ಶಿವಾಂಗಿ ಸಿಂಗ್‌ ರವರು ನೇಮಕಗೊಂಡಿದ್ದಾರೆ.

ಹಾಗೂ ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳ ಕಾರ್ಯಾಚರಣೆ ನಡೆಸಬಲ್ಲ 10 ಮಹಿಳಾ ಪೈಲಟ್‌ಗಳು, 18ಮಹಿಳಾ ನ್ಯಾವಿಗೇಟರ್‌ಗಳಿದ್ಧು, ಒಟ್ಟಾರೆ 1,875 ಮಹಿಳಾ ಅಧಿಕಾರಿಗಳು ಸೇವೆ ಸಲ್ಲಿಸುತ್ತಿರುವುದು ಮಹಿಳೆ ದುರ್ಬಲಳು ಅಲ್ಲ ಎಂಬುದಕ್ಕೆ ಸಾಕ್ಷಿ. ಬಾಲ್ಯ ವಿವಾಹ ತಡೆ ಕಾನೂನು, ಸಮಾನ ಹಕ್ಕು, ವಿದ್ಯಾಭ್ಯಾಸ ನೀತಿ ಮೊದಲಾದವುಗಳು ಹೆಣ್ಣಿನ ಕನಸಿಗೆ ರೆಕ್ಕೆ ಮೂಡಲು ಸಹಾಯಕವಾಗಿದೆ.

Advertisement

ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ದೌರ್ಜನ್ಯ, ಕೌಟುಂಬಿಕ ಕಿರುಕುಳ, ಅಸಮಾನತೆ, ವರದಕ್ಷಿಣೆ, ಸುಲಿಗೆ, ಸ್ವಾತಂತ್ರ್ಯ ಹೀನತೆ ಮೊದಲಾದ ಅನೇಕ ಸಮಸ್ಯೆಗಳು ಪ್ರವಾಹದಂತೆ ಉಕ್ಕಿ ಹರಿಯುತ್ತಿದ್ದರೂ ಬದುಕುವ ಛಲ ಬಿಡದ ಸ್ತ್ರೀ ಸಮೂಹ ಪ್ರವಾಹಕ್ಕೆ ಹೆದರದಂತೆ ಕೈಗೆ ಸಿಕ್ಕ ಚಿಕ್ಕ-ಚಿಕ್ಕ ರೆಂಬೆ-ಕೊಂಬೆಗಳನ್ನೇ ಅವಕಾಶಗಳನ್ನಾಗಿ ಬಳಸಿಕೊಂಡು ಸುನಾಮಿಯನ್ನೇ ಎದುರಿಸಿ ಮುಗಿಲೆತ್ತರಕ್ಕೆ ಬೆಳೆದು ನಿಲ್ಲುವ ಜಪಾನ್‌ ದೇಶದಂತೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಪ್ರತಿಭೆಯನ್ನು ಗುರುತಿಸಿಕೊಳ್ಳುತ್ತಾ ಸಾಧನೆಯ ಉತ್ತುಂಗಕ್ಕೇರುತ್ತಿರುವುದು ನಿಜಕ್ಕೂ ಹೆಮ್ಮೆ.


 ರಮ್ಯಾ ಪಿ., ವೇದಾವತಿ ಬಿ.ಎಡ್‌. ಕಾಲೇಜು, ಪರಶುರಾಂಪುರ 

Advertisement

Udayavani is now on Telegram. Click here to join our channel and stay updated with the latest news.

Next