Advertisement

ಬಡ್ತಿ ಮೀಸಲು ಪರಾಮರ್ಶೆಗೆ ಉಪ ಸಮಿತಿ

07:50 AM Jul 27, 2017 | |

ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಬಡ್ತಿ ಮೀಸಲಾತಿ ವಿಚಾರದಲ್ಲಿ 
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭ ನೀಡಿರುವ ವರದಿ ಒಪ್ಪಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿರುವ ಸರ್ಕಾರ, ಪರಾಮರ್ಶೆಗಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದು, ಸಮಸ್ಯೆಯ ಪರಿಹಾರಕ್ಕಾಗಿ ಅಗತ್ಯವಾದರೆ ಸುಗ್ರೀವಾಜ್ಞೆ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದೆ.

Advertisement

ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿ ವಿಚಾರ ಸುದೀರ್ಘ‌ ಚರ್ಚೆಗೊಳಗಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಮುನ್ನ ಪರಾಮರ್ಶೆ ಮಾಡುವುದು ಅಗತ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. ಬಡ್ತಿ ಮೀಸಲಾತಿ ಕುರಿತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರದಿ ಜತೆಗೆ ನ್ಯಾ.ಠಾಕೂರ್‌ ಹಾಗೂ ಗೋಪಾಲಗೌಡರ ವರದಿ ಹಾಗೂ ಅಡ್ವೊಕೇಟ್‌ ಜನರಲ್‌ ವರದಿ ಸಹ ಪರಿಶೀಲಿಸಿ ನಂತರ ತೀರ್ಮಾನಕ್ಕೆ ಬರುವುದು. ತೀರಾ ಅನಿವಾರ್ಯ ಎಂದಾದರೆ ಸುಗ್ರೀವಾಜ್ಞೆ ಬಗ್ಗೆ ಯೋಚಿಸುವುದು. ಆದರೆ, ಕಾನೂನು ತಜ್ಞರ ಜತೆ ಆ ಬಗ್ಗೆ ಚರ್ಚಿಸಿ ಸಲಹೆ-ಅಭಿಪ್ರಾಯ ಪಡೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, “ಬಡ್ತಿ ಮೀಸಲಾತಿ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಬಗ್ಗೆ ಪರಾಮರ್ಶೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಸಮಿತಿಯು ಆದಷ್ಟು ಬೇಗ ಪರಾಮರ್ಶೆ
ನಡೆಸಲಿದೆ’ ಎಂದು ಹೇಳಿದರು.

“ಆಗಸ್ಟ್‌ 9ರ ಒಳಗೆ ತೀರ್ಪು ಪಾಲನೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ. ಇದರ ನಡುವೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿದೆ. ಆ ಅರ್ಜಿ ವಿಚಾರಣೆಗೆ ಬಂದಿಲ್ಲ. ಹೀಗಾಗಿ  ಗಡುವಿನ ಒಳಗೆ ವಿಚಾರ ಇತ್ಯರ್ಥಕ್ಕ  ಸರ್ಕಾರ ಪ್ರಯತ್ನಿಸಲಿದೆ’ ಎಂದು ತಿಳಿಸಿದರು.

ವರದಿಯಲ್ಲಿ ಏನಿದೆ? ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಸರ್ಕಾರಕ್ಕೆ ಕೊಟ್ಟಿರುವ ವರದಿಯಲ್ಲಿ ಹಿಂದುಳಿದಿರುವಿಕೆ ಮಾನದಂಡದಲ್ಲೇ ಬಡ್ತಿ ನೀಡಲಾಗಿದೆ. ಇದರಿಂದ ಕಾರ್ಯದಕ್ಷತೆಗೆ ಯಾವುದೇ ಹೊಡೆತ ಬಿದ್ದಿಲ್ಲ. ಲೋಕೋಪಯೋಗಿ ಹಾಗೂ ಕೆಪಿಸಿಎಲ್‌ ಹೊರತುಪಡಿಸಿದರೆ ಬೇರೆ ಇಲಾಖೆಗಳಲ್ಲಿ ಮೀಸಲಾತಿ ಪ್ರಮಾಣ ಪೂರ್ಣ ಪ್ರಮಾಣದಲ್ಲಿ ಕೊಟ್ಟಿಲ್ಲ. ಇನ್ನೂ ಬಾಕಿಯಿದೆ ಎಂದು ತಿಳಿಸಲಾಗಿದೆ.

Advertisement

ತೀರ್ಪು ಏನು? ಬಡ್ತಿ ಮೀಸಲಾತಿಯಿಂದಾಗಿ ಇತರ ವರ್ಗದರಿಗೆ ಅನ್ಯಾಯ ಆಗಿದ್ದು, ಅನ್ಯಾಯ ಸರಿಪಡಿಸಿ ಎಂದು ಸುಪ್ರೀಂಕೋರ್ಟ್‌ ಫೆಬ್ರವರಿ 9 ರಂದು ತೀರ್ಪು ನೀಡಿತ್ತು. ಹಿಂದುಳಿದಿರುವಿಕೆ ಮಾನದಂಡ ಹಾಗೂ ಕಾರ್ಯದಕ್ಷತೆ ಮೇಲೆ ಪರಿಣಾಮದ ಬಗ್ಗೆ ಮಾಹಿತಿ ನೀಡದ ರಾಜ್ಯ ಸರ್ಕಾರದ ಬಗ್ಗೆ ಆಕ್ಷೇಪಣೆ ಸಹ ವ್ಯಕ್ತಪಡಿಸಿತ್ತು. ಮೂರು ತಿಂಗಳಲ್ಲಿ ಪರಿಷ್ಕೃತ ಸೇವಾ ಜೇಷ್ಠತೆ ಪಟ್ಟಿ ಸಿದಟಛಿಪಡಿಸಿ. ನಂತರದ ಮೂರು ತಿಂಗಳಲ್ಲಿ ಬಡ್ತಿಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಗಡುವು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next