Advertisement

ಕೊವಿಡ್19 ವಲಸಿಗರಿಗೆ ಕೂಲಿಕೆಲಸ ಕೊಡುವ ನೆಪದಲ್ಲಿ ಮಾದರಿಯಾದ ಉಪಕಾಲುವೆ ದುರಸ್ತಿ ಕಾರ್ಯ

08:32 AM May 12, 2020 | keerthan |

ಗಂಗಾವತಿ: ಕೊವಿಡ್ 19 ಸಂದರ್ಭದಲ್ಲಿ ಗುಳೆ ಹೋಗಿದ್ದ ನೂರಾರು ಕೂಲಿಕಾರ್ಮಿಕರು ವಾಪಸ್ ಗ್ರಾಮಗಳಿಗೆ ಬಂದಿದ್ದು ಅವರುಗಳಿಗೆ ಪರ್ಯಾಯ ಕೂಲಿಕೆಲಸ ಕೊಡುವುದು ದೊಡ್ಡಸಮಸ್ಯೆಯಾಗಿತ್ತು. ಗಂಗಾವತಿ ತಾಲೂಕಿನಾದ್ಯಂತ ನರೇಗಾ ಯೋಜನೆಯಲ್ಲಿ ಇವರಿಗೆಲ್ಲಾ ಕೂಲಿಕೆಲಸ ನೀಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

Advertisement

ತಾಲೂಕಿನ ದಾಸನಾಳ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯ ಉಪಕಾಲುವೆಯ ಜಂಗಲ್ ಕಟಿಂಗ್ ಹಾಗೂ ಹೂಳೆತ್ತುವ ಕಾಮಗಾರಿ ಕೈಗೊಂಡಿದ್ದು ಕಳೆದ ಒಂದು ವಾರದಿಂದ ಸುಮಾರು 100ಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸ ಮಾಡಿ ಕಾಲುವೆ ಸ್ವಚ್ಛ ಮಾಡಿದ್ದಾರೆ.

ರೈತರಿಗೆ ನೆರವು: ದಾಸನಾಳ ಹತ್ತಿರ ತುಂಗಭದ್ರಾ ಉಪಕಾಲುವೆ ಹಲವು ವರ್ಷಗಳಿಂದ ಗಿಡಕಂಟಿಗಳಿಂದ ನೀರು ಹರಿಯದಂತಹ ಸ್ಥಿತಿಯುಂಟಾಗಿತ್ತು ರೈತರು ಹಲವು ಭಾರಿ ಕಾಲುವೆ ಹೂಳು ತೆಗೆಸುವಂತೆ ಶಾಸಕರಿಗೆ ಮನವಿ ಮಾಡಿದ್ದರು. ಶಾಸಕರ ಸೂಚನೆ‌ ಮೇರೆಗೆ ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಕೂಲಿಕಾರ್ಮಿಕರಿಗೆ ಕೆಲಸ ಕೊಡುವ ನೆಪದಲ್ಲಿ ನರೇಗಾ ಯೋಜನೆಯಡಿ ಕಾಲುವೆ ಸ್ವಚ್ಛಗೊಳಿಸಲಾಗಿದ್ದು ರೈತರಿಗೆ ಅನುಕೂಲವಾಗಿದೆ ಎಂದು‌ ತಾ.ಪಂ ಇಒ‌‌ ಡಾ.ಮೋಹನ ಕುಮಾರ ಉದಯವಾಣಿ ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next