Advertisement

ಬಿಬಿಎಲ್ ಗೆ ಕಿಚ್ಚು ಹಚ್ಚಿದ ಯುವ ಆಟಗಾರನ ಅದ್ಭುತ ಕ್ಯಾಚ್: ವಿಡಿಯೋ

03:39 PM Dec 08, 2021 | Team Udayavani |

ಮೆಲ್ಬೋರ್ನ್: ಆಸ್ಟ್ರೇಲಿಯಾದ ಟಿ20 ಕ್ರಿಕೆಟ್ ಕೂಟ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಆರಂಭವಾಗಿದೆ. ಅಡಿಲೇಡ್ ಸ್ಟ್ರೈಕರ್ ವಿರುದ್ಧ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡ ಯುವ ಆಟಗಾರ ಹಿಡಿದ ಕ್ಯಾಚೊಂದು ಇದೀಗ ವೈರಲ್ ಆಗುತ್ತಿದೆ.

Advertisement

ಜಹೀರ್ ಖಾನ್ ಎಸೆದ ಏಳನೇ ಓವರ್ ನ ಎರಡನೇ ಎಸೆತವನ್ನುಸ್ಟ್ರೈಕರ್ಸ್ ಬ್ಯಾಟ್ಸಮನ್ ಜ್ಯಾಕ್ ವೆದರಾಲ್ಡ್ ಡೀಪ್ ಮಿಡ್ ವಿಕೆಟ್ ಗೆ ಬಾರಿಸಿದರು. ಚೆಂಡು ಇನ್ನೇನು ಸಿಕ್ಸರ್ ಗೆರೆ ದಾಟಿತು ಎನ್ನುವಾಗ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ 19 ವರ್ಷದ ಜ್ಯಾಕ್ ಫ್ರೇಸರ್ ಹಾರಿ ಒಂದೇ ಕೈಯಲ್ಲಿ ಅದ್ಭುತವಾಗಿ ಚೆಂಡನ್ನು ಹಿಡಿದರು.

ಇದನ್ನೂ ಓದಿ:ಕೀರ್ತಿ ಆಜಾದ್ ಮೆಲುಕು:ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!

ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದ್ದ ಜ್ಯಾಕ್ ಫ್ರೇಸರ್ ಫೀಲ್ಡಿಂಗ್ ನಲ್ಲಿ ಕಮಾಲ್ ಮಾಡಿದರು. ಜ್ಯಾಕ್ ಫ್ರೇಸರ್ 11 ಎಸೆತದಲ್ಲಿ 8 ರನ್ ಗಳಿಸಿದ್ದ ವೇಳೆ ಜ್ಯಾಕ್ ವೆದರಾಲ್ಡ್ ಗೆ ಕ್ಯಾಚ್ ನೀಡಿ ಔಟಾಗಿದ್ದರು. ಬಳಿಕ ವೆದರಾಲ್ಡ್ ಅವರ ಕ್ಯಾಚನ್ನು ಹಿಡಿದು ಮಿಂಚಿದರು.

Advertisement

ಪಂದ್ಯದಲ್ಲಿ ಮೆಲ್ಬೋರ್ನ್ ರೆನಿಗೇಡ್ಸ್ ತಂಡವು ಎರಡು ರನ್ ಅಂತರದಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನಿಗೇಡ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದರೆ, ಅಡಿಲೇಡ್ ಸ್ಟ್ರೈಕರ್ಸ್ ತಂಡವು 8 ವಿಕೆಟ್ ಕಳೆದುಕೊಂಡು 151 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next