Advertisement

ಬಂದಾನಾ ಸ್ಟೈಲ್‌ನ ಹತ್ತಿ ಮಾಸ್ಕ್ ಗಳೇ ಪರಿಣಾಮಕಾರಿ ; ಉಟಾ ವಿವಿ ಸಂಶೋಧಕರ ಪ್ರತಿಪಾದನೆ

08:20 AM Jul 02, 2020 | mahesh |

ನ್ಯೂಯಾರ್ಕ್‌: ಮನೆಗಳಲ್ಲಿ ತಯಾರಿಸ­ಬಹುದಾದ “ನಾನ್‌ ಮೆಡಿಕಲ್‌ ಗ್ರೇಡ್‌’ ಮಾಸ್ಕ್ ಗೆಳಿಗೆ ಹತ್ತಿಯ ಬಟ್ಟೆಯೇ ಹೆಚ್ಚು ಸೂಕ್ತ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಸಿಗೆ ತಯಾರಿಕೆಗೆ ಬಳಸುವ ನಯವಾದ ಹತ್ತಿಯ ಎರಡು ಪದರಗ­ಳಿಂದ, ಬಂದಾನಾ ಮಾದರಿಯ ಫೇಸ್‌ ಮಾಸ್ಕ್ ಗಳು, ಕೋವಿಡ್ ಹರಡು­ವುದನ್ನು ತಡೆಯಲು ಹೆಚ್ಚು ಪರಿಣಾಮಕಾರಿ­ಯಾಗಿ­ರುತ್ತವೆ ಎಂದು ಅವರು ಹೇಳಿದ್ದಾರೆ.

Advertisement

ಮಾಸ್ಕ್ ಗಳ ತಯಾರಿಕೆಗೆ ಸೂಕ್ತ ಕಚ್ಚಾ ವಸ್ತು ಯಾವುದು ಎಂಬುದರ ಬಗ್ಗೆ ಹಲವಾರು ದಿನಗ­ಳಿಂದ ಸಂಶೋಧನೆ ನಡೆಸಲಾಗುತ್ತಿದ್ದು, ಹಲವಾರು ಸಾಮಗ್ರಿ ಗಳನ್ನು ಪರೀಕ್ಷೆಗೊಳ­ಪಡಿಸಲಾಗಿತ್ತು. ಆ ಎಲ್ಲಾ ಪರೀಕ್ಷೆ ಗಳ ತರುವಾಯ, ಮಾಸ್ಕ್ ತಯಾರಿಕೆಗೆ ಹತ್ತಿಯೇ ಸೂಕ್ತವಾದ ಸಾಮಗ್ರಿ ಎಂದು “ಫಿಸಿಕ್ಸ್‌ ಆಫ್ ಫ್ಲೋಯಿಡ್ಸ್‌’ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ. ಸೋಂಕಿತರು, ಕೆಮ್ಮಿದಾಗ ಹಾಗೂ ಸೀನಿದಾಗ ಅವರಿಂದ ಹರಡುವ ಸೂಕ್ಷ್ಮಕಣಗಳನ್ನು ತಡೆಯುವಲ್ಲಿ ಅದು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಸೋಂಕು ಹರಡುತ್ತಿದ್ದಂತೆ, ಜಗತ್ತಿ­ನೆಲ್ಲೆಡೆ ಫೇಸ್‌ ಮಾಸ್ಕ್ ಗಳನ್ನು ಕಡ್ಡಾಯವಾಗಿ ಬಳ­ಸುವಂತೆ ಎಲ್ಲೆಡೆ ಸೂಚಿಸಲಾಗುತ್ತಿತ್ತು. ಮೊದಲಿಗೆ, ಬಳಸಿ ಬಿಸಾಡುವಂಥ ಮಾಸ್ಕ್ ಗಳನ್ನು ಉಪಯೋಗಿ­ಸಲಾಗುತ್ತಿತ್ತು. ಆದರೆ, ಬರಬರುತ್ತಾ ಮರು-­ಬಳಕೆಯ ಮಾಸ್ಕ್ ಗೆಳು ಹೆಚ್ಚು ಜನಪ್ರಿಯವಾದವು. ಅದೂ ಮುಗಿದ ಅನಂತರ, ಹೊಸ ಸಾಮಗ್ರಿಗಳ, ಹೊಸ ವಿನ್ಯಾಸಗಳ ಮಾಸ್ಕ್ ಗಳು ಮಾರುಕಟ್ಟೆಗೆ ಬಂದವು ಎಂದು ಫ್ಲಾರಿಡಾ ಅಟ್ಲಾಂಟಿಕ್‌ ವಿವಿ ಸಂಶೋಧಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next