ತುಂಬಾ ಉತ್ಸಾಹಿ ಸಂಶೋಧಕರಿದ್ದಾರೆ. ಕೇವಲ ಪದವಿಗಾಗಿ ಸಂಶೋಧನೆ ಮಾಡದೇ, ಸಂಸ್ಕೃತಿ ಮೇಲಿನ ಪ್ರೀತಿ ಇಟ್ಟು ಅಧ್ಯಯನ ಮಾಡುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.
Advertisement
. ಮರೆಯಾಗುತ್ತಿರುವ ಜನಪದ ಸಂಸ್ಕೃತಿ, ಆಚಾರ, ವಿಚಾರಗಳು ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತವಾಗುತ್ತಿದೆಯೇ?ಹಾಗೇನಿಲ್ಲ. ಜಗತ್ತು ವಿವಿಧ ನೆಲೆಗಳಲ್ಲಿ ಬದಲಾಗುತ್ತಾ ಇದೆ. ಇದಕ್ಕೆ ತಕ್ಕಂತೆ ನಮ್ಮ ಜನಪದ, ಸಂಸ್ಕೃತಿ, ಆಚಾರ- ವಿಚಾರವೂ ಹೊಂದಿಕೊಳ್ಳುತ್ತಿದೆ. ಆಟಿ ಕೂಟಗಳು, ಕೆಸರ್ದಗೊಬ್ಬು ಮೊದಲಾದ ಹೆಸರಿನಲ್ಲಿ ನಡೆಯುವ ಆಟಗಳು, ನಮ್ಮ ಜನಪದ ಆಟ- ಆಚರಣೆಗಳ ಸ್ವರೂಪವನ್ನು ವಿಸ್ತರಿಸುತ್ತಿದೆ.
ಜನಪದ ಅಧ್ಯಯನ ಅತಿ ಅಗತ್ಯ. ಜನಪದದ ಸ್ವರೂಪ ದೊಡ್ಡ ಮಟ್ಟದಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ದಾಖಲಾತಿ, ಅಧ್ಯಯನಗಳು ನಡೆಯದೇ ಹೋದರೆ ಮುಂದಿನ ತಲೆಮಾರಿಗೆ ನಮ್ಮ ಕಾಲದ ಸಂಸ್ಕೃತಿ ಸ್ವರೂಪ ದಕ್ಕದೇ ಹೋದೀತು. .ಬದಲಾಗುತ್ತಿರುವ ಆಚಾರ, ವಿಚಾರಗಳ ಮಧ್ಯೆ ದೈವರಾಧನೆಯ ಮುಂದಿನ ಭವಿಷ್ಯವೇನು?
10- 20 ವರ್ಷಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಆಗದು. ಕಾಲಾಂತರದಲ್ಲಿ ದೈವಾರಾಧನೆ ಯ ಪರಿಚಾರಕ ವರ್ಗದಲ್ಲಿ ಕೊರತೆಗಳು ಕಂಡುಬರಬಹುದು. ಎಲ್ಲ ಪರಿಚಾರಕರನ್ನು ಸಮಾನವಾಗಿ ಗೌರವಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.
Related Articles
ದೈವಾರಾಧನೆ ಮೂಲತಃ ವೈಭವಯುತ ಉತ್ಸವ. ನಿಶ್ಯಬ್ದವಾಗಿ ನೇಮ- ಕೋಲ ನಡೆಸುವ ಪರಿಪಾಠವಿಲ್ಲ. ಆದರೆ ಆರಾಧನೆ ಮನರಂಜನೆಯ ವಿಷಯ ಆಗಬಾರದು. ಆರಾಧನೆಯ ಚೌಕಟ್ಟಿನಲ್ಲಿ ಕೆಲವು ವಿನೋದ ಪ್ರಸಂಗಗಳುಂಟು. ಅದಕ್ಕೆ ಖುಷಿ ಪಡೋಣ. ಇದೇ ಆರಾಧನೆಯೇ ಮನರಂಜನೆ ಆಗಿಬಿಡಬಾರದು.
Advertisement
ಜನಪದದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವುದು ಹೇಗೆ?ಎಲ್ಲ ಕಾಲೇಜುಗಳಲ್ಲಿ ಜನಪದ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಜನಪದ ಕುಣಿತ ಮತ್ತು ಹಾಡುಗಳ ಸ್ಪರ್ಧೆ, ಜನಪದದ ಕುರಿತಾಗಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಬೇಕು. ಜನಪದೋತ್ಸವ ಮಾಡಿ ಜನಪದ ತಿನಿಸುಗಳನ್ನು ಸವಿಯುವ ಅವಕಾಶ ಮಾಡಿ ಕೊಡಬಹುದು. ಜನಪದ ಕ್ಷೇತ್ರದ ಸಾಧಕರಿಗೆ ಗೌರವ ಮೊದಲಾದ ಹತ್ತಾರು ಯೋಜನೆಗಳನ್ನು ಹಾಕಿಕೊಳ್ಳಬಹುದು. ಡಾ| ನವೀನ್ ಕುಮಾರ್ ಮರಿಕೆ,
ಜನಪದ ಸಂಶೋಧಕ, ಪುತ್ತೂರು ಗಣೇಶ್ ಎನ್. ಕಲ್ಲರ್ಪೆ