Advertisement

ಅದಲು ಬದಲು ಲಸಿಕಾ ಸ್ವೀಕಾರಕ್ಕೆ ಡಿಸಿಜಿಐ ಅನುಮತಿ..!

03:21 PM Aug 11, 2021 | Team Udayavani |

ನವ ದೆಹಲಿ : ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಅದಲು ಬದಲು ಲಸಿಕೆ ಸ್ವೀಕಾರಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.

Advertisement

ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರ್ ನಡೆಸಿದ ಅದಲು ಬದಲು ಲಸಿಕಾ ವೈದ್ಯಕೀಯ ಪ್ರಯೋಗಗಳನ್ನು ಡಿಸಿಜಿಐ ಅನಮತಿಸಿದೆ. ಜುಲೈ 29 ರಂದು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಒಂದು ವಿಷಯದ ತಜ್ಞ ಸಮಿತಿಯು ಈ ಅಧ್ಯಯನವನ್ನು ನಡೆಸುವುದು ಶಿಫಾರಸು ಮಾಡಿತ್ತು.

ಇದನ್ನೂ ಓದಿ : ರಾಜಕೀಯದಲ್ಲಿ ವಯಸ್ಸು ಮುಖ್ಯವಲ್ಲ, ಆರೋಗ್ಯ, ಕೆಲಸ ಮಾಡುವ ಉತ್ಸಾಹ ಮಾತ್ರ ಮುಖ್ಯ : ಸಿದ್ದು

ಕೋವಿಡ್ -19 ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಅದಲು ಬದಲು ಲಸಿಕಾ ಸ್ವೀಕಾರ ಮಾಡುವ ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು  ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಗೆ ಶಿಫಾರಸು ಮಾಡಿತ್ತು. 300 ಆರೋಗ್ಯ ಕಾರ್ಯಕರ್ತರನ್ನು  ನಾಲ್ಕು ಹಂತಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗಿತ್ತು.

ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ವಿಭಿನ್ನ ಲಸಿಕೆಗಳನ್ನು ಪಡೆಯಬಹುದೇ ಎನ್ನುವ ಪ್ರಾಯೋಗಿಕ ಪರೀಕ್ಷೆಯನ್ನು ಮಾಡಲಾಗಿತ್ತು.

Advertisement

ಮೇ ಹಾಗೂ ಜೂನ್ ನಡುವಿನಲ್ಲಿ ಈ ಪ್ರಾಯೋಗಿಕ ಪರೀಕ್ಷೆಯನ್ನು ಉತ್ತರ ಪ್ರದೇಶದಲ್ಲಿ ಮಾಡಲಾಗಿತ್ತು. ಅದಲು ಬದಲು ಲಸಿಕೆ ಸ್ವೀಕಾರ ಮಾಡುವುದರಿಂದ ಯಾವುದೇ ರೀತಿಯಲ್ಲಿ ಸಮಸ್ಯೆ ಇಲ್ಲ. ಅದಲು ಬದಲು ಲಸಿಕಾ ಸ್ವೀಕಾರ ಮಾಡುವುದರಿಂದ ರೋಗ ನಿರೋಧಕ ಶಕ್ತಿಯೂ ಕೂಡ ಹೆಚ್ಚುತ್ತದೆ. ಲಸಿಕೆಗಳು ಅದಲು ಬದಲಾದರೆ ಪ್ರತಿಕಾಯ ಉತ್ಪಾದನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಎಂದು ಐಸಿಎಂಆರ್ ಹೇಳಿದೆ.

ಇನ್ನು, ಇತರ ರಾಷ್ಟ್ರಗಳಲ್ಲಿಯೂ ಕೆಲವು ತಿಂಗಳುಗಳ ಹಿಂದೆ 2 ಡೋಸ್‌ಗಳಾಗಿ ಭಿನ್ನ ಲಸಿಕೆ  ನೀಡುವುದರಿಂದ ಉತ್ತಮ ಫ‌ಲಿತಾಂಶ ಸಿಗುತ್ತದೆ ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ : ಆನಂದ ಸಿಂಗ್ ಅವರ ಅಸಮಾಧಾನ ಎರಡು ದಿನಗಳಲ್ಲಿ ಸುಖಾಂತ್ಯವಾಗಲಿದೆ : ವಿ. ಸೋಮಣ್ಣ

Advertisement

Udayavani is now on Telegram. Click here to join our channel and stay updated with the latest news.

Next