Advertisement

‘ತಳಿಶಾಸ್ತ್ರ ವಿಚಾರದಲ್ಲಿ ಅಧ್ಯಯನ ನಡೆಯಲಿ’

12:10 PM Nov 18, 2017 | |

ಮಂಗಳಗಂಗೋತ್ರಿ: ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಜೆನೆಟಿಕ್ಸ್‌ (ತಳಿಶಾಸ್ತ್ರ) ಮೂಲಕ ಅನುವಂಶಿಯವಾಗಿ ಬರುವ ಕಾಯಿಲೆಗಳನ್ನು ಪತ್ತೆ ಹಚ್ಚಬಹುದಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಸ್ವಿಝರ್ಲೆಂಡಿನ ಪ್ರೊ| ಜಾರ್ಜ್‌ ವಾನ್‌ ಡ್ರೀಮ್‌ ಅಭಿಪ್ರಾಯಪಟ್ಟರು.

Advertisement

ಮಂಗಳೂರು ವಿಶ್ವವಿದ್ಯಾನಿಲಯದ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಹಾಗೂ ನ್ಯಾಚುಲರ್‌ ಹಿಸ್ಟರಿ ಅಸೋಸಿಯೇಶನ್‌ನ ಆಶ್ರಯದಲ್ಲಿ ಮೊಲಾಕ್ಯುಲರ್‌ ಆಂಡ್‌ ಮೆಡಿಕಲ್‌ ಜೆನೆಟಿಕ್ಸ್‌ ಎಂಬ ವಿಷಯದಲ್ಲಿ ಬುಧವಾರ ಮಂಗಳೂರು ವಿವಿಯ ಹಳೆ ಸೆನೆಟ್‌ ಸಭಾಂಗಣದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರವು ಇಂದು ಕ್ಷಿಪ್ರವಾಗಿ ಬೆಳೆದಿರುವುದರಿಂದ ವೈದ್ಯಕೀಯ ತಳಿಶಾಸ್ತ್ರ ವಿಷಯದಲ್ಲಿ ಇನ್ನಷ್ಟು ಅಧ್ಯಯನಕ್ಕೆ ಅವಕಾಶವನ್ನು ಒದಗಿಸಿಕೊಟ್ಟಿದೆ. ಭಾರತೀಯರ ಭಾಷೆ ಮತ್ತು ವಂಶವಾಹಿ ನಡುವೆ ಬಹಳಷ್ಟು ಹೊಂದಾಣಿಯಿದ್ದು, ಈ ನಿಟ್ಟಿನ ಅಧ್ಯಯನ ಬಹಳ ಕುತೂಹಲಕಾರಿಯಾಗಿದೆ. ವಿವಿ ಮಟ್ಟದಲ್ಲಿ ನಡೆಯುವ ಇಂತಹ ವಿಚಾರಗೋಷ್ಠಿ ಬಹಳಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಪೂರಕವಾಗಲಿ ಎಂದರು.

ವಿಚಾರ ಮಂಡಿಸಿದವರು
ಇಸ್ರೇಲಿನ ಕಾರ್ಮೇಲ್‌ ಮೆಡಿಕಲ್‌ ಸೆಂಟರ್‌ನ ಡಾ| ಡೊರೋನ್‌ ಬೆಹರ್‌ ಅವರು ಯಹೂದಿಯರಲ್ಲಿನ ಅನುವಂಶೀಯ ಅವ್ಯವಸ್ಥಿತೆಯ ತೊಂದರೆಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಎಡಿನ್‌ಬರ್ಗ್ನ ಡಾ| ಚಂದನ ಬಸು ಮಲ್ಲಿಕ್‌ ಅವರು ಮಾನವ ಹಾಗೂ ಇಲಿಗಳ ಕೂದಲಿನ ಸಾಂಧ್ರತೆ ಹಾಗೂ ಧೃಡತೆಯ ಮೇಲಿನ ಅನುವಂಶೀಯ ವಿಚಾರಗಳ ಬಗ್ಗೆ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಡೀನ್‌ ಪ್ರೊ| ಈಶ್ವರ್‌ ಭಟ್‌ ಅಧ್ಯಕ್ಷತೆ ವಹಿಸಿದ್ದರು. ವಾರಣಾಸಿ ವಿವಿಯ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊ| ಜ್ಞಾನೇಶ್ವರ್‌ ಚೌಬೆ ಪ್ರಸ್ತಾವನೆಗೈದರು. ಮಂಗಳೂರು ವಿವಿ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಕೆ.ಎಸ್‌.ಶ್ರೀಪಾದ ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದ ಸಂಘಟಕ ಹಾಗೂ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಎಂ.ಎಸ್‌.ಮುಸ್ತಾಕ್‌ ಸ್ವಾಗತಿಸಿ, ಪ್ರಾಧ್ಯಾಪಕ ಡಾ| ಸೋಮಯ್ಯ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next