Advertisement
ಮುದ್ಧೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ, ಹಡಪದ ಅಪ್ಪಣ್ಣ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಪೀಠ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 1 ಕೋಟಿ ರೂ. ನೀಡಿದ್ದು, ಇದೀಗ ನಾನು 3 ಕೋಟಿ ರೂ. ನೀಡಿ ಅಡಿಗಲ್ಲು ಹಾಕಿದ್ದೇನೆ. ಭವಿಷ್ಯದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
Related Articles
Advertisement
ಹಡಪದ ಅಪ್ಪಣ್ಣ ಇಲ್ಲದೆ ಬಸವೇಶ್ವರರು ಯಾವ ನಿರ್ಣಯ ಕೈಗೊಳ್ಳುತ್ತಿದ್ದರು. ಸಮಾಜದ ಆಶೋತ್ತರ ಈಡೇರಿಸುವಲ್ಲಿ ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಹೊರಗೆ ವಿರೋಧ ಹಾಗೂ ಒಳಗೆ ಕುತಂತ್ರ ಇರುತ್ತದೆ. ಆದರೆ ರಾಜ್ಯದಲ್ಲಿ ಇನ್ನು ತಳ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಸಿಗಲಿದೆ ಎಂದರು.
ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತೀ ಸ್ವಾಮಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುದ್ಧೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಬೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರಶ್ರೀ, ಕಾಗಿನೆಲೆ ಗುರುಪೀಠದ ಈಶ್ವರಾನಂದ ಶ್ರೀಗಳು, ಜಿಲ್ಲಾಧಿಕಾರಿ ಡಾ.ವಿ.ಬಿ.ದಾನಮ್ಮನವರ, ಎಸ್ಪಿ ಆನಂದಕುಮಾರ, ಹಡಪದ ಸಮಾಜದ ರಾಜ್ಯಾಧ್ಯಕ್ಷ ಸಿದ್ದರ್ಣಣ ಹಡಪದ, ನಾಗರಾಜ ಸರ್ಜಾಪುರ, ಎಚ್.ಡಿ.ವೈದ್ಯ, ಬಸವರಾಜ ಬೆಳಗಾವಿ, ಚಿದಾನಂದ ಬಸರಕೋಡ, ಸಂತೋಷ ಹಡಪದ, ಶಿವಶಂಕರ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹಡಪದ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೆ ಮನವಿಲಿಂಗಾಯತ ಸಮುದಾಯದ ಒಳಪಂಗಡವಾದರೂ ಹಡಪದ ಸಮುದಾಯವನ್ನು ಸಮಾಜದಲ್ಲಿ ಇನ್ನೂ ಕೀಳಾಗಿ ಕಾಣಲಾಗುತ್ತಿದೆ. ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಪ್ರವರ್ಗ 2-ಎ ಗುಂಪಿನಲ್ಲಿರುವ ಹಡಪದ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.- ಅನ್ನದಾನಿ ಭಾರತೀಸ್ವಾಮಿಜಿ ಹಡಪದ ಅಪ್ಪಣ್ಣ ಪೀಠ, ತಂಗಡಗಿ.