Advertisement
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದಜಯರಾಮ್ ಪುತ್ರ ಮನೋಜ್ ಹಾಗೂ ರಾಜೇಶ್‌ಖನ್ನಾ ಪುತ್ರಿ ಗಾಯಿತ್ರಿ ಖನ್ನಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿ ರುವ ಯುದ್ಧಕ್ಕೆ ಭಯ ಬಿದ್ದಿರುವ ವಿದ್ಯಾರ್ಥಿಗಳು, ಭಾರತಕ್ಕೆ ಮರಳಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇಲ್ಲಿನ ಪೋಷಕರಿಗೂ ಆತಂಕ ಕಾಡುತ್ತಿದೆ.
Related Articles
Advertisement
ಆಹಾರ ಕೊರತೆ: ಇದುವರೆಗೂ ಇದ್ದ ದಿನಸಿ ಸಾಮಗ್ರಿ ಖಾಲಿಯಾಗುತ್ತಿದ್ದು, ಊಟ, ತಿಂಡಿಗೆ ಕೊರತೆಯಾಗುತ್ತಿದೆ. ಊಟ, ನೀರು ಇಲ್ಲದೆ, ಹಸಿವಿನಿಂದ ನರಳುವಂತಾಗಿದೆ. ಊಟ, ತಿಂಡಿ ತರಲು ಬಂಕರ್ ಬಿಟ್ಟು ಹೊರಗೆ ಬರಬೇಕಾದ ಸ್ಥಿತಿ ಎದುರಾಗಿದೆ. ಹೊರಗೆ ಬಂದರೆ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿ ನಡೆಯುತ್ತಿವೆ. ಇದರಿಂದ ಊಟ, ತಿಂಡಿಗೆ ಕೊರತೆಯಾಗಿದೆ. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.
ನೆಟ್‌ವರ್ಕ್ ಕಡಿತ: ವಿದ್ಯುತ್, ನೆಟ್‌ವರ್ಕ್ ಆಗಾಗ್ಗೆ ಕೈಕೊಡುತ್ತಿದೆ. ಸರಿಯಾಗಿ ಮಾತನಾಡಲು ಆಗುತ್ತಿಲ್ಲ.ವಿದ್ಯುತ್ ಸಂಪರ್ಕ, ನೆಟ್‌ವರ್ಕ್ ಕೊರತೆಯಿಂದಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆತನೇ ವಿಡಿಯೋಮಾಡಿ ಕಳುಹಿಸುತ್ತಿದ್ದಾನೆ. ನಾವು ಸಂಪರ್ಕಮಾಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತದೊಂದಿಗೆ ಸಂಪರ್ಕ: ಪ್ರತಿದಿನ ಜಿಲ್ಲಾಡಳಿತದೊಂದಿಗೆ ಸಂಪರ್ಕ ಮಾಡಲಾಗುತ್ತಿದ್ದು,ವಿದ್ಯಾರ್ಥಿ ಮನೋಜ್ ನೀಡುವ ಕಾಖೀìವ್ ನಗರದ ಪರಿಸ್ಥಿತಿ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನವೀನ್ ಸಾವು: ಪೋಷಕರಲ್ಲಿ ಹೆಚ್ಚಿದ ಆತಂಕ :
ಹಾವೇರಿ ಮೂಲಕ ನವೀನ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ಹಿನ್ನೆಲೆ ಮನೋಜ್ ಹಾಗೂ ಗಾಯಿತ್ರಿ ಖನ್ನಾ ಅವರ ಪೋಷಕರಿಗೆ ಆತಂಕ ಹೆಚ್ಚಾಗಿದೆ. ತಿಂಡಿ ತರಲು ಬಂಕರ್‌ನಿಂದ ಹೊರಗೆ ಬಂದ ನವೀನ್‌ಸಾವನ್ನಪ್ಪಿರುವುದು ಟಿವಿಯಲ್ಲಿ ನೋಡಿ ನಮಗೆ ಆತಂಕ ಹೆಚ್ಚಾಗುತ್ತಿದೆ. ಮನೋಜ್ ಸಂಪರ್ಕಕ್ಕೆ ಸಿಗದೆಇರುವುದರಿಂದ ಭಯವೂ ಹೆಚ್ಚಾಗಿದೆ. ಕೂಡಲೇ ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಕರೆ ತರಲು ಮುಂದಾಗಬೇಕು ಎಂದು ವಿದ್ಯಾರ್ಥಿ ಮನೋಜ್ ತಂದೆ ಜಯರಾಮು ಮನವಿ ಮಾಡಿದರು.