Advertisement

ಪೊಲೀಸ್‌ ಠಾಣೆಗೆ ಶಾಲಾ ಮಕ್ಕಳು ಭೇಟಿ : ಠಾಣೆಯ ಮಾಹಿತಿ ಪಡೆದ ಮಕ್ಕಳು

02:06 PM Dec 30, 2021 | Team Udayavani |

ದೊಡ್ಡಬಳ್ಳಾಪುರ: ಗ್ರಾಮಾಂತರ ಪೊಲೀಸ್‌ ಠಾಣೆ ಹಾಗೂ ನಗರ ವೃತ್ತ ಕಚೇರಿಗೆ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ತರಬೇತಿ ಪಡೆದ ವಿದ್ಯಾರ್ಥಿಗಳು ಭೇಟಿ ನೀಡಿ, ಪೊಲೀಸ್‌ ಠಾಣೆಯ
ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.

Advertisement

ಸರ್ಕಲ್‌ ಇನ್ಸ್‌ಪೆಕ್ಟರ್‌ ಎಂ.ಬಿ. ನವೀನ್‌ ಕುಮಾರ್‌ ಹಾಗೂ ಇನ್ಸ್‌ಪೆಕ್ಟರ್‌ ಸತೀಶ್‌ ಅವರು ಪೊಲೀಸ್‌ ಠಾಣೆಯ ದೈನಂದಿನ ಕರ್ತವ್ಯ, ಜನಸಾಮಾನ್ಯರ ಹಿತರಕ್ಷಣೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು. ಪೊಲೀಸರೆಂದರೆ ಮಾರು ದೂರ ಓಡುವ ಮಕ್ಕಳ ನಡುವೆ ತಾಲೂಕಿನ ಸರ್ಕಾರಿ ಪದವಿ ಕಾಲೇಜು ಪ್ರೌಢಶಾಲಾ ವಿಭಾಗ, ಜವಹಾರ್‌ ನವೋದಯ, ಅರಳುಮಲ್ಲಿಗೆ ಬಾಗಿಲು, ಕೊನಘಟ್ಟ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಆತ್ಮೀಯವಾಗಿ ಬೆರೆತು ಮಾತನಾಡಿದರು. ನಂತರ ಬಾಶೆಟ್ಟಹಳ್ಳಿ ಅಗ್ನಿಶಾಮಕ ಠಾಣೆಗೆ ತೆರಳಿ ಬೆಂಕಿ ಅವಘಡದ ಮುಂಜಾಗ್ರತೆ, ನಂದಿಸುವಿಕೆ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ : 2021ರ ಹಿನ್ನೋಟ: ದೇಶದ ಪ್ರಮುಖ ಘಟನಾವಳಿ-ಲಕ್ಷದ್ವೀಪ ವಿವಾದ, ರಾವತ್ ದುರಂತ, ಹಿಂಸಾಚಾರ

Advertisement

Udayavani is now on Telegram. Click here to join our channel and stay updated with the latest news.

Next