ತಿಪಟೂರು: ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಭಾಷಾ ಸಂಸ್ಕೃತಿಗೆ ಮಾರುಹೋಗದೆ, ನಮ್ಮ ಭಾಷಾ ಸಂಸ್ಕೃತಿಯಲ್ಲಿರುವ ಅಗಾಧ ಸಂಸ್ಕಾರಯುತ ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕೆಂದು ತುಮಕೂರಿನ ಸಿದ್ದಗಂಗಾ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಕೆ.ಎಸ್. ಮಲೈಕಾ ಸುಲ್ತಾನ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಮತ್ತು ಉರ್ದು ಸಾತ್ಯ ಪೋರಂ, ಐಕ್ಯೂಎಸಿ ವತಿುಂದ ಆಯೋಜಿಸಿದ್ದ ಹಿಂದಿ ಮತ್ತು ಉರ್ದು ಭಾಷಾ ದಿವಸ್ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮ ಯಾವುದೇ ಇರಲಿ ಮೊದಲು ಮನುಷ್ಯನಾಗಬೇಕು. ಎಲ್ಲಾ ಧರ್ಮಗಳ ಸಾರ ಒಂದೇ ಆಗಿದ್ದು, ಶಾಂತಿ ಪ್ರತಿಪಾದಿಸುವುದು ಮುಖ್ಯವಾಗಿದೆ. ಹಿಂದಿ ರಾಷ್ಟ್ರ ಭಾಷೆಯಾದರೆ, ಉರ್ದು ಮಾತೃಭಾಷೆಯಾಗಿದೆ.
ಇವುಗಳ ಜತೆಗೆ ಬೇರೆ ಭಾಷೆ ಪ್ರೀತಿಸುವ ಮೂಲಕ ಅಳವಡಿಸಿಕೊಳ್ಳಬೇಕು. ಒಂದೊಂದು ಭಾಷೆಗಳಲ್ಲಿಯೂ ಭಿನ್ನ ಸಂಸ್ಕೃತಿ ಕಾಣುತ್ತೇವೆ. ಪ್ರವಾದಿ ಮಹಮದರ ಕಾಲದಲ್ಲಿ ಸ್ತ್ರೀಯರಿಗೆ ಹೆಚ್ಚು ಸಮಾನತೆ ಮತ್ತು ಗೌರವ ಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ತ್ರೀಯರಿಗೆ ಗೌರವಾದರಗಳು ಕಡಿಮೆಯಾಗುತ್ತಿರುವುದು ವಿಷಾದನೀಯ.
ಶಿವಶರಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕನಕದಾಸ, ಪುರಂದರದಾಸರಂತೆ ನಮ್ಮ ಸಂಸ್ಕೃತಿಯಲ್ಲಿ ಸಂತಶಿಶುನಾಳ ಷರೀಫ, ಕಬೀರಂತಹ ಮಹನೀಯರು ಅವರದ್ದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿರುವ ಪ್ರತಿಯೊಬ್ಬರು ಒಂದೆ ಆಗಿದ್ದು ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊದಸ್ತಗೀರ್ ಮಾತನಾಡಿ, ಭಾರತ ಭವ್ಯ ಸಂಸ್ಕೃತಿ ಮತ್ತು ಹಲವು ಪ್ರಾಂತ್ಯ ಹೊಂದಿದ್ದು, ವಿವಿಧ ಭಾಷೆ ಮಾತನಾಡುವವರಿದ್ದಾರೆ. ಮಾತೃಭಾಷೆಗೆ ಗೌರವ ಕೊಡುವ ಮೂಲಕ ಎಲ್ಲರಿಗೂ ಪರಿಚಯಿಸುವ ಕೆಲಸವಾದಾಗ ಮಾತೃಭಾಷೆ ಗಟ್ಟಿಯಾಗಲು ಸಾಧ್ಯ. ಇತರೆ ಭಾಷೆ ಕಲಿಯುವುದರಿಂದ ನಮ್ಮ ವ್ಯಕ್ತಿತ್ವ ಕಸನಗೊಳ್ಳುವುದಲ್ಲದೆ ಬಹುಮುಖೀ ಜ್ಞಾನ ಲಭ್ಯವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಕೆ.ಎಂ.ರಾಜಣ್ಣ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಆಯೋಜಿಸಿದ್ದು, ಭಾಷೆ, ಧರ್ಮಗಳಲ್ಲಿ ಮೇಲು-ಕೀಳು ಬೇಡ. ಆಧುನಿಕ ಜೀವನಕ್ಕೆ ಎಲ್ಲಾ ಭಾಷೆಗಳು ಅವಶ್ಯಕವಿದ್ದು, ವಿದ್ಯಾರ್ಥಿಗಳು ಮಾತೃಭಾಷೆಗೆ ಸೀಮಿತವಾಗದೆ ಇತರೆ ಭಾಷೆ ಗೌರವಿಸುವ ಮೂಲಕ ಕಲಿಯುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ವಿಭಾಗದ ಮುಖ್ಯಸ್ಥೆ ಡಾ. ಕೆ.ಎಸ್.ಸುಧಾ, ಐಕ್ಯೂಎಸಿ ಸಂಯೋಜಕ ಪ್ರೊ.ಎಸ್.ಆರ್.ನಾಗಭೂಷಣ್, ಪ್ರೊ.ಸೈಯದ್ ಇಬ್ರಾಂ, ಡಾ.ಎನ್. ನರಸಿಂಹರಾಜು, ಪ್ರೊ.ಎನ್.ಮನೋಜ್‌ಕುಮಾರ್, ಪ್ರೊ.ಸವಿತಾ ಚಿಕ್ಕಣ್ಣನವರ್, ಡಾ.ಎಂ.ಜಿ.ಜ್ಯೋತಿ, ಪ್ರೊ.ಎಸ್.ಪಿ.ಯಶೋಧ, ಡಾ.ಜಿ. ಉಮೇಶ್, ಪ್ರೊ.ಜಗದೇವಪ್ಪ, ಡಾ. ಎಲ್.ಎಂ.ವೆಂಕಟೇಶ್ ಮತ್ತಿತರರಿದ್ದರು.