Advertisement
ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಅಹಿತಕರ ಘಟನೆಯ ಕುರಿತು ಸಿಎಂಗೆ ಸ್ಪಷ್ಟ ಮಾಹಿತಿ ನೀಡಿದ್ದೇವೆ. ನಾನು, ಪೊಲೀಸ್ ಅಧಿಕಾರಿಗಳು ಸೇರಿ ನಿನ್ನೆ ಮಾಹಿತಿ ನೀಡಿದ್ದೇವೆ. ಅಂತಹ ಘಟನೆಗಳನ್ನು ಕಂಟ್ರೋಲ್ ಮಾಡುವುದಕ್ಕೆ ರಜೆ ಸಹ ಘೋಷಣೆ ಮಾಡಿದ್ದೇವೆ ಎಂದರು.
Related Articles
Advertisement
ಘಟನೆ ಹಿಂದೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿವೆ. ನಿನ್ನೆ ಘಟನೆಯ ಕುರಿತು ತನಿಖೆ ಆಗುತ್ತಿದೆ. 144 ಅವಶ್ಯಕತೆ ಇರುವ ಕಡೆ ಹಾಕಿದ್ದೇವೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಬೆಂಕಿ ಹಚ್ಚಲು ಹೋಗಿ ಕಳೆದು ಹೋಗುತ್ತಿದೆ. ರಾಜ್ಯದಲ್ಲಿ ವಿಪಕ್ಷ ಸ್ಥಾನ ಮಾತ್ರ ಇದೆ, ಹೀಗೆ ಮಾಡಿದರೆ ಇವರ ಪಕ್ಷವನ್ನ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದರು.