ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ಆತ್ಮಬಲ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಎಳೆಯರಿಗೆ ಬಳೆವರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶ್ರಮ ವಹಿಸಿ ಶ್ರದ್ಧೆಯಿಂದ ಕಲಿತರೆ ಯಾವು ದೇ ರೀತಿಯ ಸಾಧನೆ ಮಾಡಬಹುದು. ವಿದ್ಯಾರ್ಥಿಗಳಿಗೆ ಗುರಿ ಹೊಂದುವ ಮೂಲಕ ಪ್ರತಿ ಅವಕಾಶಗಳನ್ನು ನಿಮ್ಮದಾಗಿಸಿ ಕೊಳ್ಳಬೇಕು. ಸಿವಿಲ್ ಸೇವೆ, ಸೇನೆ ಸೇರಿದಂತೆ ಇತರೆ ಹಲವು ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ವಿಫುಲವಾದ ಅವಕಾಶಗಳಿವೆ ಎಂದರು. ಅಲ್ಲದೇ ವಿಶೇಷವಾದ ಮೀಸಲಾತಿ ಸಹ ಇದೆ. ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಅಂತಿಮ ಪದವಿ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಕಾಲೇಜಿಗೆ ಸ್ವಾಗತ ಕೋರಿದರು. ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿ ಕಾರಿ ಬಿ.ಎಲ್. ತ್ರಿಪುರಾಂತಕ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೀಳು ಹತ್ತಿಸಿಕೊಂಡಿದ್ದಾರೆ. ಇದನ್ನು ಬಿಟ್ಟು ಗುರಿ ಸಾಧನೆಯತ್ತ ಗಮನ ಹರಿಸಬೇಕು. ಚೆನರೆ ಐಎಎಸ್, ಐಎಫ್ ಎಸ್ ಪರೀಕ್ಷೆಗಳನ್ನು ಎದುರಿಸಬಹುದು ಎಂದರು.
ಕೈ ಕಾಲು ಇಲ್ಲದ ವ್ಯಕ್ತಿಗಳು ಉತ್ತಮ ಸಾಧನೆ ಮಾಡಿ ದ್ದಾರೆ. ಹೀಗಿರುವಾಗ ಎಲ್ಲ ಸರಿಯಿರುವ ವಿದ್ಯಾರ್ಥಿಗಳು ಅದಕ್ಕಿಂತ ಉತ್ತಮವಾದ ಸಾಧನೆ ಮಾಡಬಹುದು. ನೀವು ಇತರರೊಡನೆ ಹೋಲಿಕೆ ಮಾಡಿಕೊಳ್ಳ ಬೇಡಿ. ಇರುವುದರಲ್ಲೇ ಸಂತೋಷ ಪಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಾರ್ವ ಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಜಿ.ಸಿದ್ದರಾಜು, ಉಪನ್ಯಾಸಕರಾದ ರೇವ ಣಾಂಬ, ಡಾ.ಎ. ಆರ್.ಸುಷ್ಮಾ, ಜಮುನಾ, ಮಹೇಶ್, ಗ್ರಂಥ ಪಾಲಕ ಡಾ. ಗುರುಪ್ರಸಾದ್, ವಿದ್ಯಾರ್ಥಿನಿ ಯರಾದ ನಿತ್ಯಾಶ್ರೀ, ಕಾವ್ಯಾ ಇತರರು ಇದ್ದರು.