Advertisement
ಕೃಷಿ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹಿಸ್ಸಾವಾರು ಸಮೀಕ್ಷೆ ನಡೆಯುತ್ತಿದ್ದು, ಉಡುಪಿಯಲ್ಲಿ ಕಳೆದ ವರ್ಷವೂ ಹಿಸ್ಸಾವಾರು ಸಮೀಕ್ಷೆ ನಡೆದಿತ್ತು ಎನ್ನಲಾಗಿದೆ.ರೈತರು ತಮ್ಮ ಆಂಡ್ರಾಯ್ಡ ಮೊಬೈಲಿನ ಮೂಲಕ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆ ನಡೆಸಬೇಕು. ಜಂಟಿ ಖಾತೆ ಹೊಂದಿದ ರೈತರಿಗೆ ಆಯಾ ಗ್ರಾಮಗಳಿಗೆ ಕಂದಾಯ ಇಲಾಖೆಯಿಂದ ನಿಯೋಜಿಸಲಾದ ಖಾಸಗಿ ನಿವಾಸಿ (ಪಿಆರ್)ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಅವಕಾಶವಿರುತ್ತದೆ.
Related Articles
Advertisement
ಪಿಆರ್‌ಗಳ ಆದಾಯಕ್ಕೂ ಕುತ್ತು: ಸಮೀಕ್ಷೆಗಾಗಿ ನೇಮಕಗೊಂಡ ಪಿಆರ್‌ಗಳಿಗೆ ಒಂದು ಪ್ಲಾಟ್‌ನ ಮೂರು ಬೆಳೆ ಸಮೀಕ್ಷೆಗೆ 20 ರೂ. ನೀಡಲಾಗುತ್ತಿದ್ದು, ಹಿಂದೆ ದಿನಕ್ಕೆ 50 ಪ್ಲಾಟ್ ಸಮೀಕ್ಷೆ ಆಗುತ್ತಿದ್ದುದರಿಂದ 1 ಸಾವಿರ ರೂ.ಗಳವರೆಗೆ ಆದಾಯ ಸಿಗುತ್ತಿತ್ತು. ಆದರೆ ಹಿಸ್ಸಾವಾರು ಸಮೀಕ್ಷೆಯಿಂದ ದಿನಕ್ಕೆ ಬರೀ 20 ಪ್ಲಾಟ್ ಸಮೀಕ್ಷೆ ನಡೆಯುತ್ತಿರುವುದರಿಂದ ಅವರ ಆದಾಯಕ್ಕೂ ಕುತ್ತು ಬಿದ್ದಿದ್ದು, ಹೀಗಾಗಿ ನಿಗದಿತ ಮೊತ್ತ ಹೆಚ್ಚಳಕ್ಕೆ ಆಗ್ರಹ ಕೇಳಿ ಬರುತ್ತಿದೆ.
ರಾಜ್ಯದ ಶೇಕಡಾವಾರು ವಿವರಜಿಲ್ಲೆ ಶೇಕಡಾವಾರು ಸಮೀಕ್ಷೆ
ವಿಜಯಪುರ 69.47
ದಾವಣಗೆರೆ 62.76
ಬೀದರ್ 60.18
ಯಾದಗಿರಿ 58.92
ಬಳ್ಳಾರಿ 57.45
ಚಿತ್ರದುರ್ಗ 56.43
ಚಿಕ್ಕಬಳ್ಳಾಪುರ 53.30
ವಿಜಯನಗರ 52.10
ಬೆಳಗಾವಿ 46.71
ಕೊಡಗು 45.79
ಕೊಪ್ಪಳ 41.53
ಕಲಬುರಗಿ 41.22
ಶಿವಮೊಗ್ಗ 39.35
ಬೆಂಗಳೂರು ಗ್ರಾ. 39.25
ಉತ್ತರಕನ್ನಡ 38.30
ರಾಯಚೂರು 38.21
ಬೆಂಗಳೂರು ನಗರ 34.22
ಕೋಲಾರ 28.13
ತುಮಕೂರು 26.41
ಹಾಸನ 24.26
ಧಾರವಾಡ 21.17
ಚಿಕ್ಕಮಗಳೂರು 15.10
ರಾಮನಗರ 13.91
ಬಾಗಲಕೋಟೆ, ಗದಗ, ಹಾವೇರಿ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪೈಕಿ ಪೂರ್ವ ಮುಂಗಾರು ಅಥವಾ 2ನೇ ಹಂತದಲ್ಲಿ ಸಮೀಕ್ಷೆ ನಡೆಯುವುದರಿಂದ ಇಲ್ಲಿ ಪ್ರಸ್ತುತ ಬೆಳೆ ಸಮೀಕ್ಷೆ ಗಣನೆಗೆ ಬರುವುದಿಲ್ಲ. ಹಿಸ್ಸಾವಾರು
ಸಮೀಕ್ಷೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಮೀಕ್ಷೆಗೆ ಹಿನ್ನಡೆಯಾಗಿದ್ದು, ಸಮೀಕ್ಷೆಗೆ ಜಿಪಿಎಸ್ ಅಂತರವನ್ನು 50 ಮೀ.ಗೆ ಹೆಚ್ಚಿಸುವಂತೆ ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದೆ ದಿನಾಂಕ ವಿಸ್ತರಣೆಗೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಬೆಳೆ ಸಮೀಕ್ಷೆ ನಡೆಯಬಹುದು.
-ಹೊನ್ನಪ್ಪ ಗೋವಿಂದೇಗೌಡ ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ದ.ಕ. ಕಿರಣ್ ಸರಪಾಡಿ