Advertisement

Bhutan ಅಡಿಕೆ ಆಮದು ನಮ್ಮ ಬೆಳೆಗಾರರ ಮೇಲೆ ಪರಿಣಾಮ ಬೀರದು: ಕಿಶೋರ್ ಕುಮಾರ್ ಕೊಡ್ಗಿ

06:33 PM Sep 19, 2024 | Team Udayavani |

ದಾವಣಗೆರೆ :ಭೂತಾನ್ ಅಡಿಕೆ ಆಮದು ದೇಶದ ಅಡಿಕೆ ಬೆಳೆಗಾರರ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿಕೆ ನೀಡಿದ್ದಾರೆ.

Advertisement

”ನೆರೆಯ ರಾಷ್ಟ್ರ ಭೂತಾನ್ ರಕ್ಷಣೆ ಹಾಗೂ ಸಹಕಾರದ ಭಾಗವಾಗಿ ಕೇಂದ್ರ ಸರ್ಕಾರ ಅಲ್ಲಿಯ ಅಡಿಕೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಭೂತಾನ್ ಅಡಿಕೆ ಆಮದು ರಾಷ್ಟ್ರೀಯ ಸಹಕಾರ, ಭದ್ರತೆಯ ಭಾಗವಾಗಿ ಕೈಗೊಂಡ ಕ್ರಮವಾಗಿದೆ” ಎಂದು ಕ್ಯಾಂಪ್ಕೋ ಅಧ್ಯಕ್ಷರು ತಿಳಿಸಿದರು.

”ಭೂತಾನ್ ದೇಶದಿಂದ ಕೇವಲ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದ್ದು ಅದನ್ನು ಸಂಸ್ಕರಣೆ ಮಾಡಿದರೆ ಅದು ಬಹಳ ಕಡಿಮೆ ಪ್ರಮಾಣದ ಅಡಿಕೆಯಾಗಿದೆ. ಅಡಿಕೆ ಆಮದು ಬಗ್ಗೆ ಅಡಿಕೆ ಬೆಳೆಗಾರರಲ್ಲಿ ಯಾವುದೇ ಆತಂಕ, ಗಲಿಬಿಲಿ, ಗೊಂದಲ ಬೇಡ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next