Advertisement
ತಾಲೂಕಿನ ಹುಲ್ಲಹಳ್ಳಿಯಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ನಿರ್ಮಿಸಿದ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡದ ಲೋಕಾರ್ಪಣೆ ನಡೆಸಿ ಮಾತನಾಡಿ, ಕಲಿತವರೆಲ್ಲರೂ ವೈದೈಕೀಯ ಹಾಗೂ ತಂತ್ರಜ್ಞಾನದತ್ತಲೇ ಮುಖ ಮಾಡಿದರೆ ಸಮಾಜದ ಸರ್ವತೋಮುಖ ಬೆಳವಣಿಗೆ ಅಸಾಧ್ಯ ಎಂದ ಮುಖ್ಯಮಂತ್ರಿಗಳು ಸಮಾಜಕ್ಕೆ ಎಲ್ಲ ರಂಗಗಳು ಅವಶ್ಯಕತೆ ಇದ್ದು ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಆಸಕ್ತಿ ಬೆಳಸಿಕೊಳ್ಳಲಿ ಎಂದರು.
Related Articles
Advertisement
ಸಮಾರಂಭದ ಆಶೀರ್ವಚನ ನೀಡಿದ ಸುತ್ತೂರು ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರರು, ಗ್ರಾಮೀಣ ಭಾಗದ ಜನತೆ ಅಕnರ ವಂತರಾಗಬೇಕೆಂಬ ಹಿಂದಿನ ಶ್ರೀಗಳಾದ ರಾಜೇಂದ್ರ ಸ್ವಾಮಿಗಳ ಸಂಕಲ್ಪದಿಂದಾಗಿ ಈ ಊರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದನ್ನು ಸ್ಮರಿಸಿದರು. ಇಂದು ಬೇಕಾಗಿರುವುದು ಅಂಕದ ಶಿಕ್ಷಣವಲ್ಲ ಎಂದ ಶ್ರೀಗಳು ಕೌಶಲ್ಯ ಪೂರಿತವಾದ ಶಿಕ್ಷಣದ ಕಲಿಕೆಯತ್ತ ಎಲ್ಲರೂ ಲಕ್ಷವಹಿಸಬೇಕು ಎಂದು ಕರೆ ಇತ್ತರು .
ದೇವನೂರು ಮಠದ ಪೀಠಾದ್ಯಕ್ಷ ಮಹಂತ ಸ್ವಾಮಿಗಳು ಹಾಗೂ ಮಲ್ಲನ ಮೂಲೇ ಮಠಧ ಶ್ರೀ ಚೆನ್ನಬಸವ ಸ್ವಾಮಿಗಳು ಲೋಕೋಪಯೋಗಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ ಶೇಟ್, ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ಕಳಲೆ , ಧರ್ಮಸೇನ್. ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ,ಉಪಾಧ್ಯಕ್ಷ ಗೋವಿಂದರಾಜ್ ನಂದಕುಮಾರ ಮೂಂತಾದವರು ಉಪಸ್ಥಿತರಿದ್ದರು. ಶಾಸಕ ಧರ್ಮಸೇನ ಸಂಸ್ಥೆಯ ಪ್ರಯೋಗಾಲಯಕ್ಕೆ ಚಾಲನೆ ನೀಡಿದರೆ. ಸಂಸದ ಆರ್.ಧ್ರುವನಾರಾಯಣ ಗ್ರಂಥಾಲಯದ ಲೋಕಾರ್ಪಣೆ ಗೈದರು.
ಸಿಎಂ,ಸಚಿವರ ಹೊಗಳಿದ ಸುತ್ತುರು ಶ್ರೀ: ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿಶೇಷ ಮುತುವರ್ಜಿಯಿಂದಾಗಿ ನಂಜನಗೂಡು ಈಗ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಇಕ್ಕುತ್ತಿದೆ ಎಂದು ಕಾರ್ಯಕ್ರಮದಲ್ಲಿ ದೇಶಿಕೇಂದ್ರರು ಹೇಳಿದ್ದು ಮಾತ್ರ ಎಲ್ಲರ ಗಮನ ಸೆಳೆಯಿತು. ರಾಜ್ಯವನ್ನಾಳಿದ ಎಲ್ಲ ಮುಖ್ಯಮಂತ್ರಿಗಳು ಅಧಿಕಾರದ ಅವಧಿಯಲ್ಲಿ ಎಡರು ತೊಡರುಗಳನ್ನು ಎದುರಿಸುತ್ತಲೇ ಆಡಳಿತ ನಡೆಸುವಂತಾಗಿದ್ದರೆ ನಮ್ಮ ಸಿದ್ದರಾಮಯ್ಯ ಮಾತ್ರ ಸುಲಭವಾಗಿ ನಾಲ್ಕು ವರ್ಷ ರಾಜ್ಯದ ಆಡಳಿಮುಗಿಸಿ ಈಗ ಐದನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಎಂದು ಶ್ರೀಗಲ ನುಡಿದರು.
ವಿವಿ ಗಿಂತ ಮಿಗಿಲಾದದ್ದು ಶ್ರೀಮಠ: ಪ್ರಪಂಚದ ಯಾವುದೇ ವಿಶ್ವವಿದ್ಯಾಲಯಗಳನ್ನೂ ಮೀರಿ ಬೆಳದಿದೆ ನಮ್ಮ ಸುತ್ತೂರು ಶ್ರೀ ಮಠ ,ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರ್ಮಿಕ ,ಆದ್ಯಾತ್ಮಿಕ, ಶೈಕ್ಷಣಿಕ ,ಆರೋಗ್ಯ ಸೇರಿದಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶ್ರೀ ಮಠದ ಸೇವೆಯನ್ನು ಶ್ಲಾ ಸಿದರು.
ಶಿಕ್ಷಣ ಸಮಾಜದ ಆಸ್ತಿಯಾಗಬೇಕೆ ಹೊರತು ಅದು ಕೆಲವರ ಸ್ವತ್ತಾಗಬಾರು. ಸಮಾಜದಿಂದ ನನಗೆನು ಎನ್ನುವ ನಮ್ಮ, ಮನೋಭಾವ ಬದಲಾಗಿ ನನ್ನಿಂದ ಸಮಾಜಕ್ಕೇನು ಎಂದು ಆಲೋಚನೆ ಮಾಡುವ ಮನಸ್ಸು ಮೂಡಿ ಬಂದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಎಂಬುದನ್ನು ಎಲ್ಲರೂ ನೆನಪಿಡಿ ಎಂದರು. ಅಕ್ಷರ ಜ್ಞಾನ ಪಡೆದವರೆಲ್ಲರ ಮೇಲೂ ಸಮಾಜದ ಋಣವಿರುತ್ತದೆ ಅದನ್ನು ತೀರಿಸಲು ನಾವೆಲ್ಲ ಪ್ರಯತ್ನಿಸುವ ಮನೋಭಾವ ರೂಢಿಸಿಕೊಂಡಾಗ ಸಮಾಜ ತಾನೇ ತಾನಾಗಿ ಬದಲಾವಣೆಯಾಗುತ್ತದೆ ಎಂದು ಆಶಿಸಿದರು.