ಹುಮನಾಬಾದ: ಬ್ರಿಟಿಷ್ ಶಿಕ್ಷಣ ನೀತಿಯನ್ನು ಬದಲಾಯಿಸಿ ನಮ್ಮ ದೇಶಕ್ಕೆ ಅನುಗುವಾಗುವ ನೂತನ ಶಿಕ್ಷಣ ನೀತಿಯನ್ನು ಪ್ರಧಾನಿ ಮೋದಿ ದೇಶದಲ್ಲಿ ಜಾರಿ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಹುಡಗಿ ಗ್ರಾಮದ ನಿಸರ್ಗಾ ಭವನದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನಕ್ಕೆ ಶಿಕ್ಷಣ ಮುಖ್ಯ, ಜೀವನದಲ್ಲಿ ಗಳಿಸಿದ ಆಸ್ತಿ ಸಂಪತ್ತು ಬೇರೆಯವರ ಪಾಲಾಗಬಹುದು ಆದರೆ, ಕಲಿತ ಶಿಕ್ಷಣ ಮಾತ್ರ ಬೇರೆಯವರ ಪಾಲಾಗುವುದಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಸಾಧನೆ ಮಾಡಿದವರ ಇತಿಹಾಸ ಅರಿತುಕೊಳ್ಳಬೇಕು. ಸಾಧನೆ ಹಿಂದಿನ ರಹಸ್ಯಗಳು ಅರಿತುಕೊಳ್ಳುವ ಮೂಲಕ ಉನ್ನತ ಸಾಧನೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ತಂದೆ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಶಾಲಾ-ಕಾಲೇಜು ಮಕ್ಕಳಿಗಾಗಿ ಅನೇಕ ಯೋಜನೆಗಳು ರೂಪಿಸಿದರು. ವಿದ್ಯಾರ್ಥಿನಿಗಳಿಗಾಗಿ ಸೈಕಲ್ ವಿತರಣೆ, ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಸೇರಿದಂತೆ ಅನೇಕ ಯೋಜನೆಗಳು ನೀಡಿದ್ದಾರೆ ಎಂದು ಅವರು, ದೇಶದ ಪ್ರಧಾನಿಗಳು ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಾರತ ಸಾವಲಂಬನೆಯಾಗಿ ಬೆಳೆಯುತ್ತಿದೆ. ವಿಶ್ವದ ಪ್ರಮುಖ ದೇಶಗಳಲ್ಲಿ ಭಾರತದ ಹೆಸರು ಕೂಡ ಸೇರಿಕೊಂಡಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹುಡಗಿ ಹಿರೇಮಠದ ವೀರುಪಾಕ್ಷ ಶಿವಾಚಾರ್ಯರು, ಬಿಜೆಪಿ ಮುಖಂಡರಾದ ಸೋಮನಾಥ ಪಾಟೀಲ, ಬಸವಕಲ್ಯಾಣ, ಶಾಸಕ ಶರಣು ಸಲಗರ ಮಾತನಾಡಿದರು.
ವಿರಕ್ತಮಠದ ಚನ್ನಮಲ್ಲ ಶಿವಾಚಾರ್ಯರು , ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬಿಜೆಪಿ ಮುಖಂಡರಾದ ಬಾಬುವಾಲಿ, ಬಸವರಾಜ ಆರ್ಯ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಈಶ್ಚರ ಸಿಂಗ್ ಠಾಕೂರ್, ಡಾ। ಸಿದ್ದಲಿಂಗಪ್ಪ ಪಾಟೀಲ, ಚಂದು ಪಾಟೀಲ, ಪದ್ಮಾಕರ್ ಪಾಟೀಲ, ಸುಭಾಷ್ ಗಂಗಾ, ಪ್ರಭಾಕಾರ ನಾಗರಾಳೆ, ಮಹೇಶ ಪಾಲಂ, ಗುಂಡುರೆಡ್ಡಿ, ವಿಶ್ವನಾಥ ಪಾಟೀಲ, ನಾಗೇಶ ಕಲ್ಲೂರ್, ಎಸ್.ಟಿ ಮೋರ್ಚಾ ಮುಖಂಡ ದಯಾನಂದ ಮೇತ್ರೆ, ಪ್ರಕಾಶ ತಾಳಮಡಗಿ, ಸಂತೋಷ ಪೋತರಾಜ್, ಸಂಗಮೇಶ ಇಂದ್ರಾನಗರ್, ಗುಂಡಪ್ಪ, ರಾಜು ಭಂಡಾರಿ, ದೀಪಕ ಚಿದ್ರಿ, ದೀಲಿಪ ಸಾಟೆ, ರವಿ ಹೊಸಳ್ಳಿ, ರಮೇಶ ಕಲ್ಲೂರ್, ವಿರೇಶ ಸಜ್ಜನ್, ಅನೀಲ ಪಸರಗಿ, ಅಭಿಮನ್ಯು ನಿರಗುಡಿ, ಸಂತೋಷ ಪಾಟೀಲ, ಸುನೀಲ ಪಾಟೀಲ, ಸಂದೀಪ ಚಿರಸಾಗರ, ಮಲ್ಲಿಕಾರ್ಜುನ ಪ್ರಭಾ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.