Advertisement

ಫೀಸ್ ಕಡಿಮೆ ಮಾಡಲು ಮತ್ತೆ ರಸ್ತೆಗಿಳಿದ ವಿದ್ಯಾರ್ಥಿಗಳು: ಎಸಿ ಕಚೇರಿ ಎದುರು ಧರಣಿ

12:22 PM Apr 11, 2022 | Team Udayavani |

ಸೇಡಂ: ಡಿಗ್ರಿ ಕಾಲೇಜು ಪರೀಕ್ಷಾ ಶುಲ್ಕ 259 ಇದ್ದದ್ದನ್ನು 1475 ಕ್ಕೆ ಹೆಚ್ಚಳ ಮಾಡಿದ ಸರಕಾರದ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

Advertisement

ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯ ಎದುರುಗಡೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂರಾರು ಜನ ವಿದ್ಯಾರ್ಥಿಗಳು ಸುಡು ಬಿಸಿಲನ್ನೂ ಲೆಕ್ಕಿಸದೇ ನೆಲದ ಮೇಲೆ ಕುಳತು ಪ್ರತಿಭಟನಾ ಧರಣಿ ನಡೆಸಿದ್ದಾರೆ.

ಅನಿಲ ಬೆಲೆ, ತರಕಾರಿ, ಔಷಧ ಬೆಲೆಯ ಜೊತೆಗೆ ನಮ್ಮ ವಿದ್ಯೆಯ ಬೆಲೆಯೂ ಜಾಸ್ತಿಯಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ತೀವ್ರ ಬಿಸಿಲ ನಡುವೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯೋರ್ವಳು ಮೂರ್ಛೆ ಹೋದ ಘಟನೆ ಜರುಗಿದೆ.

Advertisement

ಸ್ಥಳಕ್ಕೆ ಪಿಎಸ್ಐ ಸೋಮಲಿಂಗ ಒಡೆಯರ್, ಉಪ ತಹಸೀಲ್ದಾರ ಪ್ರಕಾಶ ಕುದರಿ ಆಗಮಿಸಿದ್ದು, ಫೀಸ್ ಕಡಿಮೆ ಮಾಡಿದ್ದಲ್ಲಿ ಮಾತ್ರ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next