ದೊಡ್ಡಬಳ್ಳಾಪುರ: ಗ್ರಾಮಾಂತರ ಪ್ರದೇಶಗಳಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರಿತಪಿಸುತ್ತಿರುವ ಸಂಗತಿ ಹೆಚ್ಚಾಗಿದ್ದು, ಶಾಲೆ-ಕಾಲೇಜು ಸಮಯಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ತಾಲೂಕಿನ ತಿರುಮಗೊಂಡನಹಳ್ಳಿ ಬಳಿ ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಈ ಮಾರ್ಗದಲ್ಲಿ ಈ ಮುಂಚೆ ತೂಬಗೆರೆ-ದೊಡ್ಡಬಳ್ಳಾಪುರ ಹಾಗೂ ಮುದ್ದೇನ ಹಳ್ಳಿ-ದೊಡ್ಡಬಳ್ಳಾಪುರಕ್ಕೆ ಸಾರಿಗೆ ಸೌಲಭ್ಯ ಇತ್ತು. ಆದರೆ, ಕೋವಿಡ್ ಕಾರಣ ನಿಲ್ಲಿಸಲಾದ ಸಾರಿಗೆ ಮತ್ತೆ ಆರಂಭವಾಗಿದ್ದರೂ, ದೊಡ್ಡಬಳ್ಳಾಪುರ- ತೂಬಗೆರೆ ನಡುವೆ ಸಾರಿಗೆ ಸೇವೆ ಆರಂಭವಾಗದೆ ತೊಂದರೆಯಾಗುತ್ತಿದೆ.
ಇದನ್ನೂ ಓದಿ:- ಮಂಗಳೂರು : ಅಮಾನ್ಯ ಮಾಡಿದ 1.92 ಕೋಟಿ ರೂ.ಮೌಲ್ಯದ ನೋಟುಗಳ ವಶ
ಈ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೊಡ್ಡಬಳ್ಳಾಪುರಕ್ಕೆ ವ್ಯಾಸಂಗಕ್ಕಾಗಿ ಬರುವುದರಿಂದ 8.30 ಬರುವ ಮುದ್ದೇನಹಳ್ಳಿ-ದೊಡ್ಡಬಳ್ಳಾಪುರ ನಡುವೆ ಸಂಚರಿಸುವ ಸರ್ಕಾರಿ ಸಾರಿಗೆ ಬಸ್ ಒಂದರÇÉೆ ಪರದಾಡುತ್ತಾ ತೆರಳವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ: ಈ ಕುರಿತಂತೆ ಗುರುವಾರ ತಿರುಮಗೊಂಡನಹಳ್ಳಿ ಬಳಿ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದು, ವಿಷಯ ತಿಳಿದ ಡಿಪೋ ಅಧಿಕಾರಿಗಳು ಹೆಚ್ಚುವರಿ ಬಸ್ ಕಳಿಸಿದರು. ಆದರೆ, ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದು ಜಡಿ ಮಳೆಯಲ್ಲಿಯೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ತೂಬಗೆರೆ ಹಾಗೂ ತೂಬಗೆರೆ ಹೋಬಳಿ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಡಿಪೋ ವ್ಯವಸ್ಥಾಪಕರು ಭರವಸೆ ನೀಡಿದ್ದಾರೆ.