ಬೀಗ ಜಡಿದು ದಿಢೀರ್ ಪ್ರತಿಭಟಿಸಿದ ಘಟನೆ ತಾಲೂಕಿನ ಹೊಸಹಳ್ಳಿ ಸಮೀಪದ ಗಡಿ ಗ್ರಾಮ ಕೆಂಚಮಲ್ಲನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
Advertisement
ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ ಮಾತನಾಡಿ ಕಳೆದ 6 ವರ್ಷಗಳಿಂದ ನಮ್ಮ ಶಾಲೆಗೆ ಸರಿಯಾಗಿ ಶಿಕ್ಷಕರನ್ನು ನೇಮಿಸುತ್ತಿಲ್ಲ. ಕನ್ನಡ, ಮತ್ತು ಗಣಿತ ಶಿಕ್ಷಕರನ್ನು ಹೊರತುಪಡಿಸಿ, ಇಂಗ್ಲಿಷ್, ಹಿಂದಿ, ವಿಜ್ಞಾನ, ಸಮಾಜ ಶಿಕ್ಷಕರನ್ನು ಕೂಡಲೇ ನೇಮಿಸಬೇಕು. ಗಡಿ ಗ್ರಾಮವಾದ್ದರಿಂದ ನಮ್ಮ ಊರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೂ ಮುಖ್ಯ ಶಿಕ್ಷಕರ ವರ್ಗಾವಣೆ ತಡೆಯಬೇಕೆಂದರು.
ಇದರ ಸಂಬಂಧವಾಗಿ ತಾಲೂಕು ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ದೂರವಾಣಿ ಮಾಡಿ
ಬೇಡಿಕೊಂಡರೂ ಅಧಿಕಾರಿಗಳು ಹಾರಿಕೆ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದು, ನಮ್ಮ ಕೆಂಚಮ್ಮನಹಳ್ಳಿ ಶಾಲೆಗೆ ಯಂಬಳಿ
ವಡ್ಡರಹಟ್ಟಿ, ಪಿಚ್ಚಾರಹಟ್ಟಿ, ಮಾಲೂರು ಸೇರಿದಂತೆ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀಳಲಿದೆ ಎಂದರು. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಹೋದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು. ಪಾಲಕರ ಮನವೊಲಿಕೆ: ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವದನ್ನು ತಿಳಿದ ಶಾಲೆಗೆ ಅಗಮಿಸಿದ ಪಾಲಕರು ನಿಮ್ಮ ಜತೆ ನಾವಿದ್ದೇವೆ. ಆದರೆ, ಶಾಲೆ ಬೀಗ ಹಾಕುವುದು ಬೇಡ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದುಕೊಂಡರು.
Related Articles
Advertisement
ಕೆಂಚಮ್ಮಲ್ಲನಹಳ್ಳಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿರುವ ಮಾಹಿತಿ ಗೊತ್ತಿಲ್ಲ. ಗಡಿಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಾಯಂ ಶಿಕ್ಷಕರ ನೇಮಕವಾಗುವತನಕ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳಲಾಗುವುದು. ಎ.ಶ್ರೀಧರನ್, ಡಿಡಿಪಿಐ