Advertisement

ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ರೇಷ್ಮೆ‌ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

02:07 PM Aug 07, 2021 | Team Udayavani |

ಚಿಂತಾಮಣಿ : ಕೊರೋನಾ ಹಿನ್ನಲೆಯಲ್ಲಿ ಹಲವು ತಿಂಗಳುಗಳಿಂದ ರೇಷ್ಮೆ ಕೃಷಿ ವಿದ್ಯಾರ್ಥಿಗಳಿಗೆ ಅನ್ ಲೈನ್ ಮೂಲಕ ಪಾಠ ಪ್ರವಚನಗಳನ್ನು ಮಾಡುತ್ತಿದ್ದು ಇದೀಗ ಇದಕ್ಕಿದ್ದಂತೆ ಬಾಹ್ಯ ಪರೀಕ್ಷೆಗಳನ್ನು ನಡೆಸಲು‌ ಮುಂದಾಗಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಲಿದ್ದು , ಬಾಹ್ಯ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿ ರೇಷ್ಮೆ‌ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಚಿಂತಾಮಣಿ‌ ತಾಲೂಕು ಕುರುಬೂರು ರೇಷ್ಮೆ‌ಕೃಷಿ ವಿಶ್ವ ವಿದ್ಯಾಲಯದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬಹುತೇಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಾಗಿದ್ದು. ಕಳೆದ ಎರಡು ವರ್ಷಗಳಿಂದ ಕೋರೋನಾ ಮೊದಲನೇ ಮತ್ತು ಎರಡನೇ ಅಲೆ ಹಿನ್ನಲೆಯಲ್ಲಿ ಎರಡು ಬಾರಿ ಲಾಕ್ ಡೌನ್ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳ ಮೂಲಕ‌ ಪಾಠ ಪ್ರವಚನಗಳನ್ನು‌ ಮಾಡಲಾಗುತ್ತಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ಮೊಬೈಲ್ ಕೊರತೆ, ಇಂಟರ್ ನೆಟ್ ಹಾಗೂ ವಿದ್ಯುತ್ ಸಮಸ್ಯೆಯಿಂದ ಅನ್ ಲೈನ್ ತರಗತಿಗಳನ್ನು ಸಮರ್ಪಕವಾಗಿ ಅಲಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಅದರೆ ಇದೀಗ ಒಂದು ತಿಂಗಳಿನಿಂದ ಮುಂದಿನ ಸೆಮಿಸ್ಟರ್ ಆರಂಭವಾಗಿರುವುದರಿಂದ ಹಿಂದಿನ ಸೆಮಿಸ್ಟರ್ ಹಾಗೂ ಪ್ರಸುತ್ತ ಸೆಮಿಸ್ಟರನ್ನು ಏಕಕಾಲದಲ್ಲಿ ಕೇಂದ್ರೀಕರಿಸುವುದು ತುಂಬಾ ಕಷ್ಟಕರವಾಗಿದ್ದು, ತಿಂಗಳ ಕಾಲ‌ ನಿರಂತರ ಅದ್ಯಯನ ಮತ್ತು ಫೆಬ್ರವರಿಯಲ್ಲಿ ನಡೆಸಿದ ಪರೀಕ್ಷೆಗಳಿಂದ ಖಿನ್ನತೆಗೆ ಒಳಗಾಗಿದ್ದು ಇಂತಹ‌ ಸಂದರ್ಭದಲ್ಲಿ ಬಾಹ್ಯ ಪರೀಕ್ಷೆಗಳನ್ನು ನಡೆಸುವುದು ಸಮಂಜಸವಲ್ಲ, ಕೂಡಲೆ ಮುಂಬರುವ ಬಾಹ್ಯ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ರೇಷ್ಮೆ ಹಾಗೂ ಕೃಷಿ ವಿದ್ಯಾರ್ಥಿಗಳು ಕುರುಬೂರು ರೇಷ್ಮೆ ಕೃಷಿ ವಿಶ್ವ ವಿದ್ಯಾಲಯಲ್ಲಿ ಪ್ರತಿಭಟನೆ ನಡೆಸಿ ರೇಷ್ಮೆ ಕೃಷಿ ವಿಶ್ವ ವಿದ್ಯಾಲಯದ ಡಿನ್ ವೆಂಕಟರವಣಪ್ಪವರಿಗೆ ಬಾಹ್ಯ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.

ಇದನ್ನೂ ಓದಿ :ಸಿಎಂ ಬೊಮ್ಮಾಯಿ ಶಾಸಕರ ಪ್ರತಿಭೆಗೆ ತಕ್ಕಂತೆ ಸಚಿವ ಸ್ಥಾನ ನೀಡಿದ್ದಾರೆ: ಈಶ್ವರಪ್ಪ

ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ವಿಶ್ವ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next