Advertisement
ಯಾವಾಗಲೂ ಪೈಂಟಿಂಗ್ಸ್, ಗ್ರೀಟಿಂಗ್, ಕ್ಲೇಮಾಡೆಲಿಂಗ್, ಕೊಲ್ಯಾಜ್, ಮಾಸ್ಕ್, ಪೇಪರ್ ಕ್ರಾಫ್ಟ್, ಎಂಬೋಸಿಂಗ್, ಗೂಡುದೀಪ ರಚನೆ, ಎಂಬ್ರಾಯಡರಿ ಇತ್ಯಾದಿ ರಚನೆಗಳನ್ನು ಮಾಡಿ ತರಬೇತಿಗೊಂಡಿದ್ದ ಮಕ್ಕಳ ಮನಸ್ಸಿಗೆ ತರಕಾರಿಗಳಿಂದ ಆಭರಣ ರಚನೆಯ ಹೊಸ ಶಿಬಿರ ಬಹಳಷ್ಟು ಮುದಕೊಟ್ಟಿತು. ಕ್ರಾಫ್ಟ್ ಶಿಕ್ಷಕಿ ಪದ್ಮಾ ಆರೂರು ಸಂಪನ್ಮೂಲ ವ್ಯಕ್ತಿಯಾಗಿ ತರಕಾರಿಯಿಂದ ಆಭರಣ ರಚಿಸುವ ಬಗ್ಗೆ ಮಕ್ಕಳಿಗೆ ಸಾಕಷ್ಟು ತರಬೇತಿ ನೀಡಿದರು. ಚಿತ್ರಕಲಾ ಶಿಕ್ಷಕರೂ ಮಾರ್ಗದರ್ಶನವಿತ್ತರು. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಆಕರ್ಷಕ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ನಿತ್ಯೋಪಯೋಗಿ ತರಕಾರಿಗಳಾದ ಬೆಂಡೆ, ತೊಂಡೆ, ಅಲಸಂಡೆ, ಪಡುವಲ, ಕ್ಯಾರೆಟ್, ಮೂಲಂಗಿ, ಬಟಾಟೆ, ನೀರುಳ್ಳಿ, ಬೆಳ್ಳುಳ್ಳಿಗಳನ್ನು ಬಳಸಿಕೊಂಡು ಅವುಗಳ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ತ್ರಿಕೋನ, ಚೌಕ, ಅಂಡಾಕಾರವಾಗಿ ಕತ್ತರಿಸಿ ಕಾಗದದ ಮೇಲೆ ಅರ್ಧವೃತ್ತಾಕಾರವಾಗಿ ಅಂಟಿಸಿ ತಾವು ಬಯಸುವ ಆಭರಣದ ರೂಪವನ್ನು ರಚಿಸಿದರು.
Advertisement
ಮಕ್ಕಳ ಕೈಯ್ಯಲ್ಲಿ ಆಭರಣವಾದ ತರಕಾರಿ
06:00 AM Aug 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.