Advertisement

ವಿದ್ಯಾರ್ಥಿಗಳೇ ಪಾಸು, ಫೇಲು ಮುಖ್ಯವಲ್ಲ; ಜೀವನ ಮುಖ್ಯ

01:53 PM May 11, 2017 | |

ಇಂದು ಪಿಯುಸಿ, ನಾಳೆ  ಎಸೆಸ್ಸೆಲ್ಸಿ ಫ‌ಲಿತಾಂಶ
ಉಡುಪಿ: ಪಿಯುಸಿ,ಎಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕೆಲವು ದಿನಗಳಿಂದ ಇದ್ದ ದುಗುಡ ಫ‌ಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆ ಹೆಚ್ಚುತ್ತಿದೆ. ಪಿಯುಸಿ ಫ‌ಲಿತಾಂಶ ಮೇ 11ರಂದು ವೆಬ್‌ಸೈಟ್‌ನಲ್ಲಿ, ಮೇ 12ರಂದು ಆಯಾ ಕಾಲೇಜುಗಳಲ್ಲಿ, ಎಸೆಸ್ಸೆಲ್ಸಿ ಫ‌ಲಿತಾಂಶ ಮೇ 12ರಂದು ವೆಬ್‌ ಸೈಟ್‌ನಲ್ಲಿ, ಮೇ 13 ರಂದು ಶಾಲೆಗಳಲ್ಲಿ ಪ್ರಕಟವಾಗಲಿವೆ.

Advertisement

ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗಾಗಲೇ ಪೋಷಕರಲ್ಲಿ ತಾವು ಉತ್ತರಿಸಿದ ಮಟ್ಟವನ್ನು ಹೇಳಿ ಕೊಂಡಿರುತ್ತಾರೆ. ಈಗಂತೂ ಪ್ರಚಾರ ಎತ್ತ ಓಡುತ್ತಿವೆಯೋ ಅಲ್ಲಿಗೇ ಎಲ್ಲರ ಚಿತ್ತವೂ ಓಡುತ್ತಿದೆ. ಪ್ರಚಾರವನ್ನು ಎತ್ತ ಓಡಿಸಬೇಕೆಂದು ಆಯಾ ಲಾಬಿಗಳಿಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ವಿದ್ಯಾರ್ಥಿಗಳೂ, ಪೋಷಕರೂ ಯಾವುದೋ ರಿಮೋಟ್‌ ಕಂಟ್ರೋಲ್‌ನಿಂದಾಗಿ ಯಾವುದೋ ಕಡೆ ಗೊತ್ತಿಲ್ಲದೆ ಓಡುತ್ತಿರುವುದು ಸತ್ಯ. ಇಂತಹಸಂದರ್ಭ ತಮ್ಮ ಓದಿನ ಕಾರಣದಿಂದಲೋ, ಅಸೌಖ್ಯದ ಕಾರಣದಿಂದಲೋ ಫ‌ಲಿತಾಂಶದಲ್ಲಿ ಏರುಪೇರಾದರೆ ಆಕಾಶವೇ ಕಳಚಿ ಬಿದ್ದಂತೆ ವ್ಯವಹರಿಸುವುದು ಎಲ್ಲ ಕಡೆ ಕಂಡು ಬರುತ್ತಿದೆ. ಇದು ಅನೇಕ ಅನರ್ಥ ಗಳಿಗೆ ಕಾರಣವಾಗುವುದು ಮಾಧ್ಯಮಗಳಲ್ಲಿ ಕಂಡುಬರುತ್ತಿದೆ.
 
ಪರ್ಯಾಯ ಮಾರ್ಗ ತಿಳಿಸಿ
ವಿದ್ಯಾರ್ಥಿಗಳು ಪೋಷಕರಿಗೆ ತಮ್ಮ ಇತಿಮಿತಿಗಳನ್ನು ಹೇಳಿರುತ್ತಾರೆ. ಫ‌ಲಿತಾಂಶದಲ್ಲಿ ಹೆಚ್ಚು ಕಡಿಮೆಯಾದರೂ ಎಗರಾಡದೆ ಮುಂದಿನ ಪರ್ಯಾಯ ಪ್ರಯತ್ನ ಮಾಡಿಸಲು ತಿಳಿಸಬೇಕು. ಈಗ ಹಿಂದಿನಂತಲ್ಲ. ಒಂದಲ್ಲದಿದ್ದರೆ ಇನ್ನೊಂದು ಅವಕಾಶಗಳಿರುತ್ತವೆ. ಪಾಸು, ಫೇಲು ಮುಖ್ಯವಲ್ಲ, ಜೀವನ ಮುಖ್ಯ ಎಂಬ ಕಿವಿಮಾತು ಡಾ| ಪಿ.ವಿ. ಭಂಡಾರಿಯವರದು.

ಮಾನದಂಡದಲ್ಲೇ ದೋಷ
ಇತ್ತೀಚೆಗಷ್ಟೆ ಉಪ್ಪೂರಿನಲ್ಲಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ (ಜಿಟಿಟಿಸಿ) ಕಟ್ಟಡಕ್ಕೆ ಶಿಲಾನ್ಯಾಸ ನಡೆಯಿತು. ಇದರ ವೈಶಿಷ್ಟ ವೆಂದರೆ ಎಸೆಸೆಲ್ಸಿಯಲ್ಲಿ ಪಾಸಾಗಿ (ಗಣಿತ, ವಿಜ್ಞಾನ ದಲ್ಲಿ ಕನಿಷ್ಠ 40 ಅಂಕ ಬೇಕು) ಈ ಕೋರ್ಸ್‌ ಮಾಡಿದರೆ ಶೇ. 100 ಪ್ಲೇಸೆ¾ಂಟ್‌ ಖಾತ್ರಿ. ಇವರೆಲ್ಲ ನಾವು ಕಾಣುವ ಬುದ್ಧಿವಂತಿಕೆ ಮಾನ ದಂಡದವರಲ್ಲ. ಬುದ್ಧಿವಂತಿಕೆ ಮಾನ ದಂಡದವರು ಶೇ. 100 ಪ್ಲೇಸೆಟ್‌ನಲ್ಲಿದ್ದಾರೆಯೆ ಎಂಬ ಕುರಿತು ಯೋಚಿಸಬೇಕಾಗುತ್ತದೆ. ಉಪ್ಪೂರಿನಲ್ಲಿ ಕಟ್ಟಡ ಡಿಸೆಂಬರ್‌ನಲ್ಲಿ ಮುಗಿದು 2018ರಸಾಲಿನಲ್ಲಿ ಕೋರ್ಸ್‌ ಆರಂಭವಾಗುತ್ತದೆ. ಆದರೆ ಇದಕ್ಕೂ ನಿರಾಶೆ ಪಡಬೇಕಾಗಿಲ್ಲ. ಮಂಗಳೂರು ಸೇರಿದಂತೆ ರಾಜ್ಯದ 22 ಕಡೆ ಜಿಟಿಟಿಸಿ ಕೋರ್ಸ್‌ಗಳಿವೆ. ಮಂಗಳೂರಿನಲ್ಲಿ ಟೂಲ್‌ ಮತ್ತು ಡೈ ಮೇಕಿಂಗ್‌, ಪ್ರಿಸಿಶನ್‌ ಮ್ಯಾನ್ಯುಫ್ಯಾಕ್ಚರಿಂಗ್‌ ಎರಡು ಮುಖ್ಯ ಕೋರ್ಸ್‌ಗಳು, ವಿವಿಧ ಸರಕಾರಿ ಇಲಾಖೆಗಳು ಕೊಡುವ ಅಲ್ಪಾವಧಿ ಕೋರ್ಸ್‌ಗಳಿವೆ. ಹೆಚ್ಚಿನ ಮಾಹಿತಿಗಾಗಿ  www.karnataka.gov.in/gttc/pages/home ವೆಬ್‌ಸೈಟ್‌ ಅಥವಾ ಗೂಗಲ್‌ನಲ್ಲಿ ಜಿಟಿಟಿಸಿ ಹಾಕಿ ನೋಡಬಹುದು.

ಕೇವಲ ಇಷ್ಟೇ ಅಲ್ಲ. ಎನಿ ಮೇಶನ್‌,ಐಟಿಐ, ಪಾಲಿಟೆಕ್ನಿಕ್‌ ಡಿಪ್ಲೊಮಾ ಇತ್ಯಾದಿ ಕೋರ್ಸ್‌ಗಳಿವೆ.ಪಾಲಿಟೆಕ್ನಿಕ್‌ ಮಾಡಿದವರಿಗೆ ಬಿಇಯಲ್ಲಿ ಒಂದು ವರ್ಷ ರಿಯಾಯಿತಿ ಇದೆ. ಇಂತಹ ಅನೇಕ ಮಾಹಿತಿಗಳನ್ನು ಪಡೆದು ಯಾವುದರಲ್ಲಿ ಪ್ಲೇಸೆಂಟ್‌ ಅವಕಾಶಗಳು ಹೆಚ್ಚಿವೆಯೋ ಆ ಕೋರ್ಸ್‌ಗಳನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು, ಪೋಷಕರು ಚಿಂತನೆ ನಡೆಸಬೇಕೆ ವಿನಾ ಎಲ್ಲರೂ ಓಡುತ್ತಿರುವಂತೆ ಓಡುವುದು ಜಾಣತನವಲ್ಲ. 

ಬರೆಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆ ಮುಖ್ಯ ಪ್ರಸಿದ್ಧ ಕವಿ ಕುವೆಂಪು ಅವರು ಮೈಸೂರು ವಿ.ವಿ. ಕುಲಪತಿಯಾಗಿದ್ದಾಗ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಇಂಗ್ಲಿಷ್‌ ಭಾಷೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಪ್ರಾಧ್ಯಾಪಕರು ಕುವೆಂಪು ಅವರಿಗೆ ತಂದು ತೋರಿಸುತ್ತಾರೆ. ಆಗ ಕುವೆಂಪು ಅವರು “ಯಾವ ಮುಟಾuಳ ಇಷ್ಟು ಮಾರ್ಕು ಕೊಟ್ಟದ್ದು. ನಾನಾಗಿದ್ದರೆ… ಇಷ್ಟೇ ಮಾರ್ಕು ಕೊಡುತ್ತಿದ್ದೆ’ ಎಂದರು. ಕರ್ನಾಟಕವನ್ನು ಜಗತ್ತಿಗೆ ಪರಿಚಯಿಸಿದ ಡಾ| ಶಿವರಾಮ ಕಾರಂತರಾಗಲೀ, ಪೂರ್ಣಚಂದ್ರ ತೇಜಸ್ವಿಯವರಾಗಲೀ ಕೊಠಡಿಯ, ತರಗತಿಯ ಕಲಿಕೆಗೆ ಮಹತ್ವ ಕೊಟ್ಟವ ರಲ್ಲ. ಬರೆಯುವ ಪರೀಕ್ಷೆಗಿಂತ ಬದುಕುವ ಪರೀಕ್ಷೆ ಬಹಳ ಮುಖ್ಯ ಎನ್ನುತ್ತಿದ್ದರು. 
– ಡಾ| ನರೇಂದ್ರ ರೈ ದೇರ್ಲ, ಪ್ರಾಧ್ಯಾಪಕರು,  ಡಾ| ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ, ದ.ಕ.

Advertisement

– ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next